Optical Illusion Personality Test: ಈ ಫೋಟೊ ನೋಡಿ, ಮೊದಲಿಗೆ ಏನು ಕಂಡಿತು ಅಂತ ಹೇಳಿ, ನೀವೆಂಥವರು ಅಂತ ನಮ್ಮ ತಜ್ಞರು ಪಕ್ಕಾ ಹೇಳ್ತಾರೆ !

Optical illusion personality test: What you see first can determine Your personality

Optical Illusion: ಆಪ್ಟಿಕಲ್ ಭ್ರಮೆಗಳು ನಮ್ಮ ವ್ಯಕ್ತಿತ್ವದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ನಾವು ಇದೊಂದು ಉದಾಹರಣೆ ಮೂಲಕ ಬಹಿರಂಗಪಡಿಸುತ್ತಿದೇವೆ. ಟಿಕ್ ಟಾಕ್ ಆಪ್ಟಿಕಲ್ ಇಲ್ಯೂಷನ್ ಸ್ಪೆಷಲಿಸ್ಟ್ ಹಂಚಿಕೊಂಡ ಈ ಅಸಾಮಾನ್ಯ ಕಲಾಕೃತಿಯು ಯಾರಾದರೂ ಸ್ವಭಾವತಃ ಜನರನ್ನು ಮೆಚ್ಚಿಸುವವರೇ ಅಥವಾ ನಿಮ್ಮದೇ ಆದ ಮಾರ್ಗವನ್ನು ಹಿಡಿದು ಸಾಗುವವರೆ ಎಂಬುದನ್ನು ಕರಾರುವಾಕ್ ಆಗಿ ನಿರ್ಧರಿಸುತ್ತದೆ. ಇಲ್ಲಿ ಎರಡು ವಿಭಿನ್ನ ರೀತಿಯ ಚಿತ್ರಗಳು ಅಡಗಿವೆ. ಆ ಎರಡು ಚಿತ್ರಗಳಲ್ಲಿ ಯಾವ ಚಿತ್ರವನ್ನು ಮೊದಲು ನಿಮ್ಮ ಮೆದುಳು ಮತ್ತು ಮನಸ್ಸು ಗ್ರಹಿಸುತ್ತದೆ. ಅದರ ಆಧಾರದ ಮೇಲೆ ನಿಮ್ಮ ಮನಸ್ಥಿತಿಯ ಅಧ್ಯಯನ ಮಾಡಲಾಗುತ್ತದೆ.

ಆಪ್ಟಿಕಲ್ ಭ್ರಮೆಗಳು (Optical Illusion) ನಾವು ಸುಲಭವಾಗಿ ನೋಡಲಾಗದ ವಿಷಯಗಳನ್ನು ಡಿಕೋಡ್ ಮಾಡಲು ಇರುವ ಕೇವಲ ಮೋಜಿನ ಮಾರ್ಗವಲ್ಲ. ಆದರೆ ನಮ್ಮ ಪರ್ಸನಾಲಿಟಿಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗ ಪಡಿಸುತ್ತದೆ. ಆಪ್ಟಿಕಲ್ ಮೂಲಕ ಟಿಕ್ಟಾಕ್ನಲ್ಲಿನ ವೀಡಿಯೊದಲ್ಲಿ ಹಂಚಿಕೊಳ್ಳಲಾದ ಕಲಾಕೃತಿ ಇಲ್ಲಿದೆ.
ಆಪ್ಟಿಕಲ್ ತಜ್ಞ ಮಿಯಾ ಯಿಲಿನ್ ಎಂಬವರು ಈ ಆಪ್ಟಿಕಲ್ ಭ್ರಮೆಯ ಮೂಲಕ, ನೀವು ಯಾವ ರೀತಿಯ ಮನಸ್ಸಿನವರು ಎಂಬುದನ್ನು ಅನಲೈಸ್ ಮಾಡಿ ಹೇಳಿದ್ದಾರೆ. ಆತ ಹೇಳಿದ ಕರಾರುವಕ್ಕಾದ ಭವಿಷ್ಯ ಕೇಳಿ ಜನರು ಮಾರು ಹೋಗಿದ್ದಾರೆ.
ಬನ್ನಿ ನಿಮ್ಮ ವ್ಯಕ್ತಿತ್ವದ ಪ್ರಕಾರವನ್ನು ಡಿಕೋಡ್ ಮಾಡುವ ಜತೆಗೆ, ಇನ್ನೊಂದು ಸ್ವಲ್ಪ ಮೋಜು ಮಾಡಲು ನೀವು ಸಿದ್ಧರಿದ್ದೀರಾ? ನೀವು ಮಾಡಬೇಕಾಗಿರುವುದು ಇಷ್ಟೇ, ಈ ಕೆಳಗಿನ ಫೋಟೋ ಅನ್ನು ದಿಟ್ಟಿಸಿ ನೋಡಿ.ಇಲ್ಲಿ ಮೊದಲಿಗೆ ನಿಮಗೆ ಏನು ಕಾಣಿಸುತ್ತದೆ ?

 

ನೀವು ಮೊದಲು ಏನು ನೋಡಿದ್ದೀರಿ ಅದನ್ನು ಅವಲಂಬಿಸಿ, ಇಲ್ಲಿ ವಿಶ್ಲೇಷಣೆ ಇದೆ. ಈ ಫೋಟೋದಲ್ಲಿ ಎರಡು ಚಿತ್ರಗಳು ಅಡಕವಾಗಿವೆ ಒಂದು ಬಗ್ಗೆ ಕುಳಿತ ಹೆಣ್ಣಿನ ಚಿತ್ರ. ಇನ್ನೊಂದು ಮುದುಕರೊಬ್ಬರ ಮುಖ.

ನೀವು ಮೊದಲು ಬಗ್ಗಿ ಕುಳಿತಿರುವ ಮಹಿಳೆಯನ್ನು ನೋಡಿದರೆ, ತಜ್ಞ ಮಿಯಾ ಅವರ ವಿಶ್ಲೇಷಣೆಯ ಪ್ರಕಾರ, ನೀವು “ಉನ್ನತ ನೈತಿಕತೆ” ಹೊಂದಿರುವ ಜನರಲ್ಲಿ ಒಬ್ಬರಂತೆ. ಅಲ್ಲದೆ, “ನೀವು ದಯೆ ಮತ್ತು ಕ್ಷಮ ನೀಡುವ ವ್ಯಕ್ತಿ. ಮಾತ್ರವಲ್ಲ, ಆದರೆ ನೀವು ಉದಾರರು ಕೂಡ. ನೀವು ಅತ್ಯಂತ ಸಕಾರಾತ್ಮಕ (Positive) ವ್ಯಕ್ತಿ. ನೀವು ಅದಕ್ಕಾಗಿ ಮತ್ತು ನಿಮ್ಮ ಒಟ್ಟಾರೆ ವ್ಯಕ್ತಿತ್ವಕ್ಕಾಗಿ ಜನರಿಂದ ಮೆಚ್ಚುಗೆ ಪಡೆಯುತ್ತಿದ್ದೀರಿ ಮತ್ತು ನೀವು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತೀರಿ. ಜತೆಗೆ ನೀವು ಇತರರೊಂದಿಗೆ ಬೆರೆಯುವುದನ್ನು ಆನಂದಿಸುತ್ತೀರಿ. ಸಾಮಾಜಿಕ ಚಂಚಲ ಮನಸ್ಸಿನ ಜನರಾಗುವ ಸಾಧ್ಯತೆ ಹೆಚ್ಚು. ಅಲ್ಲದೇ ನೀವು ಕೆಲವು ದೌರ್ಬಲ್ಯಗಳನ್ನು ಕೂಡಾ ಹೊಂದಿದ್ದೀರಿ. ಮಿಯಾ ಹೇಳಿದ ವಿಶ್ಲೇಷಣೆಯ ಪ್ರಕಾರ, ನಿಮ್ಮ ಗೆಳೆಯರಿಂದ ನೀವು ಸುಲಭವಾಗಿ ಪ್ರಭಾವಿತರಾಗುತ್ತೀರಿ. ಆಗಾಗ ನೀವು ಗೊಂದಲಕ್ಕೊಳಗಾಗುವುದು ಕೂಡಾ ಸಹಜ. ಇಂತಹ ಜನರಿಗೆ ತಜ್ಞರು ಕೆಲವು ಸಲಹೆಗಳನ್ನು ಕೂಡಾ ನೀಡಿದ್ದಾರೆ.
ನಿಮ್ಮನ್ನು ಇತರ ದೂಷಿಸಿದರೆ, ಅವರ ನಕಾರಾತ್ಮಕ ನಡವಳಿಕೆಯಿಂದ ನೀವು ಒತ್ತಡವನ್ನು ಮಾಡಿಕೊಳ್ಳದಿರಿ. ಆ ಬಗ್ಗೆ ಜಾಗೃತ ಪ್ರಯತ್ನಗಳನ್ನು ಮಾಡಿ. ಅವರು ಯಾವ ರೀತಿಯ ವ್ಯಕ್ತಿ ಅಥವಾ ಅವರ ಸ್ವಂತ ವೈಯಕ್ತಿಕ ಭಾವನೆಗಳಿಗೆ ಹೆಚ್ಚು ಪ್ರತಿಬಿಂಬವಾಗಿರಬಹುದು ನಿಮ್ಮ ಮನಸ್ಸು. ಅದಾಗಲು ಬಿಡಬೇಡಿ.
ಮನುಷ್ಯನ ಮುಖ
ನೀವು ಮೊದಲು ಮನುಷ್ಯನ ಮುಖವನ್ನು ನೋಡಿದರೆ, ನೀವು “ಬಹಳ ರಹಸ್ಯ ವ್ಯಕ್ತಿ” ಆಗಿರಬಹುದು. ಈ ಚಿತ್ರದಲ್ಲಿ ಮೊದಲಿಗೆ ಮನುಷ್ಯನ ಮುಖವನ್ನು ನೋಡಿದ ವ್ಯಕ್ತಿಗಳು “ನಿಮಗೆ ನಿಜವಾಗಿ ಯಾರೂ ಅರ್ಥವಾಗುವುದಿಲ್ಲ ಎಂದು ನೀವು ಆಗಾಗ್ಗೆ ಭಾವಿಸುತ್ತೀರಿ. ನೀವು ವಿಷಯಗಳನ್ನು ವಿಶ್ಲೇಷಣಾತ್ಮಕವಾಗಿ ಮತ್ತು ತಾರ್ಕಿಕವಾಗಿ ನೋಡಲು ಇಷ್ಟಪಡುತ್ತೀರಿ. ಮತ್ತು ವಿಶೇಷವಾಗಿ ನೀವು ಜನರನ್ನು ಸಂತೋಷಪಡಿಸಲು ಬಯಸುವುದಿಲ್ಲ. ನಿಮ್ಮ ರೂಟ್ ನಿಮ್ಮದು. ನೀವು ನಿಮ್ಮದೇ ಆದ ವಿಶಿಷ್ಟ ಮಾರ್ಗವನ್ನು ರಚಿಸಲು ಇಷ್ಟಪಡುತ್ತೀರಿ. ನೀವು ನಿಮಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ನೀವು ಸ್ವತಂತ್ರವಾಗಿರಲು ಇಷ್ಟಪಡುತ್ತೀರಿ. ಸ್ಪಾಟ್ ಲೈಟ್ ನಿಂದ ದೂರ ಸರಿಯಬೇಡಿ. ಒಬ್ಬ ವ್ಯಕ್ತಿಯನ್ನು ಮೊದಲು ನೋಡಿದ ಜನರು ಸಾಮಾನ್ಯವಾಗಿ ಇತರರಿಂದ ಮೆಚ್ಚುಗೆ ಮತ್ತು ಸ್ವೀಕಾರವನ್ನು ಪಡೆಯುತ್ತಾರೆ. ಇದು ಕೆಲವೊಮ್ಮೆ ಇಂತಹ ಕಾರ್ಯ ಜನರ ಚೈತನ್ಯವನ್ನು ತಗ್ಗಿಸಬಹುದು.

ಇದು ಆಪ್ಟಿಕಲ್ ತಜ್ಞ ಮಿಯಾ ನೀಡಿದ ಉದಾಹರಣೆ ಸಹಿತ ನಿಮ್ಮ ಪರ್ಸನಾಲಿಟಿಯ ಅಧ್ಯಯನ. ನೀವು ಈ ಚಿತ್ರದಲ್ಲಿ ಬದಲಿಗೆ ಯಾವ ಚಿತ್ರವನ್ನು ಕಂಡಿದೆ ಬಗ್ಗೆ ಕುಳಿತ ಹೆಣ್ಣಿನ ಚಿತ್ರವನ್ನು ಅಥವಾ ಹಿರಿಯ ವ್ಯಕ್ತಿಯ ಮುಖದ ಚಿತ್ರವನ್ನು? ಮಿಯಾ ಹೇಳಿದ ಪರ್ಸನಾಲಿಟಿ ಬಗೆಗಿನ ಭವಿಷ್ಯ ಕರಾರುವಕ್ಕಾಗಿ ಉಂಟಾ ಇಲ್ಲವೇ ಎಂದು ಬರೆದು ತಿಳಿಸಿ.

ಇದನ್ನೂ ಓದಿ: ‘ಮಗನಿಗಾಗಿ ಕಥೆ ಬರೆದಿದ್ದೇನೆ, ಆದ್ರೂ ಕಾಲ್ ಶೀಟ್ ನೇ ಕೊಡ್ತಿಲ್ಲ’ – ಮಗ ನಿಖಿಲ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ದೂರಿದ್ದು ಯಾರ ಬಳಿ ?

Leave A Reply

Your email address will not be published.