Jio Recharge Plan: ರಿಲಯನ್ಸ್ ಜಿಯೋ ಸ್ಥಗಿತಗೊಳಿಸಿದೆ 119 ರೂ. ಅಗ್ಗದ ಪ್ಲ್ಯಾನ್‌ ; ಹಾಗಾದ್ರೆ ಇನ್ಮುಂದೆ ಜಿಯೋ ಮಿನಿಮಮ್‌ ರೀಚಾರ್ಜ್‌ ಪ್ಲ್ಯಾನ್ ಯಾವುದು ?

Technology NEWS Reliance jio discontinues its cheapest rupees 190 recharge plan then how much users will have to pay here is detail

Jio Recharge Plan: ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (JIO), ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಆದರೆ, ಇದೀಗ ರಿಲಯನ್ಸ್ ಜಿಯೋ 119 ರೂ. ಅಗ್ಗದ ಪ್ಲ್ಯಾನ್‌ (Jio Recharge Plan) ಸ್ಥಗಿತಗೊಳಿಸಿದೆ. ಹಾಗಾದ್ರೆ ಇನ್ಮುಂದೆ ಮಿನಿಮಮ್‌ ರೀಚಾರ್ಜ್‌ಗೆ ಎಷ್ಟು ಹಣ ನೀಡ್ಬೇಕು? ಇಲ್ಲಿದೆ ನೋಡಿ ಮಾಹಿತಿ!!.

119 ರೂ. ಪ್ಲ್ಯಾನ್‌ ರಿಲಯನ್ಸ್ ಜಿಯೋ ನೀಡುತ್ತಿದ್ದ ಅಗ್ಗದ ರೀಚಾರ್ಜ್ ಪ್ಲ್ಯಾನ್‌ ಆಗಿತ್ತು. ಈ ರೀಚಾರ್ಜ್ ಯೋಜನೆ 14 ದಿನಗಳ ಅವಧಿಗೆ ಮಾನ್ಯವಾಗಿತ್ತು. ದಿನಕ್ಕೆ 1.5GB ಡೇಟಾ ಜೊತೆಗೆ ಅನಿಯಮಿತ ಕರೆ ಪ್ರಯೋಜನ ಹಾಗೂ ದಿನಕ್ಕೆ 100 SMS ಅನ್ನು ಪಡೆಯುವ ಸೌಲಭ್ಯವಿತ್ತು. ಆದರೆ, ಇದೀಗ ಈ ಪ್ಲ್ಯಾನ್‌ ಅನ್ನು ಸ್ಥಗಿತಗೊಳಿಸಲಾಗಿದೆ.

ಯಾಕೆಂದರೆ, ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯವನ್ನು (ARPU) ಹೆಚ್ಚಿಸುವ ಉದ್ದೇಶದಿಂದ ಕಂಪನಿಯು 119 ರೂ. ಡೇಟಾ ಪ್ಲ್ಯಾನ್‌ ಅನ್ನು ತೆಗೆದುಹಾಕಿದೆ ಎಂದು ಹೇಳಲಾಗಿದೆ. ಈ ಪ್ಲ್ಯಾನ್‌ ಅನ್ನು ಸ್ಥಗಿತಗೊಳಿಸಿದ ನಂತರ, ರಿಲಯನ್ಸ್ ಜಿಯೋ ನೀಡುವ ಅಗ್ಗದ ಯೋಜನೆಗೆ 149 ರೂ. ವೆಚ್ಚವಾಗುತ್ತದೆ.

ಜಿಯೋ 149 ರೂ. ರೀಚಾರ್ಜ್ ಪ್ಲ್ಯಾನ್‌ :

ರಿಲಯನ್ಸ್ ಜಿಯೋ ಬಳಕೆದಾರರಿಗೆ ಲಭ್ಯವಿರುವ ಅಗ್ಗದ ಪ್ಲ್ಯಾನ್‌ ಅಂದರೆ 149 ರೂ. ಯೋಜನೆ. ಈ ಯೋಜನೆಯು 20 ದಿನಗಳ ಅವಧಿಗೆ ಮಾನ್ಯವಾಗಿರುತ್ತದೆ. ಟೆಲಿಕಾಂ ಆಪರೇಟರ್ ದಿನಕ್ಕೆ 1GB ಡೇಟಾ ನೀಡುತ್ತದೆ. ಬಳಕೆದಾರರು ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ. Jio ಬಳಕೆದಾರರು JioCinema, JioTV ಮತ್ತು Jio Suite ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶವನ್ನು ಸಹ ಪಡೆಯುತ್ತಾರೆ. ಆದರೆ, ಈ ಯೋಜನೆಯು ಅನಿಯಮಿತ 5G ಡೇಟಾ ಪ್ರಯೋಜನಗಳನ್ನು ನೀಡುವುದಿಲ್ಲ.

ಇದನ್ನೂ ಓದಿ: Bihar: ಇಟ್ಟಿಗೆಯಿಂದ ಹೊಡೆದು ತಂದೆಯ ಕೊಲೆ ಮಾಡಿ, ಕಿವಿ ಬೆರಳನ್ನು ಜಗಿದು ತಿಂದ ಮಗ!

Leave A Reply

Your email address will not be published.