ವಿದ್ಯಾರ್ಥಿನಿಯರಿಗೆ ಭಾರೀ ಸಿಹಿ: ಉಚಿತವಾಗಿ ಸಿಗಲಿದೆ ಮುಟ್ಟಿನ ಕಪ್, ವಿತರಣಾ ದಿನಾಂಕ ಸ್ಥಳ ಗಮನಿಸಿ

Menstrual Cup: ಮಂಗಳೂರು: ಮುಟ್ಟಿನ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ಹೆಣ್ಮಕ್ಕಳು ಎದುರಿಸುವ ಸವಾಲುಗಳು ಒಂದೆರಡಲ್ಲ. ಇಂತಹ ಹೆಣ್ಣುಮಕ್ಕಳ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆ ಅಂದ್ರೆ ಅದು ನನ್ನ ಮೈತ್ರಿ ಮುಟ್ಟಿನ ಕಪ್ (Menstrual Cup) ವಿತರಿಸುವ ಯೋಜನೆ.

ಅದರಂತೆ ಈ ಯೋಜನೆಯನ್ನು ರಾಜ್ಯದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಚಾಮರಾಜನಗರ ಹಾಗೂ ಮಂಗಳೂರಿನಲ್ಲಿ ಚಾಲನೆ ತರಲಾಗಿದೆ. ಅದರಂತೆ ಇಂದು ಮಂಗಳೂರಿನಲ್ಲಿ ಯೋಜನೆಗೆ ಚಾಲನೆ ಸಿಕ್ಕಿದೆ. ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದರು. ಇನ್ನು ಈ ಯೋಜನೆಯಂತೆ ಅಕ್ಟೋಬರ್ ತಿಂಗಳ ಆರಂಭದಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ನ್ನು ಆರೋಗ್ಯ ಇಲಾಖೆ ವಿತರಸಲಿದೆ.

ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಡಿ.ರಂದೀಪ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ. ಎಂ. ಇಂದುಮತಿ, ವಿಧಾನ ಪರಿಷತ್ ಶಾಸಕರಾದ ಕೆ. ಮಂಜುನಾಥ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಯೋಜನಾ ನಿರ್ದೇಶಕರಾದ ಡಾ. ಶ್ರೀನಿವಾಸ್ ಜಿ.ಎನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಸಹ ನಿರ್ದೇಶಕರಾದ ಡಾ.ರಾಜೇಶ್ವರಿ ದೇವಿ ಎಚ್. ಆರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕರಾದ ಡಾ. ವೀಣಾ ವಿ, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ಖ್ಯಾತ ಚಲನ ಚಿತ್ರ ನಟಿ ಸಪ್ತಮಿ ಗೌಡ ಭಾಗವಹಿಸಿದ್ದರು.

ಅಕ್ಕನ ಗಂಡನ ಸೊಂಟಕ್ಕೆ ಕೈ ಹಾಕಿದ ತಂಗಿ, ನಟಿ ಅಪರ್ಣಾ ನಾಯರ್ ಸಾವಿನ ಹಿಂದೆ ಯಾರೂ ಊಹಿಸದ ಟ್ವಿಸ್ಟ್ !

Leave A Reply

Your email address will not be published.