Dakshina Kannada crime news: ದಕ್ಷಿಣ ಕನ್ನಡ: ಹಾಡು ಹಗಲೇ ಯುವತಿಯ ಕತ್ತಿಗೆ ಚಾಕು ಇರಿತ; ವಿಟ್ಲದ ಯುವತಿ ಆಸ್ಪತ್ರೆಗೆ ದಾಖಲು, ಮಹಿಳಾ ಠಾಣೆಯ ಹತ್ತಿರವೇ ನಡೆದ ಘಟನೆ

Puttur: A young woman was stabbed near the police station

Dakshina Kannada crime news: ನಗರದ ಮಹಿಳಾ ಠಾಣಾ ಬಳಿಯಲ್ಲೇ ಯುವತಿಯೋರ್ವಳಿಗೆ ಯುವಕನೋರ್ವ ಚೂರಿ ಇರಿದು ಕೊಲೆಗೆ ಯತ್ನಿಸಿದ ಘಟನೆಯೊಂದು ವರದಿಯಾಗಿದೆ. ದುಷ್ಕೃತ್ಯ ನಡೆಸಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಾಯಾಳು ಯುವತಿಯನ್ನು ವಿಟ್ಲ ಮೂಲದ ಗೌರಿ (20) ಎಂದು ಗುರುತಿಸಲಾಗಿದೆ. ಯುವತಿಯು ಪುತ್ತೂರಿಗೆ ಬಂದಿದ್ದಾಗ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಮಹಿಳಾ ಠಾಣಾ ಬಳಿಯಲ್ಲೇ ಕೃತ್ಯ ನಡೆದಿದೆ. ಆರೋಪಿಯು ಯುವತಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಚೂರಿ ಇರಿದಿದ್ದಾನೆ ಎಂದು ಹೇಳಲಾಗಿದೆ.

ವಿಟ್ಲಾ ಮೂಲದ ಯುವತಿಯ ಮತ್ತು ಚೂರಿ ಹಾಕಿದ ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ. ಸದ್ಯಕ್ಕೆ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಸರ್ಕಾರೀ ಬಸ್ ನಿಲ್ದಾಣದ ಬಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಹುಡುಗಿ ಗೌರಿ. ಚೂರಿ ಇರಿದ ಯುವಕ ಬಂಟ್ವಾಳದ ಸರಪಾಡಿ ಬಳಿಯವನು ಎನ್ನುವ ಮಾಹಿತಿ ಲಭ್ಯವಾಗಿದೆ. ಯುವತಿ ನಡೆದುಕೊಂಡು ಹೋಗುತ್ತಿದ್ದಾಗ, ಬೈಕಿನಲ್ಲಿ ಬಂದ ಯುವಕ ಆಕೆಯ ಮೇಲೆ ದಾಳಿ ನಡೆಸಿದ್ದ. ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ನಂತರ ಅಲ್ಲಿಂದ ಕಾಲು ಕಿತ್ತಿದ್ದಾನೆ. ಈಗ ಪೊಲೀಸರು ತನಿಖೆ ನಡೆಸುತ್ತಿದ್ದು,ನಗರದ ಸಿಸಿಟಿವಿ ಆಧರಿಸಿ ಯುವಕನ ಜಾಡನ್ನು ಹಿಡಿಯಲು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Gujarat: ಅಶ್ಲೀಲ ವೀಡಿಯೋ ನೋಡುವಾಗ, ಆ ದೃಶ್ಯದಲ್ಲಿ ಇರುವುದು ತನ್ನ ಪತ್ನಿಯೆಂದು ಭಾವಿಸಿದ 51 ವರ್ಷದ ಗಂಡ! ಗೋಣಿಚೀಲ ಹೊಲಿಯುವ ಸೂಜಿಯಿಂದ ತೀವ್ರ ಹಲ್ಲೆ, ಪತ್ನಿ ಆಸ್ಪತ್ರೆಗೆ ದಾಖಲು!

Leave A Reply

Your email address will not be published.