ಬೆಂಗಳೂರು ಸಾರಿಗೆ ಬಂದ್ ಬಿಸಿ ತಟ್ಟಿ, BMTC ಏರಿದ ಖ್ಯಾತ ಕ್ರಿಕೆಟಿಗ !

ಬೆಂಗಳೂರು; ಖ್ಯಾತ ಕ್ರಿಕೆಟರ್ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆಗೂ ಬೆಂಗಳೂರು ಬಂದ್ ನ ಬಿಸಿ ತಟ್ಟಿದೆ. ಇವತ್ತು ಏರ್ಪೋರ್ಟ್ ನಲ್ಲಿ ಬಂದಿಳಿದ ಅನಿಲ್ ಕುಂಬ್ಳೆ ಅವರು ಬಿಎಂಟಿಸಿ ಬಸ್ ಹತ್ತಿ ತನ್ನ ಮನೆಗೆ ಹೊರಟಿದ್ದಾರೆ. ಸೆಲೆಬ್ರಿಟಿ ಒಬ್ಬರಿಗೆ ಬಂದ್ ನ ಬಿಸಿ ತಟ್ಟಿದ ಇವತ್ತಿನ ಮೊದಲ ಘಟನೆ ಇದಾಗಿದೆ.

ಖಾಸಗಿ ಸಾರಿಗೆ ಇಲಾಖೆಗಳ ಬಂದ್ ಇದ್ದ ಕಾರಣದಿಂದ ಅನಿಲ್ ಕುಂಬಳೆ ಅವರಿಗೆ ಟ್ಯಾಕ್ಸಿ ದೊರೆಯಲಿಲ್ಲ. ಜೊತೆಗೆ ಸ್ವಂತ ಕಾರು ಕೂಡ ಒಯ್ಯುವುದು ಸೂಕ್ತ ಅಲ್ಲ ಅನ್ನಿಸಿರಬೇಕು, ಹಾಗಾಗಿ ಅನಿಲ್ ಕುಂಬಳೆ, ಬಿಎಂಟಿಸಿ ಬಸ್ ಏರಿದ್ದಾರೆ. ಬಸ್ ಏರಿ, ‘ ಬಿಎಂಟಿಸಿಗೆ ಥ್ಯಾಂಕ್ಸ್ ಏರ್ಪೋರ್ಟ್ ನಿಂದ ಮನೆಗೆ ಹೊರಟಿದ್ದೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮೊದಲೇ ಸರಳ ನಡೆ ನುಡಿಯ ವ್ಯಕ್ತಿ ಅನಿಲ್ ಕುಂಬಳೆ. ಇದೀಗ ಅನಿಲ್ ಕುಂಬಳೆ ಅವರ ಈ ಸರಳತೆಗೆ ಜನರು ಶ್ಲಾಘನೆ ಮಾಡಿದ್ದಾರೆ. ಕೆಲವರು ತಮಾಷೆ ಕೂಡ ಮಾಡಿದ್ದು, ” ನಿಮಗೆ ಬೆಂಗಳೂರಿನ ಅನಿಲ್ ಕುಂಬಳೆ ಸರ್ಕಲ್ ನಲ್ಲಿ ಇಳಿಯಬೇಕೆಂದರೆ ಕಂಡಕ್ಟರ್ ಗೆ ಮೊದಲೇ ಹೇಳಿ. ‘ ನನ್ನ ಸರ್ಕಲ್ ಹತ್ರ ನಿಲ್ಸಿ’ ” ಎಂದು ‘ಮೀಮರ್ ಮುತ್ತಣ್ಣ’ ತಮಾಷೆ ಮಾಡಿದ್ದಾರೆ.

https://twitter.com/anilkumble1074/status/1701128301526597816

Leave A Reply

Your email address will not be published.