Belagavi: ಚಲಿಸುತ್ತಿದ್ದ ರೈಲಿನಲ್ಲಿ ಒಮ್ಮೆಲ್ಲೇ ಪ್ರಜ್ಞೆ ತಪ್ಪಿ ಬಿದ್ದ 8 ಪ್ರಯಾಣಿಕರು; ಅಯ್ಯೋ ಟ್ರೈನ್ ನಲ್ಲಿ ಇದ್ದಕ್ಕಿದ್ದಂತೆ ಅಂತಹದ್ದೇನಾಯ್ತು?

Belagavi news belagavi railway station incident 8 passengers fell unconscious in the moving train

Belagavi: ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ 8 ಜನ ಪ್ರಯಾಣಿಕರು ಪ್ರಜ್ಞೆ ತಪ್ಪಿ ಬಿದ್ದ ಘಟನೆ ಗೋವಾದ ವಾಸ್ಕೋ-ಡ-ಗಾಮಾದಿಂದ ದೆಹಲಿಯ ಹಜರತ್ ನಿಜಾಮುದ್ದೀನ್‌ಗೆ ಹೋಗುವ ಗೋವಾ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಹಾಗೂ ಪುರುಷರು ಸೇರಿ 8 ಮಂದಿ ಪ್ರಯಾಣಿಕರು ವಾಂತಿಭೇದಿಗೆ ತುತ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪ್ರಯಾಣಿಕರನ್ನು ಗಮನಿಸಿದ ರೈಲ್ವೆ ಪೊಲೀಸರು ಬೆಳಗಾವಿ (Belagavi) ತಲುಪಿದ ನಂತರ ಚಿಕಿತ್ಸೆಗಾಗಿ ಬೆಳಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಸ್ವಸ್ಥಕ್ಕೀಡಾದ ಪ್ರಯಾಣಿಕರು ಮಧ್ಯಪ್ರದೇಶದ ಖಾಂಡ್ವಾ ಮೂಲದವರು ಎನ್ನಲಾಗಿದೆ. ರೈಲಿನಲ್ಲಿದ್ದ ಯಾರೋ ಕಳ್ಳತನ ಮಾಡಲು ಇವರಿಗೆ ಮತ್ತು ಬರುವ ಆಹಾರ ನೀಡಿದ್ದು ಅದನ್ನು ಸೇವಿಸಿ ಅಸ್ವಸ್ಥಕ್ಕೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಸದ್ಯ ಅನಾರೋಗ್ಯಕ್ಕೀಡಾದವರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪರಿಚಿತರು ನೀಡುವ ಆಹಾರವನ್ನು ಸೇವಿಸಿದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

 

Leave A Reply

Your email address will not be published.