Karnataka: ಬಂದ್ ಆಗುತ್ತಾ ಕರ್ನಾಟಕ ? ಸಿಎಂ ಸಭೆ ಬಹಿಷ್ಕರಿಸಿದ ಖಾಸಗಿ ಸಾರಿಗೆ ಒಕ್ಕೂಟಗಳ ನಡೆ ನಿಗೂಢ !

Karnataka getting shut down the private transport unions that boycotted the CM meeting

Karnataka: ಕರ್ನಾಟಕದಲ್ಲಿ (Karnataka)ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಮಣಿಗಳು ತೀರಾ ಸಂತಸ ಪಟ್ಟದ್ದು ಸಹಜ. ಒಬ್ಬರ ಲಾಭ ಇನ್ನೊಬ್ಬರಿಗೆ ನಷ್ಟ ಅನ್ನುವಂತೆ, ಖಾಸಗಿ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸಿ ಬದುಕಿಗೆ ಕಷ್ಟಪಡುತ್ತಿರುವುದು ಹಗಲಿನಷ್ಟೇ ಸತ್ಯ. ಈ ಸಂಬಂಧ ಖಾಸಗಿ ಸಾರಿಗೆ ಸಂಘಟನೆಗಳು ಮತ್ತು ಸರ್ಕಾರದ ಮಧ್ಯೆ ಸಭೆ ನಡೆದಿದೆ. ಮುಖ್ಯಮಂತ್ರಿಗಳು ಕರೆದ ಸಭೆಯನ್ನು ಖಾಸಗಿ ಸಾರಿಗೆ ಸಂಘಟನೆಗಳು ಮತ್ತು ಸರ್ಕಾರಕ್ಕೆ ಮತ್ತೊಮ್ಮೆ ಬೆಂಗಳೂರು ಬಂದ್ ಯಾ ಕರ್ನಾಟಕ ಬಂದ್ ಮಾಡುವ ಎಚ್ಚರಿಕೆಯನ್ನು ಕೂಡ ನೀಡಿದೆ. ಹಾಗಾಗಿ ಬೆಂಗಳೂರು ಮತ್ತು ಇಡೀ ಕರ್ನಾಟಕ ಬಂದ್ ಆಗುತ್ತಾ ಎನ್ನುವ ದೊಡ್ಡ ಪ್ರಶ್ನೆ ಎದುರಾಗಿದೆ.

ಈಗಾಗಲೇ ಖಾಸಗಿ ಸಾರಿಗೆ ಸಂಸ್ಥೆಗಳ ಜೊತೆ ಸಾರಿಗೆ ಸಚಿವ ಲಾವ್ ರಾಮಲಿಂಗ ರೆಡ್ಡಿ ಅವರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಯಾವುದು ಕೂಡಾ ಫಲಪ್ರದವಾಗಿಲ್ಲ. ಯಾವುದಕ್ಕೂ ಒಂದು ತಾರ್ತಿಕ ಅಂತ್ಯ ಅಂತ ಇಲ್ಲಿಯ ತನಕ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಖುದ್ದು ಸಾರಿಗೆ ಒಕ್ಕೂಟದ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ಸದಸ್ಯರು ತಮ್ಮ ಸಮಸ್ಯೆ ದುಃಖ ದುಮ್ಮಾನಗಳನ್ನು ಹೇಳಿಕೊಂಡಿದ್ದಾರೆ. ಖಾಸಗಿ ಸಾರಿಗೆ ಸಂಘಟನೆಗಳ ಅಧ್ಯಕ್ಷ, ಖಾಸಗಿ ಬಸ್ ಸಂಘಟನೆಗಳ ಅಧ್ಯಕ್ಷ ಮತ್ತು ಆಟೋ ಅಸೋಸಿಯೇಷನ್ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಈ ಸಭೆಗೆ ಗೈರಾಗಿ ಅಚ್ಚರಿ ಮೂಡಿಸಿದ್ದಾರೆ.

ಸಭೆಗೆ ಗೈರಾದ ಸಾರಿಗೆ ಸಂಘಟನೆಗಳು ವಿಭಿನ್ನವಾದ ಉತ್ತರವನ್ನು ನೀಡಿವೆ. ಸಾರಿಗೆ ಕಮಿಷನರ್ ಹೇಮಂತ ಕುಮಾರ್ ಸಾರಿಗೆ ಸಂಘಗಳನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ನಿಜಕ್ಕೂ ಹೋರಾಟಕ್ಕೆ ಬೆಂಬಲ ಸೂಚಿಸದ ಕೆಲವೇ ಕೆಲವು ಸಂಘಟನೆಗಳನ್ನು ಮಾತ್ರ ಸಭೆಗೆ ಕರೆಯಲಾಗಿದೆ. ಎಲ್ಲರನ್ನೂ ಕರೆದಿಲ್ಲ. ಸಿಎಂ ಸಭೆಯನ್ನು ಒಟ್ಟು 32 ಸಂಘಟನೆಗಳು ಬಹಿಷ್ಕರಿಸಿವೆ. ಇನ್ನಾದರೂ ಎಲ್ಲರನ್ನೂ ಕರೆದು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಇನ್ನೂ 10 ದಿನಗಳ ಕಾಲಾವಕಾಶ ಇದೆ ತಪ್ಪಿದಲ್ಲಿ ಸೆಪ್ಟೆಂಬರ್ ಒಂದರಂದು ಮುಂದಿನ ಹೋರಾಟದ ದಿನಾಂಕ ಪ್ರಕಟಿಸುತ್ತೇವೆ ಎಂದಿದ್ದಾರೆ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ.

ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಭೆಯಲ್ಲಿ ಭಾಗವಹಿಸಿದ ಸಾರಿಗೆ ಸಂಘಟನೆಗಳ ಕೆಲ ಸದಸ್ಯರು ಮಾತನಾಡಿ, ಆಟೋ ಅಸೋಸಿಯೇಷನ್ ಭೇಟಿಗೆ ಮನವಿ ಮಾಡಿದ್ದೇವೆ. ನಾವು ಅಕ್ಟೋಬರ್ 30 ರವರೆಗೆ ಕಾಯುತ್ತೇವೆ. ಅಲ್ಲಿಯತನಕ ಬೇಡಿಕೆ ಈಡೇರಿದೆ ಇದ್ದಲ್ಲಿ ಮತ್ತೆ ಮುಂದಿನ ಹೋರಾಟ ಮಾಡುವ ಎಚ್ಚರಿಕೆ ನೀಡುತ್ತಿದ್ದೇವೆ ಎಂದಿದ್ದಾರೆ. ಒಟ್ಟಾರೆ ವಿಭಿನ್ನ ಮನಸ್ಥಿತಿಯ ಸಂಘಟನೆಗಳು ಏಕ ಉದ್ದೇಶಕ್ಕಾಗಿ ತಮ್ಮ ತಮ್ಮ ಬೇಡಿಕೆ ಇಡುತ್ತಿದ್ದು ಸರ್ಕಾರ ಇವರಿಗೆ ಯಾವುದೇ ಬೇಡಿಕೆಯನ್ನು ಪುರಸ್ಕರಿಸಿಲ್ಲ. ಯಾವುದೇ ಒಂದು ಬೇಡಿಕೆ ಈಡೇರಿಸುವ ಖಚಿತ ಭರವಸೆ ಸರ್ಕಾರದ ಕಡೆಯಿಂದ ಬಂದಿಲ್ಲ. ಹಾಗಾಗಿ ಸೆಪ್ಟೆಂಬರ್ ನಲ್ಲಿ ಬೆಂಗಳೂರು ಮತ್ತು ಕರ್ನಾಟಕ ಸ್ತಬ್ಧವಾಗುವ ಎಲ್ಲಾ ಸನ್ನಿವೇಶ ಕಂಡುಬರುತ್ತಿದೆ.

ಇದನ್ನೂ ಓದಿ: ಬಾಡಿಗೆಗೆ ಬಂದ ಮಹಿಳೆಯ ಸ್ನಾನ ಮಾಡುವ ವಿಡಿಯೋ ಮಾಡಿದ, ಮನೆ ಬಾಡಿಗೆ ಕೊಟ್ಟ ಮಾಲೀಕನಿಂದಲೇ ಕೃತ್ಯ

Leave A Reply

Your email address will not be published.