Ratlam Mahalakshmi Temple: ದೇವಾಲಯಕ್ಕೆ ಹೋದ್ರೆ ನಾವೇ ಕಾಸು ಹಾಕಬೇಕು : ಆದ್ರೆ ಈ ಟೆಂಪಲ್ ಹೋದ್ರೆ ನಮಗೇ ಕೊಡ್ತಾರೆ ಚಿನ್ನ ಬೆಳ್ಳಿ !

Madhya Pradesh news Ratlam Mahalakshmi Mandir where devotees get gold and money as prasadam

Ratlam Mahalakshmi Temple: ಭಾರತದಲ್ಲಿ ದೇವಾಲಯಗಳ ನಿಯಮಗಳು ಒಂದೇ ರೀತಿ ಇರುವುದಿಲ್ಲ. ಪ್ರತಿಯೊಂದು ದೇವಾಲಯಗಳು (Kerala Temple ) ತಮ್ಮದೇ ಆದ ನಿಯಮಗಳನ್ನು ಪಾಲಿಸುತ್ತದೆ. ಪೂಜೆ ಸಲ್ಲಿಸುವ ರೀತಿ, ಪ್ರವೇಶ ನಿಯಮ, ದೇವರ ಪ್ರಸಾದ, ದೇವರ ವಿಗ್ರಹ ವಿಧ ಎಲ್ಲವೂ ಭಿನ್ನವಾಗಿರುತ್ತವೆ. ಇನ್ನು ನಾವು ದೇವರನ್ನು ಪೂಜಿಸುವ ವಿಧಾನ ಬೇರೆ ಬೇರೆ ಆಗಿದ್ದರು ನಮ್ಮಲ್ಲಿರುವ ಭಕ್ತಿ ಒಂದೇ.

ಸಾಮಾನ್ಯವಾಗಿ ದೇವಾಲಯಗಳಲ್ಲಿ ಸಿಹಿತಿಂಡಿಗಳು, ಹೂವು, ಹಣ್ಣು, ಆಹಾರ ಪದಾರ್ಥಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಆದರೆ ಇಲ್ಲಿ ಆಭರಣಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಈ ದೇವಾಲಯಕ್ಕೆ ಬರುವ ಭಕ್ತನು ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಪ್ರಸಾದವಾಗಿ ಪಡೆಯುತ್ತಾನೆ.

ಹೌದು, ಮಧ್ಯಪ್ರದೇಶದ ರತ್ಲಾಮ್ ದೇವಾಲಯದ ವಿಶಿಷ್ಟತೆ ಬಗ್ಗೆ ನೀವು ತಿಳಿಯಲೇ ಬೇಕು. ಮಧ್ಯಪ್ರದೇಶದ ರತ್ಲಾಮ್ (Ratlam Mahalakshmi temple) ನಗರದ ಮನಾಕ್‌ನಲ್ಲಿ ಇರುವ ದೇವಾಲಯವು ಮಹಾಲಕ್ಷ್ಮಿಗೆ ಸಮರ್ಪಿತವಾಗಿದ್ದು, ರತ್ಲಂನ ಮಹಾಲಕ್ಷ್ಮಿ ದೇವಾಲಯದಲ್ಲಿ ದೀಪಾವಳಿಯ ಐದು ದಿನಗಳವರೆಗೆ, ಇಲ್ಲಿ ಕುಬೇರನ ನಿಧಿ ಇಡಲಾಗುತ್ತೆ. ಈ ಸಮಯದಲ್ಲಿ ದೇಗುಲವನ್ನು ಹೂವುಗಳಿಂದ ಅಥವಾ ಹೂಮಾಲೆಗಳಿಂದ ಅಲಂಕರಿಸುವುದಿಲ್ಲ. ಬದಲಾಗಿ, ನೋಟುಗಳ ಕಟ್ಟುಗಳ ಮಾಲೆ ಮಾಡಲಾಗುತ್ತೆ. ಅಷ್ಟೇ ಅಲ್ಲ ದೇವಿಗೆ ಅಲಂಕಾರವನ್ನು ಚಿನ್ನ ಮತ್ತು ಬೆಳ್ಳಿ ಆಭರಣಗಳಿಂದ (gold and silver ornaments) ಮಾಡಲಾಗುತ್ತದೆ.

ಇನ್ನು 3 ದಿನಗಳ ದೀಪಾವಳಿ ಹಬ್ಬದಂದು ರತ್ಲಂನ ಪ್ರಾಚೀನ ಮಹಾಲಕ್ಷ್ಮಿ ದೇವಾಲಯವನ್ನು ನೋಟುಗಳು, ವಜ್ರ, ಮುತ್ತುಗಳು ಮತ್ತು ಆಭರಣಗಳಿಂದ ಅಲಂಕರಿಸಲಾಗುತ್ತದೆ. ಕುಬೇರ ಮತ್ತು ಮಹಾಲಕ್ಷ್ಮಿಯ ಈ ನಿಧಿ ನೋಡಲು ಭಕ್ತರು ಮುಂಜಾನೆ 4 ಗಂಟೆಯಿಂದ ಬರಲು ಪ್ರಾರಂಭಿಸ್ತಾರೆ.

ಸ್ಥಳೀಯರು ಮಾತ್ರವಲ್ಲದೆ ಇತರ ರಾಜ್ಯಗಳ ಭಕ್ತರು ಸಹ ಇಲ್ಲಿಗೆ ತಮ್ಮ ಚಿನ್ನ, ಹಣ ನೀಡುತ್ತಾರೆ. ಈ ಸಂಪ್ರದಾಯದಿಂದಾಗಿ, ರತ್ಲಂನ ಮಹಾಲಕ್ಷ್ಮಿ ದೇವಾಲಯವನ್ನು ಕುಬೇರನ ನಿಧಿ ಎಂದು ಕರೆಯಲಾಗುತ್ತದೆ.

ಈ ಕುಬೇರನ ನಿಧಿಯನ್ನು ನೋಡಲು ಸಾವಿರಾರು ಭಕ್ತರು 5 ದಿನಗಳ ಕಾಲ ದೂರದ ಸ್ಥಳಗಳಿಂದ ಬರುತ್ತಾರೆ. ಆಡಳಿತವು ದೇವಾಲಯದಲ್ಲಿ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡುತ್ತದೆ. ಇಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ. ಇದಲ್ಲದೆ, ಪೊಲೀಸ್ ವ್ಯವಸ್ಥೆಯೂ ಇಲ್ಲಿದೆ.

ಪುರೋಹಿತರ ಪ್ರಕಾರ, ಈ ಪ್ರಾಚೀನ ದೇವಾಲಯದಲ್ಲಿ ಈ ಸಂಪ್ರದಾಯವು ಹಲವು ವರ್ಷಗಳಿಂದ ಇದೆ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ. ಮಹಾಲಕ್ಷ್ಮಿ ತನ್ನ ಸಂಪತ್ತನ್ನು ಇಲ್ಲಿ ಇಡುವ ಮೂಲಕ ಸಂತೋಷವಾಗಿದ್ದಾಳೆ ಎಂದು ನಂಬಲಾಗಿದೆ.

ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಿಗುತ್ತೆ ಚಿನ್ನ ಮತ್ತು ಬೆಳ್ಳಿ
ಇಲ್ಲಿಗೆ ಬರುವ ಭಕ್ತರು ಆಭರಣಗಳು ಮತ್ತು ಹಣವನ್ನು ತಾಯಿಯ ಪಾದಗಳಿಗೆ ಅರ್ಪಿಸುತ್ತಾರೆ. ಮುಖ್ಯವಾಗಿ ಧಂತೇರಸ್ ದಿನದಂದು, ಇಲ್ಲಿಗೆ ಬರುವ ಮಹಿಳಾ ಭಕ್ತರಿಗೆ ಕುಬೇರನ ಮಡಕೆಯನ್ನು ನೀಡಲಾಗುತ್ತದೆ. ಈ ದೇವಾಲಯಕ್ಕೆ ಬರುವ ಭಕ್ತನು ಬರಿಗೈಯಲ್ಲಿ ಹಿಂದಿರುಗುವುದಿಲ್ಲ.

ಅನೇಕ ದಶಕಗಳಿಂದ, ಈ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಭರಣಗಳು ಮತ್ತು ಹಣ ಅರ್ಪಿಸುವ ಸಂಪ್ರದಾಯವಿದೆ. ರಾಜರು ತಮ್ಮ ರಾಜ್ಯದ ಸಮೃದ್ಧಿಗಾಗಿ ಇಲ್ಲಿ ಹಣವನ್ನು ಅರ್ಪಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅಂದಿನಿಂದ ಇಂದಿನವರೆಗೆ, ಭಕ್ತರು ಇಲ್ಲಿ ಆಭರಣಗಳು, ಹಣ ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಇದನ್ನು ಮಾಡಿದರೆ, ತಾಯಿಯ ಅನುಗ್ರಹ ಯಾವಾಗಲೂ ತನ್ನ ಭಕ್ತರ ಮೇಲೆ ಇರುತ್ತದೆ ಎಂದು ನಂಬಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ತಾಯಿಯನ್ನು ನೋಡಲು ಬರುತ್ತಾರೆ.

ಇದನ್ನೂ ಓದಿ: BPL ಕಾರ್ಡುದಾರರಿಗೆ ಸರ್ಕಾರದ ಸೈಲೆಂಟ್ ಶಾಕ್!ಇಂಥವರಿಗೆ ಮಿಸ್ ಆಗಲಿದೆ BPL ಕಾರ್ಡ್?

Leave A Reply

Your email address will not be published.