58 ವರ್ಷದ ಹಿಂದೆ ಎಮ್ಮೆ ಕದ್ದವ ಈಗ ಸಿಕ್ಕಿ ಬಿದ್ದ; 22 ರ ಹರೆಯದಲ್ಲಿ ಕದ್ದವ ಈಗ ಹಣ್ಣು ಹಣ್ಣು ಮುದುಕ !

ಬೀದರ್: ಪೊಲೀಸರು ಎಂತೆಂಥದ್ದೋ ಕಳ್ಳತನ ಪ್ರಕರಣವನ್ನು ಬೇಧಿಸೋದನ್ನು ನಾವು ನೋಡಿದ್ದೇವೆ. ಆದರೆ ಈ ಪ್ರಕರಣವನ್ನು ನೋಡಿದ್ರೆ ನಿಜಕ್ಕೂ ಎಂಥವರಿಗೂ ಅಚ್ಚರಿಯಾಗುತ್ತದೆ. ಅಷ್ಟೊಂದು ಇಂಟರೆಸ್ಟಿಂಗ್ ಆಗಿದೆ ಈ ಪ್ರಕರಣ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಪೊಲೀಸ್ ಠಾಣೆಯಲ್ಲಿ 1965 ರಲ್ಲಿ ಕಳ್ಳತನ ಪ್ರಕರಣವೊಂದು ದಾಖಲಾಗಿತ್ತು. ಮಹಾರಾಷ್ಟ್ರದ ಕಿಶನ್ ಚಂದರ್ ಹಾಗೂ ಗಣಪತಿ ವಿಠಲ್ ವಾಗ್ಮೋರೆ ವಿರುದ್ಧ ಮುರಳೀಧರ್ ರಾವ್ ಎಂಬವರು ತನ್ನ 2 ಎಮ್ಮೆ ಹಾಗೂ 1 ಕರುವನ್ನು ಕದ್ದಿದ್ದಾರೆ ಎಂದು ದೂರು ನೀಡಿದ್ದರು. ಅದರಂತೆ ಇಬ್ಬರನ್ನು ಬಂಧಿಸಿದ್ದರು.

ಆದರೆ ಪ್ರಕರಣದ ಆರೋಪಿಗಳು ಆ ಬಳಿಕ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ 58 ವರ್ಷಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಎಮ್ಮೆ ಕದಿಯುವಾಗ 22 ವರ್ಷದ ಕಿಶನ್ ಚಂದರ್ ಗೆ ಈಗ ಬರೋಬ್ಬರಿ 80 ವರ್ಷ. ಬೀದರ್ ಎಸ್ಪಿ ಚೆನ್ನಬಸವಣ್ಣ ಎಲ್.ಎಸ್. ಮಾರ್ಗದರ್ಶನದಲ್ಲಿ ಎಮ್ಮೆ ಕಳ್ಳರನ್ನು ಬಂಧಿಸಲಾಗಿದೆ.

 

ಆದರೆ ಒಬ್ಬ ಚಾಲಾಕಿ ಎಮ್ಮೆ ಕಳ್ಳನನ್ನು ಬಂಧಿಸಲು 58 ವರ್ಷಗಳಿಂದ ಪರದಾಡಿದ್ದರು. ಗೋಲ್ಡನ್ ಜುಬಿಲಿ ಕೂಡಾ ಕಳೆದರೂ ಎಮ್ಮೆ ಕಳ್ಳ ಯಾರಿಗೂ ಸಿಗದೆ ತಪ್ಪಿಸಿಕೊಳ್ಳುತ್ತಲೇ ಇದ್ದ. ಈಗ ಕೊನೆಗೂ ಪೊಲೀಸರು ಆತನನ್ನು ಹಿಡಿದಿದ್ದಾರೆ. ಆಗ 22 ವರ್ಶೈದ್ದ ಹುಡುಗ, ಸಿಕ್ಕಿ ಬೀಳುವಷ್ಟರಲ್ಲಿ ಆತನಿಗೆ 80 ವರ್ಷ ವಯಸ್ಸಾಗಿತ್ತು !

58 ವರ್ಷ ಸರ್ಕಸ್ ಮಾಡುವ ಪೊಲೀಸರನ್ನು ನೋಡಿದಾಗ ನಿಜಕ್ಕೂ ಒಂದಷ್ಟು ಪ್ರಶ್ನೆಗಳು ಹುಟ್ಟೋದು ಸಹಜ. ಲೆಕ್ಕವಿಲ್ಲದಷ್ಟು ವಂಚಿಸಿ ಎಲ್ಲೋ ವಿದೇಶದಲ್ಲಿ ತಲೆಮರೆಸಿ ಕೊಳ್ಳುವವರಿಗಿಂತ ದೊಡ್ಡ ಅಪರಾಧವನ್ನು ಇವರು ಮಾಡಿದ್ದಾರಾ? ಪೊಲೀಸರೇ ಉತ್ತರಿಸಬೇಕು.

Leave A Reply

Your email address will not be published.