‘ರಂಗಿನ ರಾಟೆ ‘ ಎಂಬ ವಿಚಿತ್ರ ಹೆಸರಿನ ಚಿತ್ರದ ನಿರ್ದೇಶಕ ರಾಟೆ ಎಳೆದ ಸುದ್ದಿ, ಮೋಸ ಹೋದ ಯುವತಿಯಿಂದ ಪೊಲೀಸ್ ದೂರು !

Sandalwood news cheating Young women for giving her chance in a movie allegation against rangina raate film director

Sandalwood news: ‘ರಂಗಿನ ರಾಟೆ ‘ ಎಂಬ ವಿಚಿತ್ರ ಹೆಸರಿನ ಸಿನಿಮಾ(Sandalwood news) ನಿರ್ದೇಶಕ ಸಂತೋಷ್ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟನಿಗೆ ಚಾನ್ಸ್ ಕೊಡಿಸುವುದಾಗಿ ತಮ್ಮಿಂದ ಹಣ ಪಡೆದಿರುವುದಾಗಿ ಯುವತಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಾಳೆ. ರಾಜೀವ್ ರಾಥೋಡ್ ದುನಿಯಾ ರಶ್ಮಿ ಮತ್ತು ಭವ್ಯ ಅಭಿನಯದ ಈ ಚಿತ್ರ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.

ಸಂತೋಷ್ ‘ ರಂಗಿನ ರಾಟೆ ‘ ಎನ್ನುವ ಚಿತ್ರದ ನಿರ್ದೇಶಕ ಆತ ತನಗೆ ಸಿನಿಮಾ ರಂಗದಲ್ಲಿ ಅವಕಾಶ ಕೊಡುತ್ತೇವೆ ಎಂದಿದ್ದರು. ಚಿತ್ರರಂಗದಲ್ಲಿ ನಟಿಯಾಗಿ ಬೆಳೆಯಬೇಕು ಎಂದು ನಾನು ಕಂಡಿದ್ದೆ. ಆ ಕನಸಿಗೆ ಅನುಗುಣವಾಗಿ ‘ರಂಗಿನ ರಾಟೆ’ ಚಿತ್ರದ ನಿರ್ದೇಶಕ ತನ್ನಿಂದ ಹಣ ಪಡೆದುಕೊಂಡಿದ್ದಾರೆ. ಹಣ ಪಡೆದು ಅವಕಾಶ ಕೊಡುತ್ತೇನೆ ಎಂದಿದ್ದರು. ಆದರೆ ಹಣ ಪಡೆದರೂ, ಆತ ಅವಕಾಶ ಕಲ್ಪಿಸಿರಲಿಲ್ಲ ಎಂದು ಯುವತಿ ಸಂತೋಷ್ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ.

ತಾನು ಹಣವನ್ನು ಆನ್ಲೈನ್ ಮೂಲಕ ಆತನಿಗೆ ಹಾಕಿದ್ದೆ ಎಂದು ನಟನೆಯಲ್ಲಿ ಆಸಕ್ತಿ ಇದ್ದ ಆ ಯುವತಿ ದೂರಿದ್ದಾಳೆ. ಇದೀಗ ಸ್ಥಳೀಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಬಂದ್ ಆಗುತ್ತಾ ಕರ್ನಾಟಕ ? ಸಿಎಂ ಸಭೆ ಬಹಿಷ್ಕರಿಸಿದ ಖಾಸಗಿ ಸಾರಿಗೆ ಒಕ್ಕೂಟಗಳ ನಡೆ ನಿಗೂಢ !

Leave A Reply

Your email address will not be published.