Bridal Photoshoot: ಪಂಚೆ ರೀತಿ ಸೀರೆ ಎತ್ತಿ ಕಟ್ಟಿ, ವಧುವಿನ ಫೋಟೋಶೂಟ್‌! ಸೀರೆ ಇನ್ನೂ ಮೇಲಕ್ಕೆತ್ತಬೇಕಿತ್ತು ಎಂದ ನೆಟ್ಟಿಗರು!

Viral news Bridal viral photo shoot with sari lifted till knee and tied like Panche

Bridal Photoshoot: ಮದುವೆ (marriage ) ಅನ್ನೋದು ವಧು ವರರಿಗೆ ವಿಶೇಷ ಸಂಭ್ರಮ. ಆದರೆ ಮದುವೆಯಲ್ಲಿ ಮದುಮಗಳು ಶೃಂಗಾರ ಮಾಡಿಕೊಂಡು ವೈಯಾರದಿಂದ ತಲೆ ಬಗ್ಗಿಸಿಕೊಂಡು ಇರುವ ಕಾಲ ಯಾವಾಗಲೇ ಹೊರಟು ಹೋಗಿದೆ.

ಯಾಕಂದ್ರೆ ಆಧುನಿಕತೆಗೆ ಮಾರು ಹೋಗಿರುವ ಜನ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಎಂಬ ಹೊಸ ಟ್ರೆಂಡ್ ಪ್ರಾರಂಭ ಮಾಡಿದ್ದಾರೆ. ಒಟ್ಟಿನಲ್ಲಿ ಎಲ್ಲರ ಗಮನ ಸೆಳೆಯೋಕೆ ಕಪಲ್ಸ್ ಜನರು ಚಿತ್ರ-ವಿಚಿತ್ರವಾಗಿ ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ವಧು ಅಸಭ್ಯವಾಗಿ ಸೀರೆಯನ್ನು ಪಂಚೆಯಂತೆ ಎತ್ತಿ ಕಟ್ಟಿ ಫೋಟೋ ಶೂಟ್ (Bridal Photoshoot) ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಡಿಫರೆಂಟ್ ಆಗಿರಬೇಕೂಂತ ಇಲ್ಲೊಬ್ಬಳು ಕಾಡಿನ ಮಧ್ಯೆ ತಾನು ತೊಟ್ಟ ಸೀರೆ ಮೊಣಕಾಲಿನ ತನಕ ಎತ್ತಿ ಕೊಂಡು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಂಡಿದ್ದಾಳೆ. ಸದ್ಯ ಈ ಫೋಟೋ ಶೂಟ್‌ನ ಚಿತ್ರಗಳು ವೈರಲ್ ಆಗುತ್ತಿದ್ದು, ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ವೆಡ್ಡಿಂಗ್ ಫೋಟೋಶೂಟ್ ಅಂದ್ರೆ ವಧು ಗ್ರ್ಯಾಂಡ್ ಆಗಿ ಡ್ರೆಸ್ ಮಾಡ್ಕೊಂಡು ಫೋಟೋಗಳಿಗೆ ಫೋಸ್ ಕೊಡೋದು ಓಕೆ . ಆದ್ರೆ ಈ ರೀತಿ ಅಸಭ್ಯವಾಗಿ ಸೀರೆ ಮೇಲಕ್ಕೆತ್ತಿ ಕಟ್ಟಿರುವುದು ಸೀರೆಯ ಗೌರವ ತೆಗೆದಂತೆ ಎಂದು ಕಿಡಿಕಾರಿದ್ದಾರೆ.

ಇನ್ನೊಬ್ಬರು ‘ಸೀರೆಯನ್ನು ಇನ್ನೂ ಸ್ಪಲ್ಪ ಮೇಲಕ್ಕೆತ್ತಿ ಕಟ್ಟಿದ್ದರೆ ಸರಿಯಾಗುತ್ತಿತ್ತು’ ಎಂದು ಹಾಸ್ಯ ಮಾಡಿದ್ದಾರೆ. ಇನ್ನೊಬ್ಬರು, ‘ತೋರಿಸಬೇಕೆಂದು ಹೊರಟಿದ್ದೀರಾ, ಅಡಗಿಸಬೇಕೆಂದು ಹೊರಟಿದ್ದೀರಾ’ ಮೊದಲು ಡಿಸೈಡ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು ” ಇದಕ್ಕಿಂತ ಪಂಚೆ ಉಟ್ಕೊಂಡು ಫೋಟೋ ಶೂಟ್ ಮಾಡ್ಕೊಳಮ್ಮ, ಸೀರೆ ಮರಿಯಾದಿ ತೆಗಿಯೋ ಕೆಲಸ ಬೇಡಮ್ಮ ಅಂದಿದ್ದಾರೆ.

ಇದನ್ನೂ ಓದಿ: Jio Recharge Plan: ರಿಲಯನ್ಸ್ ಜಿಯೋ ಸ್ಥಗಿತಗೊಳಿಸಿದೆ 119 ರೂ. ಅಗ್ಗದ ಪ್ಲ್ಯಾನ್‌ ; ಹಾಗಾದ್ರೆ ಇನ್ಮುಂದೆ ಜಿಯೋ ಮಿನಿಮಮ್‌ ರೀಚಾರ್ಜ್‌ ಪ್ಲ್ಯಾನ್ ಯಾವುದು ?

Leave A Reply

Your email address will not be published.