Kitchen Tips: ಮೊಟ್ಟೆಯ ವೆರೈಟಿ ಅಡುಗೆ ಮಾಡಿ ಪಾತ್ರೆಯೆಲ್ಲಾ ಗಬ್ಬು ಬರ್ತಿದ್ಯಾ? ಹಾಗಿದ್ರೆ ​ ಈ ಟಿಪ್ಸ್​ ಫಾಲೋ ಮಾಡಿ!

Lifestyle Kitchen tips simple and effective tips to remove egg smell from utensils

Kitchen Tips: ಮೊಟ್ಟೆಯ ವಿವಿಧ ಖಾದ್ಯಗಳನ್ನು ಎಲ್ಲರೂ ಕೂಡ ಇಷ್ಟ ಪಡುತ್ತಾರೆ. ಆದರೆ ಮೊಟ್ಟೆ ತಿನ್ನಲು ತುಂಬಾ ರುಚಿಕರವಾದರೂ ಅದರ ವಾಸನೆ ಮಾತ್ರ ತುಂಬಾ ಕೆಟ್ಟದಾಗಿರುತ್ತದೆ.

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಗಬ್ಬು ನಾರುವ ಪಾತ್ರಗಳಿಂದ ಆಹಾರ ಅಥವಾ ಪಾನೀಯ ನೀಡಲು ನಿಮಗೆ ಮುಜುಗರ ಅನಿಸಬಹುದು. ಹೌದು, ಮೊಟ್ಟೆ ಹಾಕಿಕೊಂಡ ಪಾತ್ರೆಯ ವಾಸನೆಯು ಪಾತ್ರೆ ತೊಳೆದ ಬಳಿಕವೂ ಕೆಲವೊಮ್ಮೆ ಹಾಗೆ ಉಳಿದುಕೊಳ್ಳುವುದು ಕೆಲವರಿಗೆ ದೊಡ್ಡ ಸಮಸ್ಯೆ ಆಗಿದೆ.

ಹಾಗಾಗಿ ಕೆಲವು ಸಿಂಪಲ್ ಟಿಪ್ಸ್ ​ (Kitchen Tips) ಫಾಲೋ ಮಾಡುವ ಮೂಲಕ ಮೊಟ್ಟೆಯ ವಾಸನೆಯನ್ನು ಪಾತ್ರೆಯಿಂದ ಸುಲಭವಾಗಿ ತೆಗೆದುಹಾಕಬಹುದು.

ನಿಂಬೆ ರಸ:
ನಿಂಬೆ ರಸವು ನಿಮ್ಮ ಪಾತ್ರೆಗಳಿಂದ ಮೊಟ್ಟೆಯ ವಾಸನೆಯನ್ನು ತೆಗೆದುಹಾಕುವಲ್ಲಿ ಸೂಪರ್ . ಒಂದು ಪಾತ್ರೆಯಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ಸುರಿದು, ಸ್ವಲ್ಪ ನಿಂಬೆ ರಸವನ್ನು ಸೇರಿಸಿ, ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಅದನ್ನು ಡಿಶ್ವಾಶರ್ನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಟ್ಟೆಯ ವಾಸನೆ ಮಾಯವಾಗುತ್ತದೆ.

ಕಡಲೆ ಹಿಟ್ಟು:
ಕಡಲೆ ಹಿಟ್ಟು ಪಾತ್ರೆಗಳಿಂದ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕಡಲೆ ಹಿಟ್ಟಿನಿಂದ ಬಾಣಲೆಯನ್ನು ಉಜ್ಜಿ, ಒಂದೆರಡು ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ನೀರಿನಿಂದ ತೊಳೆಯಿರಿ.

ವಿನೆಗರ್:
ದೊಡ್ಡ ಪಾತ್ರದಲ್ಲಿ ನೀರನ್ನು ಸುರಿದು, ಅದಕ್ಕೆ ಸ್ವಲ್ಪ ವಿನೆಗರ್ ಸೇರಿಸಿ. ಈ ನೀರಿನಲ್ಲಿ ವಾಸನೆ ಬರುವ ಬಟ್ಟಲುಗಳನ್ನು ಸ್ವಲ್ಪ ಸಮಯ ನೆನೆಸಿ. ಸ್ವಲ್ಪ ಸಮಯದ ನಂತರ, ಡಿಶ್ವಾಶರ್ನೊಂದಿಗೆ ಪಾತ್ರಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಒಣಗಲು ಬಿಡಿ. ಇದು ಮೊಟ್ಟೆಯ ವಾಸನೆಯನ್ನು ತೆಗೆದುಹಾಕುತ್ತದೆ.

ಅಡಿಗೆ ಸೋಡಾ:
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅಡಿಗೆ ಸೋಡಾ ಸೇರಿಸಿ. ಈ ನೀರಿನಲ್ಲಿ ಗಬ್ಬು ಬರುವ ಪಾತ್ರೆಗಳನ್ನು ಸ್ವಲ್ಪ ಸಮಯ ನೆನೆಸಿ. ನಂತರ ಸಾಬೂನಿನಿಂದ ಪಾತ್ರೆಗಳನ್ನು ತೊಳೆಯಿರಿ.

ಕಾಫಿ:
ದೊಡ್ಡ ಪಾತ್ರೆಯಲ್ಲಿ ಕಾಫಿ ಪುಡಿಯನ್ನು ನೀರಿನೊಂದಿಗೆ ಬೆರೆಸಿ. ಈ ನೀರಿನೊಳಗೆ ಪಾತ್ರೆಗಳನ್ನು ಹಾಕಿ ಚೆನ್ನಾಗಿ ಉಜ್ಜಿ. ಆ ನಂತರ ಶುಚಿಯಾದ ನೀರಿನಿಂದ ಸ್ವಚ್ಛಗೊಳಿಸಿದರೆ, ಮೊಟ್ಟೆಯ ವಾಸನೆ ನಿವಾರಣೆ ಆಗಲಿದೆ.

ಇದನ್ನೂ ಓದಿ: ಉಪ್ಪಿನಂಗಡಿ ಯುವತಿ ನಾಪತ್ತೆ: ದೂರು ದಾಖಲು!

Leave A Reply

Your email address will not be published.