Fine For Postmaster: ಲೇಟ್ ಆಗಿ ಪೋಸ್ಟ್ ತಲುಪಿಸಿ ಕೆಲಸ ತಪ್ಪಿಸಿದ ಪೋಸ್ಟ್ ಮ್ಯಾನ್! ಗ್ರಾಹಕ ನ್ಯಾಯಾಲಯ ಹಾಕಿದ ದಂಡ ಕೇಳಿದ್ರೆ ಶಾಕ್ ಆಗ್ತೀರಾ !

Fine for postmaster because The postman missed work by delivering the job interview post late

Fine For Postmaster: ಖಾಸಗಿ ಬ್ಯಾಂಕ್ ಮ್ಯಾನೇಜರ್ ಹುದ್ದೆಯ ಸಂದರ್ಶನಕ್ಕೆ ಸಂಬಂಧಿಸಿದ ಪತ್ರ ತಡವಾಗಿ ತಲುಪಿಸಿದ ಹಿನ್ನೆಲೆ ಉದ್ಯೋಗವಕಾಶದಿಂದ ವಂಚಿತರಾದ ವ್ಯಕ್ತಿಯೊಬ್ಬರು ಅಂಚೆ ಇಲಾಖೆಯ ತಪ್ಪನ್ನು ಪ್ರಶ್ನಿಸಿ ಪೋಸ್ಟ್ ಮಾಸ್ಟರ್ಗೆ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಈ ಕುರಿತು ಗ್ರಾಹಕ ವ್ಯಾಜ್ಯ ಆಯೋಗ ಪೋಸ್ಟ್ ಮಾಸ್ಟರ್ ಮಾಡಿದ ತಪ್ಪಿಗೆ ಭಾರಿ ಮೊತ್ತದ ಪರಿಹಾರ(Fine For Postmaster)  ನೀಡುವಂತೆ ತೀರ್ಪು ಪ್ರಕಟಿಸಿದೆ.

ಕೊಪ್ಪಳ ಜಿಲ್ಲೆಯ 32ರ ಹರೆಯದ ವ್ಯಕ್ತಿಯೊಬ್ಬರು ಖಾಸಗಿ ಬ್ಯಾಂಕ್ ಒಂದರ ಮ್ಯಾನೇಜರ್ ಹುದ್ದೆಗೆ( Bank Manager Post)ಸಂಬಂಧಿಸಿದಂತೆ 2014ರ ಜುಲೈನಲ್ಲಿ ಪರೀಕ್ಷೆಯನ್ನು ಬರೆದಿದ್ದರಂತೆ. ಈ ವೇಳೆ, ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗೆ ಮೂಲ ಅಂಕಪಟ್ಟಿ ಮತ್ತು ಇತರೆ ದಾಖಲೆಯನ್ನು ಆಗಸ್ಟ್.13ರೊಳಗೆ ಸಲ್ಲಿಕೆ ಮಾಡಲು ಬ್ಯಾಂಕ್ 2014ರ ಜುಲೈ 24ರಂದು ಪತ್ರವನ್ನು ಭಾರತೀಯ ಅಂಚೆಯ ಮೂಲಕ ಪತ್ರ ಕಳುಹಿಸಿದೆ. ಆದರೆ ಈ ಪತ್ರವು ಅಭ್ಯರ್ಥಿಗೆ 15 ದಿನಗಳ ಬಳಿಕ ಅಂದರೆ ಆಗಸ್ಟ್ 28 ರಂದು ತಲುಪಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಪತ್ರ ತಡವಾಗಿ ಕೈ ಸೇರಿದ ಹಿನ್ನೆಲೆ ಮ್ಯಾನೇಜರ್ ಹುದ್ದೆಯ ಸುವರ್ಣ ಅವಕಾಶ ಕೈ ತಪ್ಪಿ ಹೋಗಿದ್ದು, ಭಾರತೀಯ ಅಂಚೆಯಲ್ಲಿ (Indian Post Office)ಸೇವೆಯ ನ್ಯೂನ್ಯತೆಯ ಪರಿಣಾಮದಿಂದಾಗಿ ಬ್ಯಾಂಕ್ ಸಂದರ್ಶನ ಕೈ ತಪ್ಪಿ ಹೋಗಿರುವುದನ್ನು ಪ್ರಶ್ನಿಸಿ ವ್ಯಕ್ತಿಯು ಬಸವಭವನದಲ್ಲಿರುವ ಬೆಂಗಳೂರಿನ ರಾಜ್ಯ ಗ್ರಾಹಕ ವ್ಯಾಜ್ಯ ಆಯೋಗಕ್ಕೆ 2015ರಲ್ಲಿ ದೂರು ನೀಡಿ ವಾದವನ್ನು ಮಂಡಿಸಿದ್ದರು.

ಗ್ರಾಹಕ ಆಯೋಗ, ಎರಡು ಕಡೆಯ ವಾದಗಳನ್ನು ಆಲಿಸಿದ ನಂತರ ಗ್ರಾಹಕ ಸೇವೆಯಲ್ಲಿ ವ್ಯತ್ಯಾಸವಾಗಿರುವುದನ್ನು ಪ್ರಶ್ನೆ ಮಾಡಿದೆ. ಇದಕ್ಕೆ ಅಂಚೆ ಇಲಾಖೆ ತನ್ನ ವಾದ ಮಂಡಿಸಿದ್ದು, ಪತ್ರದಲ್ಲಿನ ವಿಳಾಸದಲ್ಲಿ (Address)ವ್ಯತ್ಯಾಸದಿಂದ ನಿರ್ದಿಷ್ಟ ಅವಧಿಯಲ್ಲಿ ಪತ್ರ ತಲುಪಿಸಲು ಸಾಧ್ಯವಾಗದೆ ಇರುವ ಬಗ್ಗೆ ತಿಳಿಸಿದೆ. ಇದರ ಜೊತೆಗೆ, ಕರ್ತವ್ಯ ನಿರ್ವಹಿಸುತ್ತಿದ್ದ ಪೋಸ್ಟ್ ಮಾಸ್ಟರ್ ಈ ಸಂದರ್ಭದಲ್ಲಿ ಇಲಾಖಾ ತರಬೇತಿಯಲ್ಲಿದ್ದರು. ಈ ಸಂದರ್ಭ ಹೊಸದಾಗಿ ತಾತ್ಕಾಲಿಕವಾಗಿ ಕರ್ತವ್ಯ ನಿಯೋಜನೆಗೊಂಡವರಿಗೆ ವಿಳಾಸದಲ್ಲಿನ ವ್ಯತ್ಯಾಸದಿಂದ ನಿರ್ದಿಷ್ಟ ಅವಧಿಯಲ್ಲಿ ಪತ್ರ ತಲುಪಿಸಲು ಸಾಧ್ಯವಾಗಿಲ್ಲ ಎಂದು ಅಂಚೆ ಇಲಾಖೆ ಗ್ರಾಹಕ ಆಯೋಗಕ್ಕೆ ಸೂಚನೆ ನೀಡಿದೆ.

ಹೀಗಾಗಿ, ಗ್ರಾಹಕ ಸೇವಾ ಅಂಚೆ ಇಲಾಖೆಯ ತಪ್ಪನ್ನು ಮನಗೊಂಡು ದೂರುದಾರನಿಗೆ 2ಲಕ್ಷ ರೂ. ಪರಿಹಾರಕ್ಕೆ ಶೇ.6ರ ಬಡ್ಡಿದರದಲ್ಲಿ ಒಟ್ಟು 8ವರ್ಷಕ್ಕೆ 90,000 ರೂ. ಮತ್ತು ನ್ಯಾಯಾಲಯದ ಪರಿಹಾರ ವೆಚ್ಚ 20,000 ರೂ. ನಂತೆ ಒಟ್ಟು 3.10 ಲಕ್ಷ ರೂ. ಪರಿಹಾರ ನೀಡುವಂತೆ ಅಂಚೆ ಇಲಾಖೆಗೆ ಆದೇಶ ನೀಡಿದೆ.

ಇದನ್ನೂ ಓದಿ: Marriage: 6 ಮಂದಿ ಕಾಮುಕ ಪತ್ನಿಯರನ್ನು ಮದುವೆಯಾದ ಭೂಪ : ಕ್ರೀಡೆ ಆಡಲು ಟೈಟ್ ಟೈಂ ಟೇಬಲ್ !

Leave A Reply

Your email address will not be published.