ಹಲವು ಪ್ರಥಮಗಳಿಗೆ ಚಂದ್ರಯಾನ 3 ಸಾಕ್ಷಿ: ಯೂ ಟ್ಯೂಬ್ ನಲ್ಲಿ ISRO ಮಾಡಿದ ವರ್ಲ್ಡ್ ನಂ.1 ಸಾಧನೆ ಏನು ಗೊತ್ತಾ ?

ಚಂದ್ರಯಾನ ಮೂರು ಭರ್ಜರಿ ಯಶಸ್ಸು ಕಂಡಿದ್ದು ಚಂದ್ರನ ಮೇಲ್ಮೈಯಲ್ಲಿ ಮೆಲ್ಲನೆ ಹೂವಿನ ಚೆಂಡು ಕೆಳಗಿಳಿಸಿದಂತೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ ವಿಕ್ರಂ ಲ್ಯಾಂಡರ್. ಈ ಮೂಲಕ ಭಾರತವು ಚಂದ್ರನ ಅಂಗಳಕ್ಕೆ ಹೇಳಿದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಇದರ ಜೊತೆಗೆ ಇನ್ನೂ ಕೆಲವೊಂದು ದಾಖಲೆಗಳನ್ನು ಚಂದ್ರಯಾನ ಮಿಷನ್ ಮಾಡಿದೆ.(ISRO set record In You Tube)

ಅದರಲ್ಲಿ ಮುಖ್ಯವಾಗಿ ಕೇವಲ 615 ಕೋಟಿಗಳಲ್ಲಿ ಚಂದ್ರನಲ್ಲಿಗೆ ತಲುಪಿರುವ ಸಾಧನೆ ಮಾಡಿದೆ ಭಾರತದ ಪ್ರತಿಷ್ಠಿತ ಇಸ್ರೋ ಸಂಸ್ಥೆ. ಬೇರೆ ದೇಶಗಳ ಅಂತರಿಕ್ಷ ಯಾನದ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ಇದು ಏನೇನೂ ಅಲ್ಲ ಅನ್ನೋ ಮಟ್ಟಿಗಿನ ಮಿತವ್ಯಯದ ಖರ್ಚು. ನೀವು ಖರ್ಚು ಮಾಡಿದ್ದ ದುಡ್ಡಲ್ಲಿ ನಮಗೆ ಒಂದು ಸಿನಿಮಾ ಕೂಡ ತೆಗೆಯಲು ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದಾರೆ ಹಾಲಿವುಡ್ ನಿರ್ದೇಶಕ ನಿರ್ಮಾಪಕರು. ಈಗ ಇದರ ಜತೆಗೆ ಇನ್ನೊಂದು ದಾಖಲೆ ಬರೆದಿದೆ.

ಇವತ್ತು ದಾಖಲೆಯ ಮಟ್ಟದಲ್ಲಿ ಇಸ್ರೋ ಪ್ರಸಾರ ಮಾಡಿದ ಚಂದ್ರಯಾನ 3 ನೇರ ಪ್ರಸಾರವನ್ನು ದೇಶ ವಿದೇಶಗಳ ಜನರು ವೀಕ್ಷಿಸಿದ್ದಾರೆ. ಆ ಮೂಲಕ ಯೂಟ್ಯೂಬ್ ನಲ್ಲಿ ಸ್ಪ್ಯಾನಿಶ್ ಸ್ಟ್ರೀಮರ್ ರ 3.4 ಮಿಲಿಯನ್ ವೀಕ್ಷಣೆಯ ವಿಶ್ವ ದಾಖಲೆಯನ್ನು ಇಸ್ರೋ ಅಳಿಸಿ ಹಾಕಿದೆ. ಇದು ಈವರೆಗಿನ ಯೂಟ್ಯೂಬ್ ವೇದಿಕೆಯಲ್ಲಿ ನಡೆದ ಹೊಸ ಸ್ಟ್ರೀಮಿಂಗ್ ವಿಶ್ವ ದಾಖಲೆಯಾಗಿದೆ. ಅದನ್ನೀಗ ಅಳಿದು ಹೊಸ ದಾಖಲೆ ಇಸ್ರೋ ಹೆಸರಿನಲ್ಲಿ ಬರೆಯಲ್ಪಟ್ಟಿದೆ.

ಇಂದು ಲೈವ್ ಸ್ಟ್ರೀಮಿಂಗ್ ಆರಂಭವಾದ 15 ನಿಮಿಷಗಳಲ್ಲೇ 35 ಲಕ್ಷಕ್ಕೂ ಅಧಿಕ ಮಂದಿ ನೇರಪ್ರಸಾರ ನೋಡಲು ನುಗ್ಗಿ ಬಂದಿದ್ದಾರೆ. ಈ ಸಂಖ್ಯೆ ತನ್ನ 25 ನೇ ನಿಮಿಷದಲ್ಲಿ 45 ಲಕ್ಷಕ್ಕೂ ಅಧಿಕವಾಗಿ ಏರಿದೆ. ಆಗ ಯೂ ಟ್ಯೂಬ್ ನಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ನಂತರ ಕೆಲವೇ ನಿಮಿಷಗಳಲ್ಲಿ ಒಂದು ಹಂತದಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ವೀಕ್ಷಣೆ ಮಾಡಿದ್ದರು.

ಒಟ್ಟು 1 ಗಂಟೆ 11 ನಿಮಿಷಗಳ ಕಾಲ ನಡೆದ ಈ ನೇರಪ್ರಸಾರದ ಕಾರ್ಯದಲ್ಲಿ 33 ಲಕ್ಷಕ್ಕೂ ಅಧಿಕ ವ್ಯೂಸ್ ಸಿಕ್ಕಿದೆ. 24 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಇನ್ನೂ ವಿಶೇಷ ಎಂದರೆ ಇದೊಂದೇ ಲೈವ್ ಇಸ್ರೋ ಅಧಿಕೃತ ಯೂಟ್ಯೂಬ್ ಚಾನೆಲ್ ನ ಸಬ್ ಸ್ಕ್ರೈಬರ್ ಸಂಖ್ಯೆ ಚಂದ್ರನಲ್ಲಿಗೆ ಜಿಗಿದ ಹಾಗೆ ಹಾರಿದೆ. ಲೈವ್ ಆರಂಭದಲ್ಲಿ 2.59 ಮಿಲಿಯನ್ ಇದ್ದ ಸಬ್ ಸ್ಕ್ರೈಬರ್ ಸಂಖ್ಯೆ ಲೈವ್ ಮುಗಿಯುವಷ್ಟರಲ್ಲಿ 3.6 ಮಿಲಿಯನ್ ಗೂ ಅಧಿಕವಾಗಿದೆ. ಈ ರೀತಿಯಾಗಿ, ಚಂದ್ರಯಾನ 3 ಹಲವು ಪ್ರಥಮಗಳಿಗೆ ವಿಶೇಷಗಳಿಗೆ ಮತ್ತು ದಾಖಲೆಗಳಿಗೆ ಸಾಕ್ಷಿಯಾಗಿದೆ.

Leave A Reply

Your email address will not be published.