Harshika poonachcha: ಗೃಹಪ್ರವೇಶದ ಹೊತ್ತಲ್ಲಿ ಮನೆಗೆ ಹೊಕ್ಕ ಹರ್ಷಿಕಾ ಪೂಣಚ್ಚ, ಗನ್ ಎತ್ತಿ ಗುಂಡು ಹಾರಿಸಿದ ಭಾವೀ ಪತಿ ಭುವನ್ ಪೊನ್ನಣ್ಣ !

Sandalwood news harshika poonachcha entered her fiance Bhuvan ponnannaa new house before marriage

Harshika poonachcha: ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ( Harshika poonachcha) ಹೊಸ ಮನೆ ಒಂದಕ್ಕೆ ಪ್ರವೇಶ ಮಾಡಿದ ಸಂದರ್ಭ, ಆಕೆಯನ್ನು ಮದುವೆ ಆಗುತ್ತಾರೆ ಎನ್ನಲಾದ ಭುವನ್ ಪೊನ್ನಣ್ಣ ಗನ್ ಎತ್ತಿ ಗುಂಡು ಹಾರಿಸಿ ಸುದ್ದಿಯಾಗಿದ್ದಾರೆ. ಹೌದು, ಕೊಡಗಿನ ಬೆಡಗಿ ಹರ್ಷಿಕಾ ಪೂರ್ಣಚ್ಚ ಹೊಸದಾಗಿ ಗೃಹಪ್ರವೇಶ ಆಗಲಿರುವ ಮನೆಗೆ ಹೊಕ್ಕಾಗ, ಅಲ್ಲಿ ಭುವನ್ ಗನ್ ಹಿಡಿದು ಗುಂಡು ಹಾರಿಸಿದ್ದಾರೆ. ಏನಾಯ್ತಪ್ಪ ನಮ್ಮ ಭುವನ್ ಮತ್ತು ಹರ್ಷಿಕ ಪೂರ್ಣಚ್ಚಕ್ಕೆ ಅಂತ ಗಾಬರಿ ಆಗಬೇಡಿ. ಅಂತದ್ದು ಏನೂ ಆಗಿಲ್ಲ !

ಹೌದ, ಭುವನ್ ಪೊನ್ನಣ್ಣ ಮದುವೆಯಾಗಲಿರುವ ಮದುಮಗಳು ಹರ್ಷಿಕಾ ಮದುವೆಗೆ ಮುನ್ನವೇ ಭುವನ ಅವರ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಆ ಮನೆಯ ಗ್ರಹಪ್ರವೇಶ ಕೊಡವ ಸಂಸ್ಕೃತಿಯಂತೆ ನಡೆದಿದೆ. ಅಲ್ಲಿ ಕೈಯಲ್ಲಿ ದೀಪ ಹಿಡಿದು ಬಂದ ಪೊನ್ನಣ್ಣನ ಪ್ರೀತಿಯ ಪೊಣ್ಣು ಹರ್ಷಿಕಾ ಪೂಣಚ್ಚ ಹೊಸ ಮನೆಯಲ್ಲಿ ದೀಪ ಇಟ್ಟು ಬೆಳಗಿದ್ದಾಳೆ. ಆ ಸಂದರ್ಭದಲ್ಲಿ ಕೊಡವ ಶೈಲಿಯಲ್ಲಿ ಗುಂಡು ಹಾರಿಸಿ ಶುಭ ಕಾರ್ಯ ಶುರು ಮಾಡಿದ್ದಾರೆ ಈ ಸಂಭ್ರಮದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಭುವನ್ ಪನ್ನಣ್ಣ ಮತ್ತು ಹರ್ಷಿಕ ತಮ್ಮ ಮದುವೆಯ ಆಹ್ವಾನ ಪತ್ರಿಕೆ ವಿತರಣಾ ಕಾರ್ಯದಲ್ಲಿ ನಿರತರಾಗಿದ್ದು ಚಿತ್ರರಂಗದ ಹಲವು ಗಣ್ಯರನ್ನು ಮತ್ತು ಇತರ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ತಮ್ಮ ವಿವಾಹಕ್ಕೆ ಆಹ್ವಾನಿಸಿದ್ದಾರೆ. ಇನ್ನೂ ಆಹ್ವಾನ ಪತ್ರಿಕೆ ವಿತರಣಾ ಕಾರ್ಯ ಮುಂದುವರೆದಿದೆ. ಹಲೋ, ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿರುವ ಹರ್ಷಿಕಾ ಪೂರ್ಣಚಂದ್ರ ಮತ್ತು ನಟ ಭುವನ್ ಪನ್ನಣ್ಣ ಬಹುಕಾಲ ತಮ್ಮಿಬ್ಬರ ಪ್ರೀತಿಯ ವಿಷಯವನ್ನು ಗುಟ್ಟಾಗಿ ಇರಿಸಿದ್ದರು ಆದರೆ ಇದೀಗ ಅವರ ಮದುವೆ ದಿನಾಂಕ ನಿಷ್ಕರ್ಷ ಆಗಿದ್ದು, ಇನ್ನೆರಡು ದಿನಗಳಲ್ಲಿ ಅಂದರೆ ಆಗಸ್ಟ್ 24 ಮತ್ತು 25 ರಂದು ಕೊಡಗಿನಲ್ಲಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ.

ಮದುವೆ ಆಗಿ ಸಂಸಾರ ಹೂಡಲಿರುವ ಈ ಜೋಡಿ ಹೊಸದಾಗಿ ಕಟ್ಟಿಸಿದ ಮನೆಯ ಗೃಹಪ್ರವೇಶ ನಡೆಸಿದ್ದು, ಅಲ್ಲಿಂದಲೇ ಇವರಿಬ್ಬರ ಸಂಸಾರ ರಥದ ತೇರು ಎಳೆಯಲು ಶುರುವಾಗಲಿದೆ. ಹೊಸ ಮನೆಯ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಆಪ್ತೇಷ್ಠರು ಮಾತ್ರ ಇದ್ದು ಮದುವೆಗೆ ಹಿರಿತೆರೆ ಮತ್ತು ಕಿರಿ ತೆರೆಯ ಕಲಾವಿದರ ದಂಡೆ ಆಗಮಿಸುವ ನಿರೀಕ್ಷೆಯಿದೆ. ಇನ್ನೊಂದು ಸೆಲೆಬ್ರಿಟಿ ಮದುವೆಗಾಗಿ ಸ್ಯಾಂಡಲ್ ವುಡ್ ಕಾಯುತ್ತಿದೆ.

ಇದನ್ನೂ ಓದಿ: ಇನ್ಫೋಸಿಸ್, ಟಿಸಿಎಸ್ ಮುಂತಾದ 13 ದಿಗ್ಗಜ ಕಂಪನಿಗಳ 17 ಲಕ್ಷ ಸಂಬಳದ ಜಾಬ್ ತಿರಸ್ಕರಿಸಿದ ‘ನಮ್ಮ ಬೆಂಗಳೂರು’ ಹುಡುಗಿ ! ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ !

Leave A Reply

Your email address will not be published.