Sanju weds Geetha 2: ಸಂಜು ವೆಡ್ಸ್‌ ಗೀತಾ-2, ರಚಿತಾ-ಕಿಟ್ಟಿ ಮುತ್ತಿನ ಸೀನ್‌ ವೈರಲ್‌, ಕಾಲು ಹಣೆಗೆ ಮುತ್ತಿಟ್ಟ ಸಂಜು!

Sandalwood news Sanju weds Geetha 2 movie shooting rachita Ram and Srinagar Kitty kiss scene viral

Sanju weds Geetha 2: ಸಂಜು ವೆಡ್ಸ್‌ ಗೀತಾ -2 ಸಿನಿಮಾದಲ್ಲಿ ಈ ಬಾರಿ ಮೋಹಕ ತಾರೆ ರಮ್ಯಾ ಬದಲಿಗೆ ಈ ಬಾರಿ ರಚಿತಾ ರಾಮ್‌ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ರಚಿತಾ ರಾಮ್‌ ಶ್ರೀನಗರ ಕಿಟ್ಟಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳ ಎದೆಬಡಿತ ಹೆಚ್ಚಿಸೋಕೆ ಹೊಸ ಫೋಟೋಶೂಟ್‌ ಕೂಡಾ ಮಾಡಿದ್ದು, ಈಗ ಅದು ಭಾರೀ ವೈರಲ್‌ ಆಗಿದೆ.

ಸಂಜು ವೆಡ್ಸ್‌ ಗೀತಾ 2(Sanju weds Geetha 2) ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನಾಗಶೇಖರ್‌ ಪ್ರೊಡಕ್ಷನ್‌ ನಲ್ಲಿ ನಿರ್ಮಾಣವಾಗಲಿದೆ ಈ ಸಿನಿಮಾ. ಗೀತಾ ಕಾಲಿಗೆ ಕಿಟ್ಟಿ ಮುತ್ತು ನೀಡುವುದು ನಿಜಕ್ಕೂ ಸಿನಿರಸಿಕರ ಮನ ಗೆದ್ದಿದೆ. ಈ ಸಿನಿಮಾಕ್ಕೆ ರಚಿತಾ ರಾಮ್‌ ಸೂಟ್‌ ಆಗಿಲ್ಲ. ಇದೊಂದು ಚಿತ್ರಕ್ಕೆ ಮೈನಸ್‌ ಪಾಯಿಂಟ್‌, ಬೇರೆಯವರನ್ನು ಹಾಕಿದ್ದರೆ ಸಿನಿಮಾ ಸೂಪರ್‌ ಹಿಟ್‌ ಆಗುವ ಸಾಧ್ಯತೆಗಳಿದೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವು ಜೋಡಿ ಚೆನ್ನಾಗಿದೆ ಎಂದು ಕೂಡಾ ಕಮೆಂಟ್‌ ಮಾಡಿದ್ದಾರೆ.

ರಮ್ಯಾ ಈ ಪಾತ್ರ ಮಾಡಲು ಯಾಕೆ ಒಪ್ಪಿಲ್ಲ? ಕಾರಣವೇನು ? ಎಂಬುವುದನ್ನು ಕೂಡಾ ನಾಗಶೇಖರ್‌ ತಿಳಿಸಿದ್ದಾರೆ. ರಮ್ಯಾ ಅವರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಿದ್ದು, ಆದರೆ ಅವರು ಆ ಸಂದರ್ಭದಲ್ಲಿ ಫಾರಿನ್‌ನಲ್ಲಿದ್ದರು. ಪ್ರೆಸೆಂಟ್ಸ್‌ನಲ್ಲಿ ರಮ್ಯಾ ಹೆಸರು ಇಡಬೇಕು, ಸಂಜು ವೆಡ್ಸ್‌ ಗೀತಾ ಸಿನಿಮಾ ಇಷ್ಟು ವರ್ಷ ಉಳಿದುಕೊಳ್ಳಲು ಅದಕ್ಕೆ ರಮ್ಯಾ ಮತ್ತು ಅವರ ತಂದೆ ಕಾರಣ ಎಂದು ಹಾಗಾಗಿ ಪ್ರೆಸೆಂಟ್ಸ್‌ನಲ್ಲಿರುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಟೋಗೆ ಡಿಕ್ಕಿ ಹೊಡೆದ ಲಾರಿ! ಜೇನು ಮಾರಲೆಂದು ಹೋಗುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು

Leave A Reply

Your email address will not be published.