ಅನ್ನ ಒಲ್ಲದ ಅಜ್ಜಿ: 13 ವರ್ಷಗಳಿಂದ ಅನ್ನದ ಬದಲು ಚಾಕ್ ಪೀಸ್ ಕಚ್ಚಿ ತಿನ್ನೋದೇ ಈಕೆಯ ಆಹಾರ !

Tamil Nadu news old lady has strange habit she has not touched rice for 13 years her food is chalk piece

Tamil nadu: ಒಂದೆರಡು ದಿನ ಅಲ್ಲ, ವಾರಗಳಲ್ಲ, ನಿರಂತರ 13 ವರ್ಷಗಳ ಕಾಲ ಅನ್ನ ಮುಟ್ಟಲಿಲ್ಲ ಈ ಅಜ್ಜಿ. ಕೇವಲ ಚಾಕ್ ಪೀಸ್ ತುಂಡುಗಳನ್ನು ತಿಂದು ಹೊಟ್ಟೆ ತುಂಬಿಸಿ ಕೊಂಡಿದ್ದಾಳೆ ಈ ಅಜ್ಜಿ. ಇದು ಕೇಳಲು ವಿಚಿತ್ರ ಆದರೂ ಸತ್ಯ.

ತಮಿಳುನಾಡಿನ (Tamil nadu) ರಾಜಣ್ಣ ಸಿರಿಪಿಳ್ಳ ಜಿಲ್ಲೆಯ ಮುಸ್ತಾಬಾದ್ ಮಂಡಲದ ಬದ್ನಿಕಲ್ ಗ್ರಾಮದ ಮಲ್ಲವ್ವಕ್ಕ ಎನ್ನುವ ಅಜ್ಜಿ 13 ವರ್ಷಗಳಿಂದ ಅನ್ನ ಊಟ ಮಾಡಿಲ್ಲ. ದಶಕಗಳ ಹಿಂದೆ ಆಕೆ ಒಂದು ದಿನ ಊಟಕ್ಕೆ ಕೂತಾಗ ತಿನ್ನುತ್ತಿದ್ದ ಅನ್ನ ವಾಂತಿಯಾಗಿತ್ತು. ಮತ್ತೆಂದೂ ಆಕೆ ಊಟ ಮಾಡಿಲ್ಲ. ಅಂದಿನಿಂದ ಇಂದಿವರೆಗೂ ಆಕೆಗೆ ಅನ್ನ ಕಂಡಾಗಲೆಲ್ಲ ವಾಂತಿ ಬರುತ್ತಿದೆ. ಹಾಗಾಗಿ ಆಕೆ ಅನ್ನ ತಿನ್ನುವ ಪ್ರಯತ್ನವನ್ನೇ ಬಿಟ್ಟುಬಿಟ್ಟಿದ್ದಾಳೆ. ಅನ್ನ ತಿನ್ನಿಸಲು ಆಕೆಯ ಕುಟುಂಬದವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕುಟುಂಬಸ್ಥರು ಆಕೆಗೆ ಊಟ ಮಾಡಿಸಲು ವೈದ್ಯರ ಬಳಿ ಕರೆದುಕೊಂಡು ಹೋದರೂ ಆಕೆ ಮನಸ್ಸು ಬದಲಾಯಿಸಿಲ್ಲ.

ಇದೀಗ ಸೀಮೆಸುಣ್ಣವೇ ಆಕೆಯ ಊಟವಾಗಿದೆ. ಚಾಕ್ ಪೀಸ್ ಅನ್ನು ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ, ನಾವು ಬೆಲ್ಲದ ಪೀಸ್ ಕಚ್ಚಿ ತಿಂದಂತೆ ಆಕೆ ಕಳೆದ 13 ವರ್ಷಗಳಿಂದ ಸೀಮೆಸುಣ್ಣದ ತುಂಡುಗಳನ್ನು ತಿನ್ನುತ್ತಿದ್ದಾಳೆ. ಊಟ ಉಪಚಾರವಿಲ್ಲದೆ ಕೇವಲ ಚಾಕು ಪೀಸ್ ತಿಂದರೂ ಅಜ್ಜಿ ಇವತ್ತಿಗೂ ಗಟ್ಟಿ ಮುಟ್ಟಾಗಿದ್ದಾರೆ. ಈಕೆಯ ಬಳಿ ಯಾವುದೇ ಖಾಯಿಲೆ ಕೂಡಾ ಸುಳಿದಿಲ್ಲ.

ಆಕೆಯ ಮನೆಯಲ್ಲಿ ಆಕೆಗಾಗಿ ಅಡುಗೆ ಮಾಡುವುದನ್ನು ನಿಲ್ಲಿಸಲಾಗಿದೆ. ಆಕೆ ಇತರ ತಿಂಡಿಗಳನ್ನು ಸಹ ಮುಟ್ಟುವುದಿಲ್ಲವಾದುದರಿಂದ ಹಾಕಿಗಾಗಿ ಯಾವುದೇ ಅಡಿಗೆ ಮನೆಯಲ್ಲಿ ತಯಾರಿಸುವುದಿಲ್ಲ. ಸೀಮೆ ಸುಣ್ಣದ ತುಂಡುಗಳು ತಿನ್ನುವುದನ್ನು ನೋಡಿ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲ, ಆಕೆಯನ್ನು ಯಾರದಾದರೂ ತಮ್ಮ ಮನೆಗೆ ಕರೆದರೆ ಅವರು ಕೂಡಾ ಸೀಮೆ ಸುಣ್ಣದ ತುಂಡುಗಳನ್ನು ನೀಡಬೇಕು. ಅದು ಬಿಟ್ಟು ಬೇರೇನನ್ನೂ ಆಕೆ ಮುಟ್ಟುವುದಿಲ್ಲ. ಏಕೆ ಈ ವಿಚಿತ್ರ ಅಭ್ಯಾಸದಿಂದ ಈಕೆ ಸುತ್ತಮುತ್ತಲು ಪ್ರಚಾರ ಪಡೆದುಕೊಂಡಿದ್ದು ಈಕೆಯನ್ನು ನೋಡಲು ಹಲವು ಊರುಗಳಿಂದ ಜನ ಬರುತ್ತಿದ್ದಾರೆ.

Leave A Reply

Your email address will not be published.