Mandya: ಕ್ಲಾಸಿನಲ್ಲಿ ಶಿಕ್ಷಕರಿಗೇ ಲಾಂಗ್ ಝಳಪಿಸಿದ ವಿದ್ಯಾರ್ಥಿ: ಕಾರಣ ಕೇಳಿದ್ರೆ ಅಷ್ಟಕ್ಕೆ ಹೀಗೂ ಮಾಡ್ತಾರಾ ಅಂತ ಅನ್ನಿಸೇ ಅನ್ಸುತ್ತೆ !!

Mandya news A student who showed sword for the teacher in the class

Mandya: ಶಾಲೆಗೆ ಸರಿಯಾಗಿ ಹಾಜರಾಗದೆ ತರಗತಿಗೆ ಚಕ್ಕರ್ ಹಾಕುತ್ತಿದ್ದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದೇ ತಪ್ಪಾಗಿದೆ. ಪುಂಡ ವಿದ್ಯಾರ್ಥಿಯೊಬ್ಬ ತನಗೆ ಪಾಠ ಕಲಿಸುವ ಶಿಕ್ಷಕರ ಎದುರೇ ಲಾಂಗ್ ಜಳಪಿಸಿ ಬೆದರಿಸಿದ ಪ್ರಕರಣ ವರದಿಯಾಗಿದೆ.

ವಿದ್ಯೆ ಕಲಿಸಿದ ಗುರುವಿಗೆ ಲಾಂಗ್ ತೋರಿಸಿದ ಪ್ರಕರಣವು ಮಂಡ್ಯ( Mandya) ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ನಾಗಮಂಗಲದ ಖಾಸಗಿ ಕಾಲೇಜು ಒಂದರಲ್ಲಿ ಡಿಪ್ಲೋಮೋ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಗೆ ಪದೇ ಪದೇ ಗೈರಾಗುತ್ತಿದ್ದ. ಶಾಲಾ ಅಧ್ಯಾಪಕರು ಆತನಿಗೆ ತಿಳಿ ಹೇಳಿದ್ದರು ಆದರೂ ಆತ ಸುಧಾರಿಸಿರಲಿಲ್ಲ ಹೀಗಾಗಿ ಅನಿವಾರ್ಯವಾಗಿ ಉಪನ್ಯಾಸಕರು ಪೋಷಕರಿಗೆ ಮಾಹಿತಿ ನೀಡಿದ್ದಾರೆ ಇದರಿಂದ ಉಗ್ರ ಪ್ರತಾಪಿಯಾದ ವಿದ್ಯಾರ್ಥಿ ಕೈಯಲ್ಲಿ ಲಾಂಗು ಹಿಡಿದು ಉಪನ್ಯಾಸಕರ ಮುಂದೆ ಪ್ರತ್ಯಕ್ಷನಾಗಿ ದ್ದಾನೆ, ಕೈಯಲ್ಲಿ ಲಾಂಗ್ ಹಿಡಿದು ತನ್ನ ಲೆಕ್ಚರರ್ ಮೇಲೆ ಬೆದರಿಕೆ ಹಾಕುತ್ತಿರುವ ವಿಡಿಯೋ ಇದೀಗ ಅಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸರಿಯಾಗಿ ವೈರಲ್ ಆಗುತ್ತಿದೆ.

ಈ ಬಗ್ಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ವಿದ್ಯಾರ್ಥಿಯಿಂದ ಬೈಕು ಮತ್ತು ಬೆದರಿಕೆಗೆ ಬಳಸಿದ್ದ ಲಾಂಗ್ ಅನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ ಬಳಿಕ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಮತ್ತೊಮ್ಮೆ ಈ ರೀತಿ ಮಾಡದಂತೆ ತಿಳಿ ಹೇಳಿ ಕಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಾಲೆಗೆ ಬಂದು, ತನ್ನ ಗುರುಗಳಿಗೆ ಲಾಂಗ್ ತೋರಿಸಿದ ವಿದ್ಯಾರ್ಥಿ ಉಳಿದ ವಿದ್ಯಾರ್ಥಿಗಳ ಜೊತೆ ಹೇಗೆ ನಡೆದುಕೊಳ್ಳುತ್ತಾನೋ ದೇವರೇ ಬಲ್ಲ ? ಅಂಥವನನ್ನು ಕೇವಲ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟು ಕಳಿಸಿದ ಪೊಲೀಸರ ಕ್ರಮದ ಬಗ್ಗೆ ಭಿನ್ನರಾಗ ಮೂಡುತ್ತಿದೆ.

ಇದನ್ನೂ ಓದಿ: ಅಮೆರಿಕಾದ ಮಾಜಿ ಅಧ್ಯಕ್ಷ ರೊನಾಲ್ಡ್ ಟ್ರಂಪ್ ಅರೆಸ್ಟ್ !

Leave A Reply

Your email address will not be published.