Harshika poonachcha marriage: ಹರ್ಷಿಕಾ ಪೂಣಚ್ಚ ಭುವನ್ ಪೊನ್ನಣ್ಣ ಮದುವೆ; ಕೂರ್ಗಿ ಸ್ಟೈಲ್ ಊಟಕ್ಕೆ ಬೇಯಿಸಿ ಹಾಕಿದ ಹಂದಿ ಮಾಂಸ ಎಷ್ಟು ಕೆಜಿ ?

Sandalwood news actress harshika poonachcha and bhuvan ponnanna marriage meat lunch

Harshika poonachcha marriage : ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ಹೊಸತಾಗಿ ಮದುವೆಯಾಗಿದೆ ! ನಿನ್ನೆ ಆಗಸ್ಟ್ 24 ರಂದು ಹಲವು ವರ್ಷಗಳಿಂದ ಜತೆಯಾಗಿ ಓಡಾಡಿಕೊಂಡು, ಗೆಳೆಯರಾಗಿದ್ದುಕೊಂಡು, ನಂತರ ಪ್ರೀತಿಸಿಕೊಂಡು ಇದ್ದ ಜೋಡಿಗಳು ವೀರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಸತಿ ಪತಿಗಳಾಗಿದ್ದರೆ. ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಕೊಡಗು ಸಂಪ್ರದಾಯದಂತೆ ಹಸೆಮಣೆಗೇರಿದ( Harshika poonachcha marriage) ಸುದ್ದಿ ನಿಮಗೆ ತಿಳಿದೇ ಇದೆ. ಅದ್ದೂರಿ ಎನ್ನಿಸುವ ಈ ಸಮಾರಂಭಕ್ಕೆ ಸ್ಯಾಂಡಲ್ ವುಡ್ ತಾರೆಯರು, ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು. ಮದುವೆಯ ಜತೆಗೆ ಮದುವೆಯ ಸಂದರ್ಭ ಅತಿಥಿಗಳಿಗೆ ಉಣಬಡಿಸಿದ ವೈವಿಧ್ಯಮಯ ಮೆನುಗಳು ಇದೀಗ ಗಮನ ಸೆಳೆದಿವೆ.

ಮದುವೆ ಅಂದಮೇಲೆ ಒಳ್ಳೆಯ ಓಟ ಇರೋದು ಸಹಜ. ಆದರೆ ನಿನ್ನೆ ನಡೆದದ್ದು ಕೂರ್ಗ್ ಜೋಡಿ ಮದುವೆ. ಒಟ್ಟಾರೆ ಸಂಸ್ಕೃತಿಯಲ್ಲಿ ಫೋಟೋ ಪ್ರಚಾರಗಳಲ್ಲಿ ಮತ್ತು ಆಚರಣೆಗಳಲ್ಲಿ ಕೊಡವರಿಗೆ ತನ್ನದೇ ಆದ ಸ್ಥಾನವಿದೆ. ನಿನ್ನೆ ವಿವಾಹ ಸಮಾರಂಭದಲ್ಲಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲೆಲ್ಲೂ ಕೊಡವತನ ಎದ್ದು ಕಾಣುತ್ತಿತ್ತು. ವೆಜ್ ಮತ್ತು ನಾನ್ ವೆಜ್ ಶೈಲಿಯ ವಿವಿಧ ಖಾದ್ಯಗಳು ಆಹಾರದ ಮೆನುವಿನಲ್ಲಿದ್ದವು. ಕೊಡವರು ವಿಶೇಷವಾಗಿ ನಾನ್ ವೆಜ್ ಪ್ರಿಯರು ಆದರೆ ಬಂದ ಅತಿಥಿ ಅಭ್ಯಾಗತರಿಗೆ ಶಾಖಾಹಾರದ ವ್ಯವಸ್ಥೆಯು ಇತ್ತು. ಹಾಗಾದ್ರೆ ಬನ್ನಿ ನೋಡ್ಕೊಂಡು ಬರೋಣ ಒಟ್ಟಾರೆ ಮೆನುವಿನಲ್ಲಿ ಏನೆಲ್ಲಾ ಇದ್ದವು ಎಂದು.
ಸಾಮಾನ್ಯವಾಗಿ ಕೊಡಗು ಮದುವೆಯ ಸಂದರ್ಭ ಓಪನ್ ಬಾರ್ ಇರುವುದು ಸಹಜ. ನಿನ್ನೆಯ ಮದುವೆಯ ಸಂದರ್ಭ ಮದ್ಯ ಸರಬರಾಜು ಇರಲಿಲ್ಲ. ಆದರೆ ತರಾವರಿ ಮಾಂಸದ ಅಡುಗೆ ಅದು ಕೊಡಗರ ಪ್ರೀತಿಯ ಪೋರ್ಕ್ ಹಲವು ರೂಪಗಳಲ್ಲಿ ಊಟದ ಪ್ಲೇಟುಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ 23ನೇ ತಾರೀಕು ರಾತ್ರಿ ಓಪನ್ ಬಾರ್ ಇದ್ದು ತರಾವರಿ ಕೂರ್ಗ್ ಸ್ಟೈಲಿನ ಹಂದಿಮಾಂಸ ಚಿಕನ್ ಇತ್ಯಾದಿಗಳ ಕೂರ್ಗ್ ಗಮ್ಮತ್ತು ಇತ್ತು. ಮದುವೆಯ ಊಟಕ್ಕೆ 5 ಕ್ವಿಂಟಾಲ್ ಚಿಕನ್, 475 ಕೆಜಿ ಮಟನ್ ಮತ್ತು ಬರೋಬ್ಬರಿ 600 ಕೆಜಿ ಪೋರ್ಕ್ ಇದ್ದದ್ದು ವಿಶೇಷ.

ನಿನ್ನೆಯ ಮದುವೆ ಸಂದರ್ಭದಲ್ಲಿ ಕೂಡಾ ನಾನ್ ವೆಜ್ ಅಡುಗೆ ಗಮನ ಸೆಳೆದಿತ್ತು. ಕೊಡವ ಶೈಲಿಯ ಬಾಣಸಿಗರು ನೂ ಪಟ್ಟು, ಪೋರ್ಕ್ ಫ್ರೈ, ಪೋರ್ಕ್ ಕರಿ, ಮಟನ್ ಬಿರಿಯಾನಿ, ಮಟನ್ ಫ್ರೈ, ಚಿಕನ್ ಫ್ರೈ ಸೇರಿದಂತೆ ಹಲವು ನಾನ್ ವೆಜ್ ಐಟಂಗಳನ್ನು ರುಚಿಕರವಾಗಿ ಬೇಯಿಸಿ ಪೇರಿಸಿ ಇಟ್ಟಿದ್ದರು. ವೆಜ್ ಮೆನುವಿನಲ್ಲಿ ಪಲಾವ್, ಅನಾನಸ್ ಕರಿ, ಬೆಂಡೆಕಾಯಿ ಫ್ರೈ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು, ವೆಜ್ ಕುರ್ಮಾ ಇತ್ತು.

ಮದುವೆ ಸಮಾರಂಭಕ್ಕೆ ಕಲಾವಿದರಾದ ಗೋಲ್ಡನ್ ಸ್ಟಾರ್ ಗಣೇಶ್, ಅನು ಪ್ರಭಾಕರ್ -ರಘು ಮುಖರ್ಜಿ ದಂಪತಿ,ದೊಡ್ಡಣ್ಣ, ತಬಲಾ ನಾಣಿ ಬಂದಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮುಗುಗೇಶ್ ನಿರಾಣಿ ಮತ್ತಿತರರು ಆಗಮಿಸಿದ್ದು ಮದುವೆಯ ಇನ್ನೊಂದು ವಿಶೇಷ.
ಹರ್ಷಿಕಾ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದರೆ ಭುವನ್ ಬಿಳಿ ಬಣ್ಣದ ಬಟ್ಟೆ ಜೊತೆಗೆ ಪೇಟ ತೊಟ್ಟು ಗಮನ ಸೆಳೆದರು. ಕೊಡವ ಸಂಪ್ರದಾಯ ಶೈಲಿಯ ಉಡುಗೆಗಳಲ್ಲಿ ಹರ್ಷಿಕಾ ಮತ್ತು ಭುವನ್ ಕಾಣಿಸಿಕೊಂಡು ಗಮನ ಸೆಳೆದರು.

ಇದನ್ನೂ ಓದಿ: ಪಂಚೆ ರೀತಿ ಸೀರೆ ಎತ್ತಿ ಕಟ್ಟಿ, ವಧುವಿನ ಫೋಟೋಶೂಟ್‌! ಸೀರೆ ಇನ್ನೂ ಮೇಲಕ್ಕೆತ್ತಬೇಕಿತ್ತು ಎಂದ ನೆಟ್ಟಿಗರು!

Leave A Reply

Your email address will not be published.