Child Marriage: 52 ವರ್ಷದ ಮುದುಕನಿಗೆ 16ರ ಬಾಲಕಿಯೊಂದಿಗೆ ಮದುವೆ ಮಾಡಿಸಿದ ತಂದೆ! ಕಾರಣ ನಿಜಕ್ಕೂ ಶಾಕಿಂಗ್‌!!!

Bihar news child marriage father forced minor daughter to marry with old man to pay off debt

Child Marriage: ತಂದೆಯೊಬ್ಬ ತನ್ನ 16 ವರ್ಷದ ಸ್ವಂತ ಮಗಳನ್ನು 52 ವರ್ಷದ ವ್ಯಕ್ತಿಗೆ ಮದುವೆ (Child Marriage) ಮಾಡಿಕೊಟ್ಟಿರುವ ಘಟನೆ ಬಿಹಾರದ (Bihar) ಭಾಗಲ್ಪುರದಲ್ಲಿ ನಡೆದಿದೆ. ಮದುವೆ ಆದ ಬಳಿಕ 16 ವರ್ಷದ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ತನ್ನ ನೋವನ್ನು ಹಂಚಿಕೊಂಡಿದ್ದಾಳೆ.

ಅಪ್ರಾಪ್ತ ಬಾಲಕಿಯ ತಾಯಿ ಕಳೆದ ವರ್ಷ ಡಿಸೆಂಬರ್ 2022ರಲ್ಲಿ ತೀರಿಕೊಂಡಿದ್ದರು. ಪತ್ನಿ ತೀರಿಹೋದ ಕೆಲವೇ ತಿಂಗಳಲ್ಲಿ ಬಾಲಕಿಯ ತಂದೆ ಮತ್ತೊಂದು ಮದುವೆಯಾಗಿದ್ದಾನೆ. ಈ ಮಧ್ಯೆ ಬಾಲಕಿಯ ತಂದೆ ಸಾಕಷ್ಟು ಸಾಲ ಮಾಡಿದ್ದು, ಸಾಲು ತೀರಿಸಲು ಹಣವಿರಲಿಲ್ಲ (money). ಹೀಗಾಗಿ 52 ವರ್ಷದ ವ್ಯಕ್ತಿ ನಿಮ್ಮ ಸಾಲವನ್ನು (loan) ನಾನು ತೀರಿಸುತ್ತೇನೆ. ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾನೆ. ಅದಕ್ಕೆ ಬಾಲಕಿಯ ಅಪ್ಪ ಮತ್ತು ಮಲತಾಯಿ ಮಗಳಿಗೆ ಒಪ್ಪಿಗೆ ಇಲ್ಲದಿದ್ದರೂ ಬಲವಂತವಾಗಿ ಮದುವೆ ಮಾಡಿದ್ದಾರೆ.

ಸಾಲ ತೀರಿಸುವ ಸಲುವಾಗಿ ಬಾಲಕಿಯನ್ನು 52ರ ಮುದುಕನಿಗೆ ಮದುವೆ ಮಾಡಿ ಕೊಡಲಾಗುತ್ತಿದೆ ಎಂಬ ಸುದ್ದಿ ಬಾಲಕಿಗೆ ತಿಳಿದಿಲ್ಲ
ಆಕೆಗೆ ತಿಳಿಯದ ಹಾಗೆ ತಂದೆ ಹಾಗೂ ಮಲತಾಯಿ ಜುಲೈ ತಿಂಗಳಲ್ಲಿ ಮಂದರ್ ಪರ್ಬತ್‌ಗೆ ಭೇಟಿ ನೀಡುವ ನೆಪದಲ್ಲಿ ಬಾಲಕಿಯನ್ನು ಕರೆದೊಯ್ದರು. ನಂತರ ಬಲವಂತವಾಗಿ ಆ ವ್ಯಕ್ತಿಯೊಂದಿಗೆ ಆಕೆಯನ್ನು ಮದುವೆ ಮಾಡಿಸಿದರು ಎಂದು ಆಕೆ ದೂರಿದ್ದಾಳೆ.

ಮದುವೆ ಬೇಡ, ನಾನು ಓದಬೇಕು ಎಂದು ಎಷ್ಟೇ ಬೇಡಿಕೊಂಡರೂ ಅವರು ಕೇಳಿರಲಿಲ್ಲ. ಆ ವ್ಯಕ್ತಿಯನ್ನು ಮದುವೆಯಾಗಿ ಬಾಲಕಿ ಆತನ ಮನೆಗೆ ಬಂದಾಗ ಆತ ಚಿತ್ರಹಿಂಸೆ ನೀಡಿದ್ದಾನೆ. ಮದುವೆಯಾದ 52 ವರ್ಷದ ಪತಿ ಬಾಲಕಿಯನ್ನು ಪ್ರತಿದಿನ ನಿಂದಿಸಿ ಹೊಡೆಯಲು ಪ್ರಾರಂಭಿಸಿದನು. ಬಂದೂಕು ತೋರಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಎಂದು ಬಾಲಕಿ ಹೇಳಿದ್ದಾಳೆ.

ಈ ಹಿಂಸೆ ತಾಳಲಾರದೆ ಒಂದು ದಿನ ಯಾರಿಗೂ ಗೊತ್ತಿಲ್ಲದ ಹಾಗೆ
ಬಾಲಕಿ ಅವನ ಮನೆಯಿಂದ ಓಡಿಹೋಗಿ ಭಾಗಲ್ಪುರದಲ್ಲಿರುವ ಅಕ್ಕನ ಮನೆಗೆ ಬಂದಳು. ನಂತರ ಕಳೆದ ಮಂಗಳವಾರ ಪತಿ ಮತ್ತು ತಂದೆಯ ವಿರುದ್ಧ ದೂರು ನೀಡಲು ಮಹಿಳಾ ಪೊಲೀಸ್ ಠಾಣೆಗೆ ಹೋಗಿದ್ದು, ಆದರೆ, ಮಹಿಳಾ ಪೊಲೀಸರು ಕೂಡ ಸಂತ್ರಸ್ತ ಬಾಲಕಿಯ ಸಹಾಯ ಬಂದಿಲ್ಲ ಎನ್ನಲಾಗಿದೆ. ಈ ಪ್ರಕರಣ ನಮ್ಮ ರಾಜ್ಯಕ್ಕೆ ಸೇರುವುದಿಲ್ಲ ಎಂದು ಠಾಣೆಯಿಂದ ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಭಾಗಲ್ಪುರ ಎ ಸ್ಪಿ ಆನಂದ್ ಕುಮಾರ್ ಗಮನಕ್ಕೆ ಬಂದು,ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು. ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದರೆ ಆಕೆಯ ಕುಟುಂಬದ ಸದಸ್ಯರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾತ್ರಿ ಮಲಗಿದ್ದು, ಬೆಳಿಗ್ಗೆ ಕೆಲಸ ಶುರು ಮಾಡಿದ ಪ್ರಜ್ಞಾನ್ ರೋವರ್, ಮೂನ್ ವಾಕ್ ಬಿಗನ್ !!!

Leave A Reply

Your email address will not be published.