Scotch whisky Price: ಮದ್ಯ ಪ್ರಿಯರಿಗೆ ಭರ್ಜರಿ ನ್ಯೂಸ್: ಇನ್ನು ಸ್ಕಾಚ್ ವಿಸ್ಕಿ ಮಾಲು ಲೋಕಲ್ ಬೆಲೆಗೆ ಸಿಗಲಿದೆ ?!

Nation news Good news for alcoholics India-Britain agreement Scotch whiskey price likely to drop

scotch whisky Price: ವಿಶ್ವದಲ್ಲಿ ಭಾರತವು ವಿಸ್ಕಿಯ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿ ನಡೆಯುವ ಮಾರಾಟ ಬೇರೆಡೆ ನಡೆಯುವುದಿಲ್ಲ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸ್ಕಾಚ್ ವಿಸ್ಕಿಯ (scotch whisky Price) ಬೆಲೆ ತುಂಬಾ ಹೆಚ್ಚಾಗಿದೆ. ಕಾರಣ ಆಮದು ಸುಂಕ. ಆಮದು ಮಾಡಿಕೊಳ್ಳುವ ವಿಸ್ಕಿಯು ಹೆಚ್ಚಿನ ಸುಂಕಗಳಿಗೆ ಒಳಪಟ್ಟಿರುತ್ತದೆ.

ಕಳೆದ ವರ್ಷ ಮೂರನೇ ಅತಿದೊಡ್ಡ ಸ್ಕಾಚ್ ಮಾರುಕಟ್ಟೆ ಆಗಿ ಭಾರತ ರೂಪುಗೊಂಡಿದೆ. ಈ ಮೊದಲು ಹೆಚ್ಚಿನ ಸುಂಕದ ವೇಳೆಯೇ ಭಾರತ ಇಷ್ಟು ದೊಡ್ಡ ಮಾರುಕಟ್ಟೆ ಸೃಷ್ಟಿಸಿದೆ. ಸುಂಕ ಕಡಿಮೆಯಾದರೆ ಸ್ಕಾಚ್ ಮಾರಾಟ ಉತ್ತಮ ಮಟ್ಟದಲ್ಲಿರಬಹುದೆಂದು ಊಹಿಸಬಹುದು. ಮುಖ್ಯವಾಗಿ ಸುಂಕ ಕಡಿಮೆ ಮಾಡುವುದುರಿಂದ ಇನ್ನಷ್ಟು ಮಾರುಕಟ್ಟೆ ದೊಡ್ಡದಾಗಲಿದೆ.

ಮಾಹಿತಿ ಪ್ರಕಾರ, ಶೀಘ್ರದಲ್ಲೇ ಭಾರತ ಮತ್ತು ಯುನೈಟೆಡ್ ಕಿಂಗ್ಲಮ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಂತೆ ಸ್ಕಾಚ್ ವಿಸ್ಕಿ ಕಡಿಮೆ ಬೆಲೆಗೆ ಸಿಗಲಿದೆ.

ಈಗಾಗಲೇ ಹನ್ನೆರಡನೇ ಅಂತಿಮ ಸುತ್ತಿನ ಮಾತುಕತೆ ಬುಧವಾರ ದೆಹಲಿಯಲ್ಲಿ ಪ್ರಾರಂಭವಾಯಿತು, ಈ ಉದ್ದೇಶಕ್ಕಾಗಿ ದೆಹಲಿಯಲ್ಲಿ UK ಯಿಂದ ಉನ್ನತ ಮಟ್ಟದ ವ್ಯಾಪಾರ ನಿಯೋಗ ಬಂದಿತ್ತು.”ಎಲ್ಲಾವೂ ಸರಿಯಾಗಿ ನಡೆದರೆ, ಬಹುನಿರೀಕ್ಷಿತ ಎಫ್‌ಟಿಎ ಒಂದು ತಿಂಗಳೊಳಗೆ ತೀರ್ಮಾನಿಸಲು ಸಿದ್ಧವಾಗಿದೆ’ ಎಂದು ಮೂಲವೊಂದು ಹೇಳಿದೆ.

ಸದ್ಯ ಮುಕ್ತ ವ್ಯಾಪಾರ ಒಪ್ಪಂದಗಳನ್ನು, ಆಮದು ಸುಂಕ ಸರಳಗೊಳಿಸುವ ಮತ್ತು/ ಅಥವಾ ಕಡಿಮೆ ಮಾಡುವ ಮೂಲಕ ದೇಶಗಳ ನಡುವಿನ ಸರಕು ಮತ್ತು ಸೇವೆಗಳ ಹರಿವನ್ನು ಸುಲಭಗೊಳಿಸಲು ಈ ಒಪ್ಪಂದ ವಿನ್ಯಾಸಗೊಳಿಸಲಾಗಿದೆ. ಈ ಪರಿಣಾಮ ಅಂತಿಮವಾಗಿ ಬಳಕೆದಾರರಿಗೆ ಆಮದು ಮಾಡಿದ ಸರಕುಗಳ ಬೆಲೆಗಳನ್ನು ಕಡಿಮೆ ಮಾಡಲಾಗುತ್ತದೆ ಎನ್ನಲಾಗ್ತಿದೆ.

ಒಟ್ಟಿನಲ್ಲಿ “ಸ್ಕಾಚ್ ವಿಸ್ಕಿಯ ಆಮದಿನ ಮೇಲಿನ ಅಬಕಾರಿ ಸಮಸ್ಯೆಯು ಭಾರತದ ವಿಸ್ಕಿ ತಯಾರಕರು ಮತ್ತು ಸ್ಕಾಚ್ ವಿಸ್ಕಿ ತಯಾರಕರ ನಡುವೆ ಸೌಹಾರ್ದಯುತವಾಗಿ ಇತ್ಯರ್ಥವಾಗುವ ಸಾಧ್ಯತೆಯಿದೆ’ ಎಂದು ಮೂಲಗಳು ಹೇಳಿವೆ.

ಬ್ರಿಟನ್ನಿನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ರಾಜಿನಾಮೆ ನಂತರ ಇಂಡಿಯಾ ಯುಕೆ ಎಫ್‌ಟಿಎ ಒಪ್ಪಂದ ವಿಳಂಬವಾಯಿತು. ಇದೀಗ
26 ಅಧ್ಯಾಯಗಳು/ನೀತಿ ಕ್ಷೇತ್ರಗಳಲ್ಲಿ 19 ಕ್ಕೆ ಒಪ್ಪಂದವನ್ನು ಸಾಧಿಸಲಾಗಿದೆ. ಇನ್ನೂ ಕೆಲವು ಸಮಸ್ಯೆಗಳು ಇತ್ಯರ್ಥವಾಗದೇ ಉಳಿದಿವೆ ಮತ್ತು 12 ನೇ ಸುತ್ತಿನ ಅಂತ್ಯದ ವೇಳೆಗೆ ಇತ್ಯರ್ಥ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಆಗಸ್ಟ್ 21 ಮತ್ತು 25 ರ ನಡುವೆ ನಡೆಯಲಿರುವ G20 ವ್ಯಾಪಾರ ಮತ್ತು ಹೂಡಿಕೆ ಕಾರ್ಯ ಗುಂಪಿನ ಸಭೆಯಲ್ಲಿ ಭಾಗವಹಿಸಿದ ಬ್ರಿಟನ್ ವ್ಯಾಪಾರ ಸಚಿವಾಲಯದ ಅಧಿಕಾರಿಗಳು ಮತ್ತು ಬ್ರಿಟಿಷ್ ವ್ಯಾಪಾರ ಸಚಿವರು ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಬರಲಿದ್ದು, ಈಗಾಗಲೇ ಯುಕೆಯಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರು ಪರಸ್ಪರ ಲಾಭದಾಯಕ ಒಪ್ಪಂದಕ್ಕೆ ಆಶಾವಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್ ಕಳಕೊಂಡದ್ದಕ್ಕೆ ಕಂಪ್ಲೇಂಟ್ ಕೊಟ್ಟ ವ್ಯಕ್ತಿ! FIR ಆಯ್ತಾ ಇಲ್ವಾ ?

Leave A Reply

Your email address will not be published.