ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್: ನಮಾಝ್ ಮಾಡಿ ಪ್ರಾರ್ಥಿಸಿದ ಮುಸ್ಲಿಮರು – Viral Video

ISRO:ಭಾರತೀಯರ ಮಹಾ ನಿರೀಕ್ಷೆಯ, ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan 3) ಯಶಸ್ವಿಯಾಗಲಿ ಎಂದು ಸುಬ್ರಹ್ಮಣ್ಯದಲ್ಲಿ ಕಟೀಲಿನಲ್ಲಿ ಪ್ರಾರ್ಥನೆ ನಡೆದಿತ್ತು. ಇದೀಗ ಮುಸ್ಲಿಮರು ಮಸೀದಿಯಲ್ಲಿ ನಮಾಜ್‌ (Namaz) ಮಾಡಿ ಪ್ರಾರ್ಥಿಸಿ ಚಂದ್ರಯಾನ 3 ಯಶಸ್ವಿಗೆ ಹಾರೈಸಿದ್ದಾರೆ.

 

ಬಾಹ್ಯಾಕಾಶ ನೌಕೆ ಚಂದ್ರಯಾನ-3 ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್‌ ಆಗಲಿ ಎಂದು ಮುಸ್ಲಿಮರು ಉತ್ತರ ಪ್ರದೇಶದ ಲಕ್ನೋದ ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದಲ್ಲಿ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಯಾವುದೇ ಅಡೆ-ತಡೆ ಇಲ್ಲದೆ ಚಂದ್ರಯಾನ 3 ರ ಯಶಸ್ವಿ ಲ್ಯಾಂಡಿಂಗ್‌ಗಾಗಿ ಮುಸ್ಲಿಂ ಸಮುದಾಯದ ಸದಸ್ಯರು ಪ್ರಾರ್ಥನೆ ಸಲ್ಲಿಸುವ ವೀಡಿಯೋ ಇದೀಗ ಮಾಧ್ಯಮಗಳಲ್ಲಿ ವರದಿ ಆಗಿದೆ. ಇದಕ್ಕೂ ಮುನ್ನ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಸ್ಮೂತ್ ಲ್ಯಾಂಡಿಂಗ್ ಆಗಿ ಇಳಿಯಲು ಉತ್ತರ ಪ್ರದೇಶದ ವಾರಣಾಸಿಯ ಕಾಮಾಖ್ಯ ದೇವಸ್ಥಾನದಲ್ಲಿ ಹವನ ನಡೆಸಲಾಯಿತು.

ಕಳೆದ ಸಲ ಕೊನೆಯ ಹಂತದಲ್ಲಿ, ಇನ್ನೇನು ಕೆಲ ನಿಮಿಷದಲ್ಲಿ ಚಂದ್ರನ ಮೇಲೆ ಲ್ಯಾಂಡರ್ ಇಳಿದು ಬಿಡಬೇಕು ಅನ್ನುವಷ್ಟರಲ್ಲಿ ಎಡವಟ್ಟು ಸಂಭವಿಸಿತ್ತು. ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಸನ್ನಿವೇಶದಲ್ಲಿ ಚಂದ್ರಯಾನ್ 2 ಲ್ಯಾಂಡರ್ ಮಾಡಿ ಅಲ್ಲಿಂದ ಬರುವ ಸಿಗ್ನಲ್ ಕಡಿತಗೊಂಡಿತ್ತು. ಹಾಗೆ ಚಂದ್ರಯಾನ 2 ವಿಫಲಗೊಂಡ ನಂತರ ಮೂರು ವರ್ಷಗಳಲ್ಲಿ ಮತ್ತೆ ಚಂದ್ರಯಾನ್ 3 ಅನ್ನು ಕಳಿಸುತ್ತಿದೆ ಭಾರತ. ಈಗ ಚಂದ್ರಯಾನ್ 3 ಮಿಷನ್ ಸಕ್ಸಸ್ ಆಗಲು ಇಡೀ ಭಾರತ ಧರ್ಮಾತೀತವಾಗಿ ಪ್ರಾರ್ಥಿಸುತ್ತಿದೆ. ಇಸ್ರೋ ಚಂದ್ರಯಾನ-3 ಮಿಷನ್‌ ಕೈಗೊಂಡಿದ್ದು, ಜು.14 ರಂದು ಚಂದ್ರಯಾನ 3 ನೌಕೆ ಉಡಾವಣೆ ಮಾಡಿತ್ತು. ನಾಳೆ, ಅಂದರೆ ಆಗಸ್ಟ್ 23 ರಂದು ನೌಕೆಯನ್ನು ಚಂದ್ರನ ಮೇಲೆ ಲ್ಯಾಂಡಿಂಗ್‌ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ.

ಇದನ್ನೂ ಓದಿ : ‘ರಂಗಿನ ರಾಟೆ ‘ ಎಂಬ ವಿಚಿತ್ರ ಹೆಸರಿನ ಚಿತ್ರದ ನಿರ್ದೇಶಕ ರಾಟೆ ಎಳೆದ ಸುದ್ದಿ ಮೋಸ ಹೋದ ಯುವತಿಯಿಂದ ಪೊಲೀಸ್ ದೂರು !

Leave A Reply

Your email address will not be published.