Death News: ಟೆರೇಸ್ ಮೇಲೆ ಹೋದ 2 ಮಕ್ಕಳು ನಿಗೂಢ ಸಾವು: ನೆಲದಲ್ಲಿ ಬಿದ್ದಿದ್ದ ಚಾಕೊಲೇಟ್ ತಂದಿತ್ತಾ ಮರಣ ?

Uttar Pradesh: ಉತ್ತರ ಪ್ರದೇಶದಲ್ಲಿ(Uttar Pradesh)ಪಕ್ಕದ ಮನೆಯ ಟೆರೇಸ್ ನಲ್ಲಿ ಆಟ ಆಡಲು ತೆರಳಿದ್ದ ಇಬ್ಬರು ಬಾಲಕಿಯರು(Two Girls)ನಿಗೂಢವಾಗಿ ಮೃತಪಟ್ಟ(Death )ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದಲ್ಲಿ ಪಕ್ಕದ ಮನೆಯ ಇಬ್ಬರು ಬಾಲಕಿಯರು ಮತ್ತು ಇನ್ನಿಬ್ಬರು ಆಟವಾಡಲು ಟೆರೇಸ್ ಗೆ ತೆರಳಿದ್ದು, ಈ ವೇಳೆ ಟೆರೇಸ್ ಮೇಲೆ ಬಿದ್ದಿದ್ದ ಚಾಕೊಲೇಟ್(Chocolate) ಅನ್ನು ನಾಲ್ವರು ಕೂಡ ತಿಂದಿದ್ದಾರೆ. ಇದನ್ನು ಸೇವಿಸಿದ ಕೂಡಲೇ ಹೊಟ್ಟೆ ನೋವು, ಎದೆ ನೋವು ಕಾಣಿಸಿಕೊಂಡಿದ್ದು, ಈ ಘಟನೆ ಬೆಳಗ್ಗೆ 6 ಗಂಟೆಗೆ ನಡೆದಿದೆ ಎನ್ನಲಾಗಿದೆ.

ಈ ವಿಚಾರ ಪೋಷಕರಿಗೆ ತಿಳಿದು ಕೂಡಲೇ ಆಸ್ಪತ್ರೆಗೆ (Hospital)ದಾಖಲು ಮಾಡಲಾಗಿದ್ದು, ಆದರೆ, ಇವರಲ್ಲಿ ಇಬ್ಬರು ಬಾಲಕಿಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತಪಟ್ಟವರನ್ನು ಸಾಧನಾ (7) ಮತ್ತು ಅವರ ಸಹೋದರಿ ಶಾಲಿನಿ (4) ಎಂದು ಗುರುತಿಸಲಾಗಿದೆ. ಕಡಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಕ ಪಕ್ಕದ ಮನೆಯವರು ವಿಷಪೂರಿತ ಮಿಠಾಯಿಯನ್ನು ಎಸೆದಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ನೈಜ ಸತ್ಯ ಹೊರಬೀಳ ಬೇಕಾಗಿದೆ.

Leave A Reply

Your email address will not be published.