Uppinangady: ಉಪ್ಪಿನಂಗಡಿ ಯುವತಿ ನಾಪತ್ತೆ: ದೂರು ದಾಖಲು!

Uppinangady news a young girl missing in Uppinangady

Uppinangady: ಉಪ್ಪಿನಂಗಡಿಯಲ್ಲಿ (Uppinangady)ರಾತ್ರಿ ಊಟ ಮಾಡಿ ತಾಯಿಯ(Mother )ಜೊತೆಗೆ ಮಲಗಿದ್ದ ಯುವತಿ ನಾಪತ್ತೆಯಾಗಿರುವ (Girl Missing)ಘಟನೆ ನಡೆದಿರುವ ಕುರಿತು ವರದಿಯಾಗಿದೆ.

ನಾಪತ್ತೆಯಾಗಿರುವ ಯುವತಿಯನ್ನು ಉಪ್ಪಿನಂಗಡಿ ಗ್ರಾಮದ ನಿವಾಸಿ ಮುಸ್ತಫಾ ಎನ್ನುವವರ ಪುತ್ರಿ ಫಾತಿಮತ್ ಶೌಹಾನ (17) ಎಂದು ಗುರುತಿಸಲಾಗಿದೆ. ಆಗಸ್ಟ್ 22 ರಂದು ಫಾತಿಮತ್ ಶೌಹಾನ ರಾತ್ರಿ ಊಟ ಮುಗಿಸಿಕೊಂಡು ತನ್ನ ತಾಯಿಯ ಜೊತೆಗೆ ಮಲಗಿದ್ದಳು ಎನ್ನಲಾಗಿದೆ.ಆದರೆ, ತಾಯಿ ಮರುದಿನ ಮುಂಜಾನೆ ವೇಳೆಗೆ ಎದ್ದು ನೋಡುವ ಸಂದರ್ಭ ಆಕೆ ನಾಪತ್ತೆಯಾಗಿರುವುದು (Missing)ಬೆಳಕಿಗೆ ಬಂದಿದೆ.

ಯುವತಿ ಬಳಕೆ ಮಾಡುತ್ತಿದ್ದ ಮೊಬೈಲ್ (Mobile)ಕೂಡ ಕಾಣೆಯಾಗಿದ್ದು, ಆಕೆಯ ಮೊಬೈಲ್ ನಂಬರ್ ಗೆ ಕರೆ ಮಾಡಿದ ಸಂದರ್ಭ ಮೊಬೈಲ್ ಸ್ವಿಚ್ ಆಫ್( Mobile Switch Off)ಎಂದು ಬರುತ್ತಿದೆ ಎಂದು ತಿಳಿದು ಬಂದಿದೆ. ಎಲ್ಲ ಕಡೆ ಹುಡುಕಾಟ ನಡೆಸಿದರೂ ಯುವತಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ ಎನ್ನಲಾಗಿದೆ. ಹೀಗಾಗಿ, ಯುವತಿಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ( Police Station)ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ಹಾಡು ಹಗಲೇ ಯುವತಿಯ ಕತ್ತಿಗೆ ಚಾಕು ಇರಿತ; ವಿಟ್ಲದ ಯುವತಿ ಆಸ್ಪತ್ರೆಗೆ ದಾಖಲು ಮಹಿಳಾ ಠಾಣೆಯ ಹತ್ತಿರವೇ ನಡೆದ ಘಟನೆ

Leave A Reply

Your email address will not be published.