Priyanka Upendra: ಆದಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಿಯಾಂಕಾ ಉಪೇಂದ್ರರಿಂದ ವಿಶೇಷ ಪೂಜೆ !! ಉಪೇಂದ್ರಗೆ ವಿವಾದಗಳಿಂದ ಬೇಗ ಮುಕ್ತಿ ಸಿಗಲೆಂದು ನಡೆಯಿತಾ ಪ್ರಾರ್ಥನೆ ?

Sandalwood news Mangalore news Actor Upendra wife Priyanka visits koragajja temple at kuttar

Priyanka Upendra: ರಿಯಲ್ ಸ್ಟಾರ್ ನಟ ಉಪೇಂದ್ರ ಅವರ ಪತ್ನಿ ನಟಿ ಪ್ರಿಯಾಂಕ (Priyanka Upendra) ದಿಢೀರ್ ಆಗಿ ಕುತ್ತಾರಿನ ಆದಿ ಕೊರಗಜ್ಜ ದೈವದ ಮೊರೆ ಹೋಗಿದ್ದಾರೆ. ಮಂಗಳೂರಿನ ತೊಕ್ಕೊಟ್ಟುವಿನಲ್ಲಿರುವ ಆದಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ನಟ ಉಪೇಂದ್ರ ಅವರು ವಿವಾದಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಈ ಸಂದರ್ಭದಲ್ಲಿ ಪತ್ನಿ ಪ್ರಿಯಾಂಕಾ ಉಪೇಂದ್ರ ಕೊರಗಜ್ಜದ ಭೇಟಿ ಕುತೂಹಲ ಮೂಡಿಸಿದೆ. ಪತಿ ಉಪೇಂದ್ರ ಅವರು ಈ ಎಲ್ಲಾ ತೊಂದರೆಗಳಿಂದ ಹೊರಗೆ ಬರಲಿ ಎಂದು ನಟಿ ಪ್ರಿಯಾಂಕ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.

ಕರಾವಳಿಯ ಕಾರಣಿಕ ಶಕ್ತಿ ಕೊರಗಜ್ಜನಿಗೆ ಜಿಲ್ಲೆ ಮಾತ್ರವಲ್ಲದೆ ದೇಶ, ವಿದೇಶಗಳಲ್ಲೂ ಅಸಂಖ್ಯಾತ ಭಕ್ತ ಗಣರಿದ್ದಾರೆ. ಅವರಲ್ಲಿ ಸೆಲೆಬ್ರಿಟಿ ನಟ ನಟಿ ಕಲಾವಿದ ಮತ್ತು ರಾಜಕೀಯ ನಾಯಕರುಗಳು ಹೊರತಲ್ಲ. ಈಗೀಗ ದಿವಸಗಳಲ್ಲಿ ಕೊರಗಜ್ಜನ ಆದಿ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದಲ್ಲದೆ, ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಹರಕೆಯನ್ನೂ ಹೊತ್ತು ತೆರಳುವ ಪರಿಪಾಠ ಹೆಚ್ಚುತ್ತಿದೆ.

ನಟಿ ಪ್ರಿಯಾಂಕ ಅವರು ಶುಕ್ರವಾರ ಮಧ್ಯಾಹ್ನ ಚಿತ್ರ ತಂಡದೊಂದಿಗೆ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನೂತನ ಸಿನೆಮಾ ಚಿತ್ರೀಕರಣಕ್ಕೆ ಬಂದಿದ್ದ ನಟಿ ಪ್ರಿಯಂಕರನ್ನು, ಈ ಸಂದರ್ಭ ಶ್ರೀ ಪಂಜಂದಾಯ ಬಂಟ ವೈದ್ಯನಾಥ, ಆದಿ ಕೊರಗತನಿಯ ಸೇವಾ ಟ್ರಸ್ಟ್ ನ ಟ್ರಸ್ಟಿಗಳು ಸನ್ಮಾನಿಸಿದರು. ತೀರಾ ಇತ್ತೀಚೆಗೆ ನಟಿ ಮಾಲಾಶ್ರೀ ಆದಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ, ತನ್ನ ಇಷ್ಟಾರ್ಥ ಈಡೇರಿದ್ದಕ್ಕಾಗಿ ಹರಕೆ ಸಲ್ಲಿಸಿದ್ದರು. ಈಗ ನಟಿ ಪ್ರಿಯಾಂಕ ಉಪೇಂದ್ರ ಕೊರಗಜ್ಜನಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ನಟ ಉಪೇಂದ್ರ ಅವರ ‘ಹೊಲಗೇರಿ ‘ ಹೇಳಿಕೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ಕಾರಣ ಅವರು ಸಾರ್ವಜನಿಕ ಸಂಸ್ಥೆಗಳ ವಿರೋಧಗಳನ್ನು ಮತ್ತು ಪೊಲೀಸ್ ಕೇಸನ್ನೂ ಎದುರಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಎಷ್ಟಾರ್ಥ ಪೂರೈಸುವ ಮತ್ತು ಕಷ್ಟ ಕಾರ್ಪಣ್ಯ ಕಳೆಯುವ ಕೊರಗಜ್ಜನ ಮೊರೆಹೋಗಿದ್ದಾರೆ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ !

ಇದನ್ನೂ ಓದಿ: 27 ವರ್ಷಗಳ ಕಾಲ ಯಾವುದೇ ರಜೆ ಇಲ್ಲದೇ ಕೆಲಸ ಮಾಡಿದ ‘ ವಿಶಿಷ್ಟ ಶ್ರದ್ಧೆ’ಯ ವ್ಯಕ್ತಿ, ಅಚಾನಕ್ ಆಗಿ ಸಿಕ್ತು 3.5 ಕೋಟಿ ರೂ. ಗಿಫ್ಟ್‌ !

Leave A Reply

Your email address will not be published.