Child Death: ಹುಟ್ಟುಹಬ್ಬದ ಕೇಕ್ ಶ್ವಾಸನಾಳದಲ್ಲಿ ಸಿಲುಕಿ ಮಗು ಸಾವು ; ಅಣ್ಣನ ಬರ್ತ್ ಡೇಗೆ ತಮ್ಮನ ಮರಣ !

Varanasi news 8 year old child dies due to cake getting stuck in windpipe in Varanasi

Child Death: ಅಣ್ಣನ ಹುಟ್ಟುಹಬ್ಬದ ದಿನವೇ ಎಂಟು ವರ್ಷದ ಸಹೋದರ ಕೇಕ್ ತಿಂದು ಸಾವನ್ನಪ್ಪಿರುವ (Child Death) ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಟ್ಟುಹಬ್ಬದ ಕೇಕ್ ಶ್ವಾಸನಾಳದಲ್ಲಿ ಸಿಲುಕಿ ತಮ್ಮ ಮರಣ ಹೊಂದಿದ್ದಾನೆ. ಮೃತ ಬಾಲಕನನ್ನು ಪ್ರಾಂಜಲ್ ಶ್ರೀವಾಸ್ತವ್ ಎಂದು ಹೇಳಲಾಗಿದೆ.

ವಾರಣಾಸಿಯ ಸಜೋಯಿ ಗ್ರಾಮದ ಶಿಕ್ಷಕ ಧೀರಜ್ ಶ್ರೀವಾಸ್ತವ ಅವರ ಹಿರಿಯ ಪುತ್ರ ಪ್ರಖರ್ ಅವರ ಹುಟ್ಟಿದ ದಿನದಂದು ಕೇಕ್ ತರಲಾಗಿತ್ತು. ಮಗನ ಜನ್ಮದಿನದ ಆಚರಣೆಯ ಖುಷಿಯಲ್ಲಿ ಎಲ್ಲರೂ ಮುಳುಗಿದ್ದರು. ತಡರಾತ್ರಿಯ ವೇಳೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ವೇಳೆ ಪ್ರಖರ್ ಕಿರಿಯ ಸಹೋದರ ಪ್ರಾಂಜಲ್ ಕೂಡ ಕೇಕ್ ತಿಂದಿದ್ದಾನೆ. ಆದರೆ, ಆ ಬಳಿಕ ಆತನ ಆರೋಗ್ಯ ಹದಗೆಟ್ಟಿದೆ.

ಭಯಗೊಂಡ ಕುಟುಂಬಸ್ಥರು ತಕ್ಷಣ ಪ್ರಾಂಜಲ್ ನನ್ನು ರಾತ್ರಿ ಒಂದು ಗಂಟೆಗೆ ಸಾಯಿ ನರ್ಸಿಂಗ್ ಹೋಮ್‌ಗೆ ಕರೆದೊಯ್ದರು. ಆ ನಂತರ ಚೈಲ್ಡ್ ಕೇರ್ ಆಸ್ಪತ್ರೆ, ಕೊನೆಗೆ ಹೆರಿಟೇಜ್ ಆಸ್ಪತ್ರೆಗೆ ಕರೆದೊಯ್ದರು. ಕೊನೆಯಲ್ಲಿ ಜನಪ್ರಿಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ ಮರುದಿನ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಚಿಕಿತ್ಸೆ ಫಲಿಸದೆ ಬಾಲಕನ ಪ್ರಾಣಪಕ್ಷಿ ಹಾರಿಹೋಯಿತು.

ಮಗನ ಕಳೆದುಕೊಂಡ ಕುಟುಂಬ ಕಣ್ಣೀರ ಕೋಡಿ ಹರಿಸುತ್ತಿದ್ದು, ಈ ಬಗ್ಗೆ ಮಾತನಾಡಿದ ತಂದೆ ಧೀರಜ್, “ನನ್ನ ಮಗನ ಶ್ವಾಸನಾಳಕ್ಕೆ ಕೇಕ್ ತಗುಲಿ ಉಸಿರಾಟದ ತೊಂದರೆಯಾಗಿ ಸಾವನ್ನಪ್ಪಿದ್ದಾನೆ” ಎಂದು ತಿಳಿಸಿದ್ದಾರೆ. ಘಟನೆಯಿಂದ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದ ಇಡೀ ಕುಟುಂಬವು ಈಗ ದುಃಖದಲ್ಲಿ ಮುಳುಗಿದೆ.

ಇದನ್ನೂ ಓದಿ: Ghulam Nabi Azad : ಹಿಂದೂ ಧರ್ಮ ಇಸ್ಲಾಂಗಿಂತಲೂ ಹಳೆಯದು ; ಮೊದಲು ಎಲ್ರೂ ಹಿಂದೂಗಳೇ ಆಗಿದ್ರು ! ಮುಸ್ಲಿಂ ನಾಯಕನ ಹೇಳಿಕೆ ಭಾರೀ ವೈರಲ್ !!

Leave A Reply

Your email address will not be published.