Bengaluru: ಬೆಂಗಳೂರು ಖಾಸಗಿ ಸಾರಿಗೆ ಸಂಪೂರ್ಣ ಸ್ತಬ್ದ, ಆಟೋ ಚಾಲಕರಿಗೆ ತಿಂಗಳಿಗೆ 10,000 ರೂ. ಕೊಡೋ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಬಿಗ್ ಹೇಳಿಕೆ !

Bengaluru private transport completely shut down auto drivers get rs 10 thousand per month Ramalinga Reddy

Bengaluru: ಬೆಂಗಳೂರು (Bengaluru) ಭಾಗಶಃ ಸ್ತಬ್ಧ. ಖಾಸಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧ. ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದು ಕೂತಿರುವ ಖಾಸಗಿ ಸಾರಿಗೆ ಒಕ್ಕೂಟ ಇವತ್ತು ಬೆಂಗಳೂರು ಬಂದ್ ಗೆ ಕರೆ ನೀಡಿದ್ದು ನಿನ್ನೆ ಮಧ್ಯರಾತ್ರಿಯಿಂದಲೇ ಬಂದ್ ಬಿಸಿ ತಟ್ಟುತ್ತಿದೆ. ಬೆಂಗಳೂರಿನಲ್ಲಿ ಖಾಸಗಿ ಬಸ್ಸುಗಳು ಕಂಪ್ಲೀಟ್ ಬಂದ್ ಆಗಿವೆ. ಕಲಾಸಿಪಾಳ್ಯದಲ್ಲಿ ಖಾಸಗಿ ಬಸ್ಸುಗಳು ಸಾಲುಗಟ್ಟಿ ನಿಂತಿವೆ. ಹೆಚ್ಚು ಕಮ್ಮಿ ಎಲ್ಲಾ ರಸ್ ಆಟೋಗಳು ಸಂಪು ಹೂಡಿವೆ. ಅಲ್ಲಲ್ಲಿ ಕೆಲವು ಆಟೋಗಳು ನಾಲ್ಕೈದು ಪಟ್ಟು ದುಡ್ಡು ಕೇಳಿ ಪರಿಸ್ಥಿತಿಯ ಲಾಭ ಮಾಡಿಕೊಳ್ಳುವ ಹೊಂಚಿನಲ್ಲಿವೆ.

ಯಾವುದೇ ಪ್ರೈವೇಟ್ ಟ್ಯಾಕ್ಸಿ ಕ್ಯಾಬ್ ಚಾಲನೆಯಲ್ಲಿ ಇಲ್ಲ. ಏರ್ಪೋರ್ಟ್ ಟ್ಯಾಕ್ಸಿ ಬಂದ್ ಆಗಿದೆ. ಒಟ್ಟು 32 ಸಂಘಟನೆಗಳು ಒಟ್ಟಾಗಿ ಸೇರಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಆಟೋ ಚಾಲಕರ ಪ್ರಮುಖ ಬೇಡಿಕೆಯಾದ ರಾಪಿಡೋ ಬೈಕ್ ಅನ್ನು ತಕ್ಷಣ ನಿಲ್ಲಿಸಬೇಕು ಎನ್ನುವುದು ಆಟೋ ಚಾಲಕರ ಮೊದಲ ಒತ್ತಾಯ. ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಹಿನ್ನಡೆಯಾಗಿದ್ದು ಹೆಚ್ಚಿನ ಮಹಿಳೆಯರು ಮತ್ತು ಪುರುಷರು ಸರ್ಕಾರಿ ಬಸ್ಸುಗಳಲ್ಲಿ ಓಡಾಡುತ್ತಿದ್ದು ಅದು ಆಟೋ ಚಾಲಕರಿಗೆ ದೊಡ್ಡ ತಲೆನೋವು ಉಂಟಾಗಿತ್ತು. ಅದರ ಮಧ್ಯೆ ಬೈಕ್ ಟ್ಯಾಕ್ಸಿ ಶುರುವಾಗಿ ಆಟೋ ಚಾಲಕರ ಹೊಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ ಅದಕ್ಕಾಗಿ ಆಟೋ ಚಾಲಕರು ಕೂಡ ಈ 32 ಸಂಘಟನೆಗಳ ಜೊತೆ ಪ್ರತಿಭಟನೆಗೆ ದೊಡ್ಡದಾಗಿ ಕೈಜೋಡಿಸಿದ್ದಾರೆ.

ಆಟೋ ಚಾಲಕರಿಗೆ 10,000 ರೂಪಾಯಿ ಕೊಡಲು ಆಟೋ ಚಾಲಕರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಹಲೋ ಖಾಸಗಿ ಸಾರಿಗೆ ಸಂಸ್ಥೆಗಳ ಉಳಿದ ಬೇಡಿಕೆಗಳ ಈಡೇರಿಕೆಗೆ ಒಟ್ಟು 5000 ಕೋಟಿ ರೂಪಾಯಿಗಳು ಅಗತ್ಯ ಇದೆಯಂತೆ. ಹಾಗಾಗಿ ಖಾಸಗಿ ವಾಹನ ಮಾಲಕರ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ ಎನ್ನುವುದು ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿಯವರ ಅಭಿಪ್ರಾಯ.

ಸಾರಿಗೆ ಬಿಸಿ ಜೋರಾಗಿ ತಟ್ಟುತ್ತಿದೆ. ಬಸ್ ಇದೆ ಎಂದು ಕಲಾಸಿಪಾಳ್ಯಕ್ಕೆ ಬಂದ ಜನರು ವಾಪಸ್ ಹೋಗಲು ಪರದಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಮನಗಂಡು ಎಲ್ಲಾ ಪ್ರಮುಖ ಬಸ್ ಸ್ಟ್ಯಾಂಡ್ ರೈಲ್ವೆ ಸ್ಟೇಷನ್ ಮತ್ತು ಏರ್ಪೋರ್ಟಿಗೆ ಹೋಗಲು ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಡಿದೆ. ಹೆಚ್ಚುವರಿ 500 ಬಸ್ಸುಗಳನ್ನು ಬೆಂಗಳೂರಿನಲ್ಲಿ ಇಂದು ನಿಯೋಜಿಸಲಾಗಿದೆ. ಅಂದರೆ ಒಟ್ಟು ನಾಲ್ಕು ಸಾವಿರ ಹೆಚ್ಚು ಟ್ರಿಪ್ ಬಸ್ಸುಗಳು ಇವತ್ತು ಬೆಂಗಳೂರಿನಲ್ಲಿ ಕಾರ್ಯಾಚರಣೆ ಮಾಡಲಿವೆ.

Leave A Reply

Your email address will not be published.