BPL ಕಾರ್ಡುದಾರರಿಗೆ ಸರ್ಕಾರದ ಸೈಲೆಂಟ್ ಶಾಕ್! ಇಂಥವರಿಗೆ ಮಿಸ್ ಆಗಲಿದೆ BPL ಕಾರ್ಡ್?

Karnataka news guidelines for BPL card holders from government

BPL Card: ಐದು ಗ್ಯಾರೆಂಟಿ ಯೋಜನೆಯ ಲಾಭ ಸಿಗುವ ಬಿಪಿಎಲ್ ದಾರಾರಿಗೆ ಇದೀಗ ಮತ್ತೊಂದು ಶಾಕ್ ಕಾದಿದೆ. ಸರ್ಕಾರದಿಂದ ಸಿಗುವ ರೇಷನ್ ಕೇವಲ ಬಡವರಿಗೆ ಮಾತ್ರ ಮೀಸಲು, ಆರ್ಥಿಕವಾಗಿ ದುರ್ಬಲರಾದ ಜನರಿಗೆ ಮಾತ್ರ ಪಡಿತರ ಸಿಗಬೇಕೆಂದು ಸರ್ಕಾರದ ಯೋಜನೆಯಾಗಿದೆ.

ಇಷ್ಟೇ ಅಲ್ಲ ಇದೀಗ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್(BPL Card) ಹಂಚಿಕೆ ವಿಷಯದಲ್ಲಿ ಮಾನದಂಡಗಳನ್ನ ಮತ್ತೊಮ್ಮೆ ಪರಿಷ್ಕರಣೆ ಮಾಡಲು ಮುಂದಾಗಿದೆ. ಹೊಸ ಪರಿಷ್ಕರಣೆಯ ಮೂಲಕ ಬಿಪಿಎಲ್ ಕಾರ್ಡನ್ನು ಪಡೆದುಕೊಳ್ಳುವುದು ಅಷ್ಟು ಸುಲಭವಾಗುವುದಿಲ್ಲ.

ಹೌದು, ಇನ್ನು ಮುಂದೆ ಅರ್ಹತೆ ಇಲ್ಲದಿದ್ದರೂ BPL ಕಾರ್ಡ್ ಹೊಂದಿರುವವರ ಡೇಟಾ ಕಲೆಕ್ಟ್ ಮಾಡಲು ಆಹಾರ ಇಲಾಖೆ ಮುಂದಾಗಿದೆ.

ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆಯಡಿ(Annabhagya) 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಹಣವನ್ನ ಸರ್ಕಾರ ನೀಡುತ್ತಿದೆ. ಸರ್ಕಾರದ ಗ್ಯಾರಂಟಿ ಸ್ಕೀಮ್‌ನಿಂದಾಗಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಕಾರಣದಿಂದ ರಾಜ್ಯ ಸರ್ಕಾರ(state governmnet) ಅರ್ಹ ಫಲಾನುಭವಿಗಳನ್ನ ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ.

ಅರ್ಹತೆ ಇಲ್ಲದಿದ್ರೂ ಬಿಪಿಎಲ್ ಕಾರ್ಡ್(BPL Card) ಪಡೆದು ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿರುವವ ಮಾಹಿತಿಯನ್ನ ಆಹಾರ ಇಲಾಖೆ(food department) ಕಲೆ ಹಾಕಲು ಮುಂದಾಗಿದೆ. ಆದ್ದರಿಂದ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬೇಕೆಂದ್ರೆ ಸರ್ಕಾರ 6 ಮಾನದಂಡಗಳನ್ನ ನಿಗದಿ ಮಾಡಿದೆ.

ಈಗಾಗಲೇ ಸಮೀಕ್ಷೆ ನಡೆಸಿ 35 ಸಾವಿರಕ್ಕೂ ಅಧಿಕ BPL ಕಾರ್ಡ್ ರದ್ದು ಮಾಡಲಾಗಿದೆ. ಜೊತೆಗೆ ಮಾನದಂಡ ಉಲ್ಲಂಘಿಸಿದವರಿಂದ ದಂಡವನ್ನೂ ವಸೂಲಿ ಮಾಡಲಾಗುತ್ತಿದೆ. ಸದ್ಯ ಸರ್ವೇ ನಡೆಸಿ ಅನಧಿಕೃತ BPL ಕಾರ್ಡ್ ಹೊಂದಿದವರಿಂದ ಅಧಿಕ ದಂಡ ವಸೂಲಿ ಮಾಡಲಾಗಿದೆ. ಇನ್ನು ಅರ್ಹತೆ ಇಲ್ಲದಿದ್ರು BPL ಕಾರ್ಡ್ ಪಡೆದವರು ಸ್ವಯಂ ಪ್ರೇರಿತವಾಗಿ ಕಾರ್ಡ್ ರದ್ದು ಮಾಡಿಸುತ್ತಿದ್ದು, ಇಲ್ಲಿಯವರೆಗೆ 45 ಸಾವಿರ ಕಾರ್ಡ್ ಗಳು ರದ್ದಾಗಿವೆ.

ಇದೀಗ ಸರ್ವೇ ಶುರುವಾಗಿರುವ ಹಿನ್ನೆಲೆ ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚು BPL ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.

ಹೌದು ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಆದಾಯ ತೆರಿಗೆ ಪಾವತಿದಾರರು ಶ್ರೀಮಂತರು ಬಿಸಿನೆಸ್ ಮ್ಯಾನ್ ಗಳು ಸರ್ಕಾರಿ ಉದ್ಯೋಗಿಗಳು. ನಕಲಿ ದಾಖಲೆಯನ್ನು ಕೊಟ್ಟು ಬಿಪಿಎಲ್ ಕಾರ್ಡನ್ನು ಪಡೆದಿರುವುದು ಇವರೆಲ್ಲರೂ ಬಿಪಿಎಲ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: Marriage: 6 ಮಂದಿ ಕಾಮುಕ ಪತ್ನಿಯರನ್ನು ಮದುವೆಯಾದ ಭೂಪ : ಕ್ರೀಡೆ ಆಡಲು ಟೈಟ್ ಟೈಂ ಟೇಬಲ್ !

Leave A Reply

Your email address will not be published.