ಡೀಸೆಲ್ ವಾಹನಗಳ ಮೇಲೆ ಬೀಳುತ್ತಾ 10 % ಹೆಚ್ಚುವರಿ ತೆರಿಗೆ ?, ಕೇಂದ್ರ.ಮಂತ್ರಿ ಕೊಟ್ಟೇ ಬಿಟ್ರು ಬಿಗ್ ಅಪ್ಡೇಟ್ !

ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿಯಾಗಿ 10% ತೆರಿಗೆ ಏರಿಸಲಾಗುವುದು ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಗೆ ಇದೀಗ ಕೇಂದ್ರ ಸಚಿವ ನೀಡಿದ್ದಾರೆ. ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು ಎಲ್ಲಾ ಸಚಿವರು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನವದೆಹಲಿಯಲ್ಲಿ ನಡೆದ 63ನೇ ವಾರ್ಷಿಕ ಸಿಯಮ್ (SIAM) ಸಮಾವೇಶದಲ್ಲಿ ಮಾತನಾಡಿದ ಗಡ್ಕರಿಯವರು, ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆಗ ಮಾತನಾಡಿದ್ದ ಗಡ್ಕರ್ಯವರು ದಯವಿಟ್ಟು ಡೀಸೆಲ್ ವಾಹನಗಳನ್ನು ಬಳಸಬೇಡಿ ಇಲ್ಲದಿದ್ದರೆ ಅಂತಹ ವಾಹನಗಳ ಮಾರಾಟ ಕಷ್ಟವಾಗುವಷ್ಟು ಹೆಚ್ಚುವರಿ ತೆರಿಗೆ ವಿಧಿಸುತ್ತೇವೆ ಎಂದು ಎಚ್ಚರಿಸಿದ್ದರು. ಆದರೆ ಬೇರೆಯದೆ ರೀತಿಯ ಸುದ್ದಿ ಹಬ್ಬಿತ್ತು. ” ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ 10% ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯಲಿದ್ದೇನೆ. ಬಹುತೇಕ ರಾಷ್ಟ್ರಗಳಲ್ಲಿ ಇಂತಹ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ”‘ ಎಂದು ವರದಿಯಾಗಿತ್ತು. ಈ ಹೇಳಿಕೆಗೆ ಇದೀಗ ಗಂಡು ಕರಿಯ ಅವರು ಸ್ಪಷ್ಟನೆ ನೀಡಿದ್ದಾರೆ.

ಇದೀಗ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಕೇಂದ್ರ ಸಾರಿಗೆ ಸಚಿವರು, ‘ಡೀಸೆಲ್ ಮಾರಾಟದ ಮೇಲೆ 10 ಪರ್ಸೆಂಟ್ ಹೆಚ್ಚು ಪರ್ಸೆಂಟ್ ತೆರಿಗೆ ವಿಧಿಸುವ ಮಾಧ್ಯಮ ವರದಿಗಳ ಬಗ್ಗೆ ತುರ್ತಾಗಿ ಸ್ಪಷ್ಟಪಡಿಸುವ ಅಗತ್ಯ ಇದೆ. ಅಂತಹ ಯಾವುದೇ ಪ್ರಸ್ತಾವನೆ ನಮ್ಮ ಪರಿಗಣನೆಯಲ್ಲಿ ಇಲ್ಲ’ ಎಂದು ಕೇಂದ್ರ ಸಚಿವ ಘಡ್ಕರಿ ಹೇಳಿದ್ದಾರೆ. ಇದೀಗ ಈ ಮಾತನ್ನು ಕೇಳಿದ ವಾಹನ ಮಾಲೀಕರು ಮತ್ತು ಡಿಸಿ ವಾಹನ ಕೊಳ್ಳಲು ಬಯಸುವ ಜನರು ರಿಲಾಕ್ಸ್ ಆಗಿದ್ದಾರೆ.

ಡೀಸೆಲ್ ಒಂದು ಪರಿಸರಕ್ಕೆ ಮಾರಕ ಸಿಎಂ ಹೀಗಾಗಿ ಪರಿಸರ ಸ್ನೇಹಿ ಇಂಧನಗಳತ್ತ ಕೈಗಾರಿಕೆಗಳು ಮುಖ ಮಾಡಬೇಕಾದಾಗ ಅಗತ್ಯವಿದೆ. ಪರ್ಯಾಯ ಇಂಧನದ ಬೇಡಿಕೆ ಪೂರೈಸಲು ಪರಿಸರ ಸ್ನೇಹಿ ಇಂಧನ ಬಳಕೆ ಮಾಡುವ ಎಂದು ಅವರು ತಿಳಿಸಿದ್ದಾರೆ.

ಈಗ ವಾಹನಗಳ ಮೇಲೆ 28% ಜಿಎಸ್‌ಟಿ ಇದ್ದು, ಇದರ ಜತೆಗೆ 1% ನಿಂದ 22% ರವರೆಗೂ ಹೆಚ್ಚುವರಿ ಸೆಸ್‌ ವಿಧಿಸಲಾಗುತ್ತದೆ. ಇದು ವಾಹನಗಳ ಮಾದರಿಯನ್ನು ಅವಲಂಬಿಸಿರುತ್ತದೆ. ಎಸ್‌ಯುವಿಗಳ ಮೇಲೆ ಅತ್ಯಧಿಕ ಪ್ರಮಾಣದ ಅಂದರೆ 28% ತೆರಿಗೆ ಮತ್ತು ಪರಿಹಾರದ ಸೆಸ್‌ ಆಗಿ 22% ಇದೆ ಎಂದು ವರದಿಯಾಗಿದೆ.

Leave A Reply

Your email address will not be published.