Ghulam Nabi Azad : ಹಿಂದೂ ಧರ್ಮ ಇಸ್ಲಾಂಗಿಂತಲೂ ಹಳೆಯದು ; ಮೊದಲು ಎಲ್ರೂ ಹಿಂದೂಗಳೇ ಆಗಿದ್ರು ! ಮುಸ್ಲಿಂ ನಾಯಕನ ಹೇಳಿಕೆ ಭಾರೀ ವೈರಲ್ !!

Hinduism is the oldest religion claims Ghulam Nabi Azad

Ghulam Nabi Azad : ಜಾತಿ, ಧರ್ಮದ ವಿಚಾರದಲ್ಲಿ ಮಾತು, ವಿವಾದ, ಜಗಳ, ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಮುಸ್ಲಿಂ ನಾಯಕನೋರ್ವ ‘ಹಿಂದೂ ಧರ್ಮ ಇಸ್ಲಾಂಗಿಂತಲೂ ಹಳೆಯದು, ಮೊದಲು ಎಲ್ರೂ ಹಿಂದೂಗಳೇ ಆಗಿದ್ರು’ ಎಂಬ ಹೇಳಿಕೆ ನೀಡಿದ್ದು, ಸದ್ಯ ಭಾರೀ ವೈರಲ್ ಆಗಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ (Ghulam Nabi Azad) ಅವರು ಈ ಹೇಳಿಕೆ ನೀಡಿದ್ದಾರೆ. 1500 ವರ್ಷಗಳ ಹಿಂದೆ ಇಸ್ಲಾಂ ಹುಟ್ಟಿದ್ದು. ಭಾರತದಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ಇಲ್ಲಿಯವರೇ, ಯಾರೂ ಹೊರಗಿನವರಲ್ಲ, ಎಲ್ಲರೂ ಈ ದೇಶಕ್ಕೆ ಸೇರಿದವರು. ಭಾರತದ ಮುಸ್ಲಿಮರು ಮೂಲತಃ ಹಿಂದೂಗಳು, ಅವರು ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮಾತ್ರ ಇದ್ದರು ಎಂದು ಹೇಳುತ್ತಾರೆ. ನಂತರ ಜನರು ಮತಾಂತರಗೊಂಡು ಮುಸ್ಲಿಮರಾದರು ಎಂದು ಹೇಳಿದ್ದಾರೆ.

ಇತ್ತೀಚೆಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದ-ಭಾವವಿದೆ. ಅದರಲ್ಲೂ ಹಿಂದೂ- ಮುಸ್ಲಿಂ ನಡುವೆ ಬಾರಿ ಘರ್ಷಣೆ ಉಂಟಾಗುತ್ತಿದೆ ಎಂದರೆ ತಪ್ಪಾಗಲಾರದು. ಇನ್ನೊಂದೆಡೆ ಹಿಂದೂ ಮುಸ್ಲಿಂ ಜನರು ಬಾರಿಯ ಅನ್ಯೋನ್ಯತೆಯಿಂದ ಇರುವವರು ಇದ್ದಾರೆ. ಇದೀಗ ಆಜಾದ್ ಅವರು, ಹಿಂದೂ-ಮುಸ್ಲಿಂ ಎನ್ನುವ ಬೇಧಭಾವವೇಕೆ? ಎಂದು ಪ್ರಶ್ನಿಸಿ ಮಾತನಾಡಿದ್ದಾರೆ.

ಭಾರತೀಯ ಮುಸ್ಲಿಮರ ಬಗ್ಗೆ ಮಾತನಾಡಿದ ಆಜಾದ್, ಹಿಂದೂಗಳಂತೆಯೇ ಮುಸ್ಲಿಮರು ಕೂಡ ಈ ನೆಲದೊಳಗೆ ಹೋಗುತ್ತಾರೆ. ಅವರ ದೇಹ ಹಾಗೂ ಎಲುಬುಗಳು ಕೂಡ ಭಾರತ ಮಾತೆಯ ಭಾಗವಾಗುತ್ತದೆ. ಹಾಗಿದ್ದಾಗ ಹಿಂದೂ-ಮುಸ್ಲಿಂ ಎನ್ನುವ ಭಾವನೆ ಏಕೆ ಎಂದು ಪ್ರಶ್ನಿಸಿದರು. ಜೊತೆಗೆ ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಬಾರದು ಎಂದು ಹೇಳಿದರು.

ಇದನ್ನೂ ಓದಿ: Intresting Facts: ಮಗು ಅತ್ತರೆ ಮೊಸಳೆಗಳಿಗೆ ಸಕತ್ ಖುಷಿ ಆಗುತ್ತೆ ! ಯಾಕೆ ಇಷ್ಟ ಅನ್ನೋದೇ ಇಂಟ್ರೆಸ್ಟಿಂಗ್ !

Leave A Reply

Your email address will not be published.