Uttar Kannada: ಪ್ಯಾಂಟ್‌ ಬಟನ್‌ ನುಂಗಿದ ಎರಡು ತಿಂಗಳ ಹಸುಳೆ! ಆಸ್ಪತ್ರೆಗೆ ದಾಖಲಾದ ಮಗು, ಮುಂದೇನಾಯ್ತು ಗೊತ್ತೇ?

Uttar Kannada news Two months old baby swallowed the pants button in bhatkal

Uttar Kannada: ಉತ್ತರ ಕನ್ನಡ (Uttar Kannada) ಜಿಲ್ಲೆ ಭಟ್ಕಳ ನಗರದ ರಂಗೀಕಟ್ಟೆ ಎಂಬಲ್ಲಿ ಎರಡು ತಿಂಗಳ ಮಗುವೊಂದು ಚಾಕಲೇಟ್‌ ಎಂದು ಪ್ಯಾಂಟಿನ ಬಟನನ್ನು ನುಂಗಿದ ಹಸುಳೆಯೊಂದು ವೈದ್ಯರ ಪ್ರಯತ್ನದಿಂದ ಮಗುವಿನ ಪ್ರಾಣ ಉಳಿದಿದೆ.

ಕಾರ್ಮಿಕ ಕಮಲ ಕಿಶೋರ ಅವರ ಪುತ್ರಿ ಅಮೃತ (2ತಿಂಗಳು) ಬಟನ್‌ ನುಂಗಿದ್ದ ಮಗು. 2 ವರ್ಷದ ಇನ್ನೊಂದು ಮಗು ಆಟವಾಡುತ್ತಾ ಚಾಕಲೇಟ್‌ ಎಂದು ಹೇಳಿ ಪ್ಯಾಂಟಿನ ಬಟನನ್ನು ಅಮೃತಾಳಿಗೆ ನೀಡಿದೆ.

ಅಮೃತಾ ಏನೂ ತಿಳಿಯದೆ ಬಟನನ್ನು ನುಂಗಿ ಉಸಿರಾಡಲು ಕಷ್ಟಪಟ್ಟು ಒದ್ದಾಡಿದೆ. ಕೂಡಲೇ ಪೋಷಕರು ಮಗುವನ್ನು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರ ದೆಸೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಭಟ್ಕರ ಸರಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಸತೀಶ ನೃತೃತ್ವದ ತಂಡವು ಕೊಳವೆಯ ಮೂಲಕ ಬಟನನ್ನು ಹೊರತೆಗೆದಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kodi Mutt: ಕೋಡಿಶ್ರೀ ಭೇಟಿಯಾದ ಸಚಿವರು! ಶ್ರೀಗಳು ಹೇಳಿದ್ದೇನು ಗೊತ್ತೇ?

Leave A Reply

Your email address will not be published.