ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಎದ್ದಿದ್ದ ಪ್ರಿಗೋಜಿನ್ ದುರ್ಮರಣ, ರಷ್ಯಾ ಪಡೆಗಳು ಹೊಡೆದುರುಳಿಸಿದ ಶಂಕೆ !

World news Russia 10 killed in plane crash official says Wagner chief prigozhin was on board

Russia: ರಷ್ಯಾ ಅಧ್ಯಕ್ಷ ವ್ಲಾದಮಿರ್ ಪುಟಿನ್ ವಿರುದ್ಧ ದಂಗೆ ಎದ್ದಿದ್ದ ಪ್ರೈವೇಟ್ ಆರ್ಮಿಯ ಮುಖ್ಯಸ್ಥ, 62 ವರ್ಷದ ಪ್ರಿಗೋಜಿನ್ ಹತರಾಗಿದ್ದಾರೆ. ಅವರು ಮತ್ತು ಇತರ 10 ಮಂದಿ ಪ್ರಯಾಣಿಸುತ್ತಿದ್ದ ಪ್ರೈವೇಟ್ ಜೆಟ್ ವಿಮಾನ ಕ್ರ್ಯಾಷ್ ಆಗಿದ್ದು ಅದರಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ.

ಈ ಸಾವಿನ ಬಗ್ಗೆ ಪ್ರಯೋಜನ್ ಪ್ರತಿನಿಧಿಸುತ್ತಿದ್ದ ವ್ಯಾಗನಾರ್ ಸಂಸ್ಥೆಯು ಹೇಳಿಕೆ ನೀಡಿದ್ದು ವಿಮಾನವನ್ನು ರಷ್ಯಾದ ಪಡೆಗಳು ಹೊಡೆದು ಉರುಳಿಸಿವೆ ಎಂದು ದೂರಿದೆ. ಟೆಲಿಗ್ರಾಂ ಚಾನೆಲ್ ವರದಿ ಮಾಡಿದಂತೆ ಪ್ರಯೋಜನ ಸತ್ತದ್ದು ಅಂದು ರಷ್ಯಾದ(Russia) ವಿರುದ್ಧ ತೆಗೆದುಕೊಂಡ ನಿರ್ಧಾರದ ಕಾರಣದಿಂದ ಎಂದು ಹೇಳಿಕೆ ನೀಡಿದೆ.

ತನ್ನ ಪ್ರೈವೇಟ್ ‘ ವ್ಯಾಗ್ನರ್ ‘ ಮಿಲಿಟರಿ ಶಕ್ತಿಯ ನಾಯಕನಾಗಿರುವ ಪ್ರಿಗ್ಗೋಜಿನ್ ರಷ್ಯಾದ ವಿರುದ್ಧ ಕಳೆದ ಜೂನ್ ತಿಂಗಳಿನಲ್ಲಿ ದಂಗೆ ಎದ್ದಿದ್ದರು. ರಷ್ಯಾ ರಾಜಧಾನಿ ಮಾಸ್ಕೊ ಕಡೆಗೆ ಹೊರಟಿದ್ದ ಪ್ರೆಗೊಜಿನ್ ಮತ್ತು ಆತನ ತಂಡ ,’ ಜಸ್ಟಿಸ್ ಮಾರ್ಚ್ ‘ ಎಂಬ ಹೆಸರಿನಲ್ಲಿ ದಂಗೆ ಎದ್ದು ನಿಂತಿತ್ತು. ಕೊನೆಗೆ ಪ್ರಿಗೊಜಿನ್ ಮತ್ತು ರಷ್ಯಾ ಅಧ್ಯಕ್ಷ ನ ಏರ್ಪಟ್ಟಿತ್ತು. ಆದರೆ ಕೆಲವೇ ತಿಂಗಳುಗಳಲ್ಲಿ ಪ್ರಿಗೊಜಿನ್ ಅವರು ತೀರಿಕೊಂಡಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ ಪ್ರಿಗೊಜಿನ್ ಸಾಯುವ ದಿನವೇ ಪ್ರಿಗೊಜಿನ್ ಗೆ ಆತ್ಮೀಯವಾಗಿದ್ದ ರಷ್ಯಾದ ವಾಯು ಸೇನೆಯ ನಾಯಕ ಸೆರ್ಗಿ ಸುರುವಿಕಿನ್ ನನ್ನು ಹುದ್ದೆಯಿಂದ ಕಿತ್ತೆಸೆಯಲಾಗಿತ್ತು

ಆಶಾ ರಾಜಧಾನಿ ಮಾಸ್ಕೋ ದಿಂದ ಸೈಂಟ್ ರಿಟರ್ನ್ಸ್ ಬರ್ಗ್ ಗೆ ಹೊರಟಿದ್ದ ವಿಮಾನ ದಾರಿ ಮಧ್ಯ ಅವಘಡಕ್ಕೆ ಈಡಾಗಿದೆ. ವಿಮಾನ ಪತನದ ನಂತರ ಎಲ್ಲಾ 10 ದೇಹಗಳನ್ನು ಪತ್ತೆಹಚ್ಚಲಾಗಿದೆ. ಆದರೆ ಪ್ರಗೋಜಿನ್ ಸಾವು ನಿಗೂಢವಾಗಿ ಕಾಣುತ್ತಿದೆ ಎಂಬ ವರದಿಗಳಿವೆ. ವಿಮಾನ ಬೀಳುವ ಮೊದಲು ಎರಡು ದೊಡ್ಡ ಪ್ರಮಾಣದ ಬ್ಲಾಸ್ಟ್ ಉಂಟಾಗಿತ್ತು ಮತ್ತು ಅದರಿಂದ ಬೃಹತ್ ಹೊಗೆ ಎದ್ದಿತ್ತು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿಮಾನ ಹೊರಟ ಕೇವಲ ಅರ್ಧ ಗಂಟೆ ಒಳಗೆ ಈ ಅವಘಡ ಸಂಭವಿಸಿದೆ. ಈಗ ರಷ್ಯದ ಆಡಳಿತ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: Optical Illusion Personality Test: ಈ ಫೋಟೊ ನೋಡಿ, ಮೊದಲಿಗೆ ಏನು ಕಂಡಿತು ಅಂತ ಹೇಳಿ, ನೀವೆಂಥವರು ಅಂತ ನಮ್ಮ ತಜ್ಞರು ಪಕ್ಕಾ ಹೇಳ್ತಾರೆ !

Leave A Reply

Your email address will not be published.