ಸಣ್ಣ ಪ್ರಾಯದ ಮಹಿಳಾ ವೈದ್ಯೆ ಕುಸಿದು ಬಿದ್ದು ಸಾವು

Goa news a young female doctor died in goa

Goa: ಮಹಿಳಾ ವೈದ್ಯಾಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆಯೊಂದು ಗೋವಾದಲ್ಲಿ ನಡೆದಿದೆ. ಗೋವಾದ(Goa) ಶಿರೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಅಕ್ಷಯಾ ಪಾವಸ್ಕರ್‌ (38) ಮೃತ ಪಟ್ಟ ಮಹಿಳೆ. ಅಕ್ಷಯಾ ಅವರ ಸಾವಿಗೆ ನಿಖರ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಪ್ರಾಥಮಿಕ ಮೂಲಗಳ ಪ್ರಕಾರ ಹೃದಯಸ್ತಂಭನವಾಯಿತೇ ಎಂದು ಅಂದಾಜಿಸಲಾಗಿದೆ. ಶವಪರೀಕ್ಷೆ ನಡೆಯಲಿದ್ದು ಅನಂತರ ಕಾರಣ ತಿಳಿದು ಬರಲಿದೆ.

ಯುವ ವೈದ್ಯಾಧಿಕಾರಿ ದಿಢೀರ್‌ ನಿಧನಕ್ಕೆ ವೈದ್ಯಕೀಯ ಕ್ಷೇತ್ರದ ವೈದ್ಯಕೀಯ ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲೋಕಾಯುಕ್ತ ದಾಳಿ : ಐದು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ

Leave A Reply

Your email address will not be published.