KSRTC ಅಂದ್ರೆ ಇನ್ನು ಕೇವಲ ಬಸ್ ಮಾತ್ರ ಅಲ್ಲ !ಅರೆ, ಹೊಸ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಕೆಎಸ್’ಆರ್’ಟಿಸಿ ಸಂಸ್ಥೆ !

Karnataka news KSRTC that has entered a new field KSRTC to add truck to logistics services

KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆ ಎಸ್ ಆರ್ ಟಿ ಸಿ ರಾಜ್ಯದ ಅಷ್ಟೇ ಅಲ್ಲ, ದೇಶದ ಒಂದು ಅತ್ಯಂತ ಸುರಕ್ಷಿತ ಸಾರಿಗೆ ಸಂಸ್ಥೆ. ಇಷ್ಟು ದಿನ ಮನುಷ್ಯರನ್ನು ಮತ್ತು ಒಂದು ಊರಿನಿಂದ ಇನ್ನೊಂದು ಊರಿಗೆ ಜನರ ಜತೆ ಅವರ ಕನಸುಗಳನ್ನು ಕೂಡಾ ಹೊತ್ತು ತಿರುಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಇನ್ನು ಮುಂದೆ ಲಗೇಜ್ ಹೊತ್ತು ತಿರುಗಲು ರೆಡಿಯಾಗಿವೆ. ಹೌದು ಇನ್ಮುಂದೆ ಕೆಎಸ್ಆರ್ಟಿಸಿ( KSRTC) ಲಾರಿಗಳು ರಸ್ತೆ ಗಿಳಿಯಲಿವೆ ಕೆಎಸ್ಆರ್ಟಿಸಿ ಲಾಜಿಸ್ಟಿಕ್ ಸಂಸ್ಥೆ ಅಸ್ತಿತ್ವಕ್ಕೆ ಬರಲು ಸಕಲ ತಯಾರಿ ನಡೆದಿದೆ.

ರಾಜ್ಯದಲ್ಲಿ ಶಕ್ತಿ ಯೋಜನೆಗೆ ಬಲ ತುಂಬಿದ ನಂತರ ಮಹಿಳೆಯರು ಖುಷಿಯಲ್ಲಿ ಉಚಿತವಾಗಿ ಊರೂರು ತಿರುಗಾಡುತ್ತಿದ್ದಾರೆ. ಇದು ಸಂಸ್ಥೆ ಮೇಲೆ ಒಂದಷ್ಟು ಹಣಕಾಸಿನ ಒತ್ತಡ ಉಂಟಾಗಿದೆ. ಈ ನಿಟ್ಟಿನಲ್ಲಿ ಕೆಎಸ್ಆರ್ಟಿಸಿಗೆ ಇನ್ನಷ್ಟು ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಿಕೊಡುವ ಕಾರಣದಿಂದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮ ತನ್ನ ವ್ಯಾಪ್ತಿಯಲ್ಲಿ ಲಾರಿ ಕೊಳ್ಳಲು ತಯಾರಿ ನಡೆಸಿದೆ. ಆ ಮೂಲಕ ಕೊರಿಯರ್ ಮತ್ತು ಲಗ್ಗೇಜ್ ಗಳನ್ನು ರಾಜ್ಯ ವ್ಯಾಪಿ ಸಾಗಣೆ ಮಾಡಲು ಚಿಂತನೆ ನಡೆಸಿದೆ.

ಈಗ ಕೇವಲ ಬಸ್ಸಿನಲ್ಲಿ ಚಲಿಸುವ ಪ್ರಯಾಣಿಕರಿಗೆ ಮಾತ್ರ ಪಾರ್ಸೆಲ್ ಮತ್ತು ಇತರ ಸರಕು ಸಾಗಣೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಅದರಿಂದ ವಾರ್ಷಿಕವಾಗಿ ಬರುವ ಆದಾಯ ಅತ್ಯಂತ ಕಡಿಮೆಯಾಗಿದೆ. ಇತ್ತೀಚೆಗೆ ಸರಕು ಸಾಗಾಣಿಕೆ ವ್ಯವಹಾರ ಎಲ್ಲಾ ಕಡೆಯೂ ಜೋರಾಗಿ ನಡೆಯುತ್ತಿದ್ದು ಪ್ರತಿಷ್ಠಿತ ಸಂಸ್ಥೆಯಾದ ಕೆ ಎಸ್ ಆರ್ ಟಿ ಸಿ ಸಾಗಾಣಿಕಾ ಕ್ಷೇತ್ರಕ್ಕೆ ಲಗ್ಗೆ ಇಡುವ ಯೋಜನೆ ಹಾಕಿಕೊಂಡಿದೆ. ಈ ಮೂಲಕ ವಾರ್ಷಿಕವಾಗಿ ಕನಿಷ್ಠ 100 ಕೋಟಿ ಗಳಿಸುವ ಪ್ಲಾನ್ ಕೆಎಸ್ಆರ್ಟಿಸಿದ್ದಾಗಿದೆ.

ರಾಜ್ಯದಾದ್ಯಂತ ಮತ್ತು ದೇಶದ ಹಲವು ಕಡೆಗಳಿಗೆ ಕೂಡ ತನ್ನ ನೆಟ್ವರ್ಕ್ ಅನ್ನು ಬೃಹತ್ ಆಗಿ ವ್ಯಾಪಿಸಿರುವ ಕೆಎಸ್ಆರ್ಟಿಸಿ ಸಂಸ್ಥೆಯಲ್ಲಿ ಲಕ್ಷಾಂತರ ಉದ್ಯೋಗಿಗಳಿದ್ದಾರೆ. ಹಲವಾರು ಸಾವಿರ ಡ್ರೈವರ್ ಗಳು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳೆಯ ಬಸ್ಸುಗಳನ್ನು ಮಾರ್ಪಾಡು ಮಾಡಿ ಇರುವ ಸಿಬ್ಬಂದಿಗಳನ್ನು ಸದ್ಬಳಕೆ ಮಾಡಿಕೊಂಡು, ಅಗತ್ಯ ಬಿದ್ದರೆ ಹೊಸಬರನ್ನು ನೇಮಕಾತಿ ಮಾಡಿಕೊಂಡು ಕೆಎಸ್ಆರ್ಟಿಸಿ ಲಾಜಿಸ್ಟಿಕ್ ಸೇವೆ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ. ಮುಂದೊಂದು ದಿನ ಸರ್ಕಾರಿ ನಿಯಂತ್ರಿತ ಈ ಸಂಸ್ಥೆ ವಿಆರ್’ಎಲ್ ನಂತಹ ಲಾಜಿಸ್ಟಿಕ್ ವ್ಯವಸ್ಥೆಗೆ ಒಗ್ಗಿಕೊಂಡು, ಈ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ರಂಗಿನ ರಾಟೆ ‘ ಎಂಬ ವಿಚಿತ್ರ ಹೆಸರಿನ ಚಿತ್ರದ ನಿರ್ದೇಶಕ ರಾಟೆ ಎಳೆದ ಸುದ್ದಿ, ಮೋಸ ಹೋದ ಯುವತಿಯಿಂದ ಪೊಲೀಸ್ ದೂರು !

Leave A Reply

Your email address will not be published.