Chandrayaan-3 mission: ರಾತ್ರಿ ಮಲಗಿದ್ದು, ಬೆಳಿಗ್ಗೆ ಕೆಲಸ ಶುರು ಮಾಡಿದ ಪ್ರಜ್ಞಾನ್ ರೋವರ್, ಮೂನ್ ವಾಕ್ ಬಿಗನ್ !!!

Chandrayaan-3 mission: Pragyan rover deployed takes a walk on Moon

Chandrayaan-3 mission: ನಿನ್ನೆ ಬುಧವಾರ ಆಗಸ್ಟ್ 23 ರ ಸಂಜೆ 6 ಗಂಟೆ 3 ನಿಮಿಷಕ್ಕೆ ಸರಿಯಾಗಿ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ (Chandrayaan-3 mission) ಮಾಡಿದ್ದ. ಅಲ್ಲಿ ತಾನು ಲ್ಯಾಂಡಿಂಗ್ ಆದ ನಂತರ ಅಲ್ಲಿಂದಲೇ ದೇಶಕ್ಕೆ ಶುಭ ಹಾರೈಕೆಗಳನ್ನು ವಿಕ್ರಂ ಲ್ಯಾಂಡರ್ ಕಳಿಸಿತ್ತು. ದೇಶದಾದ್ಯಂತ ಸಂಭ್ರಮಾಚರಣೆ ನಿನ್ನೆ ಜೋರಾಗಿತ್ತು.

ಸುದೀರ್ಘ 40 ದಿನಗಳ ಪ್ರಯಾಣದ ನಂತರ ಒಂದಷ್ಟು ಬಿಡುವು ಮಾಡಿಕೊಂಡಿದ್ದ ವಿಕ್ರಂ ಲ್ಯಾಂಡರ್. ನಿನ್ನೆ ಸಂಜೆಯಿಂದ ಇಂದು ಬೆಳಗಿನ ತನಕ ರೆಸ್ಟ್ ಪಡೆದ ನಂತರ ಎಂದು ವಿಕ್ರಂ ಲ್ಯಾಂಡರ್ ಒಳಗೆ ಮಲಗಿದ್ದ ಪ್ರಜ್ಞಾನ್ ರೋವರ್ ನಿಧಾನಕ್ಕೆ ಬಾಗಿಲು ತೆರೆದು ಹೊರಕ್ಕೆ ಬಂದಿದ್ದಾನೆ. ಇಂದು ಗುರುವಾರ ಬೆಳಗ್ಗೆ ಚಂದ್ರನ ಅಂಗಳದ ಮೇಲೆ ಸಣ್ಣಗೆ ಮೂನ್ ವಾಕ್ ಪ್ರಾರಂಭಿಸಿದ್ದಾನೆ ಪ್ರಜ್ಞಾನ್ ರೋವರ್. ಕರ್ತವ್ಯ ಪದ್ಯ ಮೇಲಿರುವ ಪ್ರಜ್ಞಾನ್ ತಾನು ಚಂದ್ರನಲ್ಲಿಗೆ ಬಂದು ಇಳಿದ ಕಾರಣಕ್ಕಾಗಿ ಕೆಲಸ ಶುರು ಮಾಡಿದ್ದಾನೆ.

ಹೌದು, ಚಂದ್ರಯಾನ್ 3 ಪ್ರಜ್ಞಾನ್ ರೋವರ್ ಚಂದ್ರನ ಅಂಗಳದಲ್ಲಿ ಇಳಿದು ಸರಿದಾಡಿದೆ. ಈ ವಿಷಯವನ್ನು ಹಂಚಿಕೊಂಡ ಇಸ್ರೋ ಭಾರತ ಚಂದ್ರನ ಮೇಲೆ ಹೆಜ್ಜೆ ಹಾಕಿದೆ ಎಂದು ಟ್ವಿಟರ್ ಮೂಲಕ ತಿಳಿಸಿದೆ. ಅಲ್ಲದೆ ಸ್ವಲ್ಪದರಲ್ಲಿ ಇನ್ನಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ವರನ ಕೈಯಲ್ಲಿದ್ದ ತಾಳಿ ಕಿತ್ತುಕೊಂಡು ದೇವರ ಹುಂಡಿಗೆ ಹಾಕಲು ಓಡಿದ ವಧು !

Leave A Reply

Your email address will not be published.