Upendra Controversy: ಉಪ್ಪಿ ಫ್ಯಾನ್ಸ್ ಮೇಲೆಯೂ ಅಟ್ರಾಸಿಟಿ ಬ್ರಹ್ಮಾಸ್ತ್ರ ; ಏನಿದು ಹೊಸ ಬೆಳವಣಿಗೆ ?

Sandalwood news Upendra controversy atrocity case may register against actor Upendra fans after they supported him

Upendra Controversy: ಸ್ಯಾಂಡಲ್ ವುಡ್‌ ನಟ ಉಪೇಂದ್ರ (Actor Upendra) ಅವರು ಲೈವ್ ವಿಡಿಯೋದಲ್ಲಿ ಮಾತನಾಡುವಾಗ ‘ಊರು ಅಂದ್ಮೇಲೆ ….. ಇರುತ್ತೆ’ ಎಂದು ಗಾದೆ ಮಾತನ್ನು ಬಳಸಿದ್ದು, ಆ ಮೂಲಕ ದಲಿತ ಸಮುದಾಯದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ನಟ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಲಾಗಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ ಉಪೇಂದ್ರ (Upendra Controversy) ತಾನು ಜಾತಿ ನಿಂದರೆ ಮಾಡಿಲ್ಲ, FIR ರದ್ದು ಮಾಡಿ ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದರು. ಈ ವಿಚಾರವಾಗಿ ನಟನಿಗೆ ಜಯ‌ ಸಿಕ್ಕಿತು. ಹೈಕೋರ್ಟ್ ಎಫ್‌ಐಆರ್ ಗೆ ತಡೆ ನೀಡುವ ಮೂಲಕ ನಟನಿಗೆ ಬಿಗ್ ರಿಲೀಫ್ ನೀಡಿತು.

ಆದರೆ, ನಟ ಉಪೇಂದ್ರ ಕ್ಷಮೆ ಕೇಳಿದರೂ ವಿವಾದ ತಣ್ಣಗಾಗುತ್ತಿಲ್ಲ. ನಟ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಈ ವಿವಾದ ಕಡಿಮೆಯಾಗದೆ ಭುಗಿಲೇಳುತ್ತಿದೆ. ಈ ಮಧ್ಯೆ ಉಪೇಂದ್ರ ಅಭಿಮಾನಿಗಳು ನಟನ ಪರವಾಗಿ ನಿಂತಿದ್ದು, ಉಪೇಂದ್ರ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಅದರಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಉಪೇಂದ್ರ ಉಪ್ಪಿ ಫ್ಯಾನ್ಸ್ ಮೇಲೆಯೂ ಅಟ್ರಾಸಿಟಿ ಬ್ರಹ್ಮಾಸ್ತ್ರ ಬೀಸಲು ಸಿದ್ಧತೆ ಆಗುತ್ತಿದೆ ಎನ್ನಲಾಗಿದೆ.

ಈ ಹಿಂದೆ ಜೂನಿಯರ್ ಉಪೇಂದ್ರನಿಗೂ ಈ ವಿವಾದದಿಂದ ಸಮಸ್ಯೆ ಉಂಟಾಗಿತ್ತು. ಮಂಡ್ಯದ ಶ್ರೀರಂಗಪಟ್ಟಣದ ಪಾಲಹಳ್ಳಿ ಗ್ರಾಮದ ಮಹೇಶ್ ಎಂಬಾತ ನೋಡೋದಕ್ಕೆ ಅಪ್ಪಟ ಉಪೇಂದ್ರರಂತೆ ಕಾಣುತ್ತಾರೆ ಹಾಗಾಗಿ ಅವರನ್ನು ಜ್ಯೂನಿಯರ್ ಉಪೇಂದ್ರ ಎಂದು ಎಲ್ಲರೂ ಕರೆಯುತ್ತಾರೆ. ಸದ್ಯ ನಟ ಉಪೇಂದ್ರ ವಿವಾದದಿಂದ
ಜೂನಿಯರ್ ಉಪೇಂದ್ರನಿಗೂ ತೊಂದರಾಗಿದೆ. ಮಹೇಶ್ ಅವರು ಹೋದ ಕಡೆಯಲ್ಲಿ ಪ್ರಶ್ನೆಗಳ ಸುರಿಮಳೆ ಎದುರಾಗುತ್ತಿದೆ. ಕೆಲವರು ಕಾರು ಫಾಲೋ ಮಾಡಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಬೆನ್ನಲ್ಲೆ ಇದೀಗ ಅಭಿಮಾನಿಗಳ ಸರದಿ. ಉಪೇಂದ್ರ ಅಭಿಮಾನಿಗಳಿಗೆ ಈ ಸಮಸ್ಯೆ ಶಿಫ್ಟ್ ಆಗಿದೆ. ಹೌದು, ಉಪೇಂದ್ರ ಅಭಿಮಾನಿಗಳ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆ, ಉಪೇಂದ್ರ ಅವರ ಗಾದೆ ಮಾತು ವಿವಾದ ಸೃಷ್ಟಿಸಿ ಭಾರೀ ದೊಡ್ಡ ಮಟ್ಟದಲ್ಲಿ ಸುದ್ಧಿಯಾಗುತ್ತಿದೆ.

ಇದನ್ನೂ ಓದಿ: ಸಣ್ಣ ಪ್ರಾಯದ ಮಹಿಳಾ ವೈದ್ಯೆ ಕುಸಿದು ಬಿದ್ದು ಸಾವು

Leave A Reply

Your email address will not be published.