ಕುರಿ ಕಾಯುತ್ತಿದ್ದ ಬಾಲಕನನ್ನು ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ; ಸಿಎಂ ಸಿದ್ದರಾಮಯ್ಯ ಸದಾ ತಮ್ಮ ಒರಟು ಮಾತಿನಿಂದಲೇ ಗಮನ ಸೆಳೆಯುವವರು. ಆದರೆ ಅನೇಕ ಬಾರಿ ಅವರ ಮಾನವೀಯತೆ ಗುಣಗಳಿಂದ ಸುದ್ದಿಯಾಗಿದ್ದಾರೆ. ಇದೀಗ ಅದೇ ರೀತಿ ಶಾಲೆ ಬಿಟ್ಟು ಕುರಿ ಕಾಯುತ್ತಿದ್ದ ಬಾಲಕನೊಬ್ಬನ ಬದುಕಿಗೆ ಹೊಸ ಹುರುಪು ತುಂಬಿದ್ದಾರೆ ಸಿದ್ದುಜೀ.

ಹೌದು.. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರ ಗ್ರಾಮದ ಹನ್ನೊಂದು ವರ್ಷದ ಬಾಲಕ ಯೋಗೀಶ ನನ್ನು ಶಾಲೆ ಬಿಡಿಸಿದ್ದ ಪೋಷಕರು ಕುರಿ ಕಾಯಲು ಹಚ್ಚಿದ್ದರು. ಇದನ್ನು ಗಮನಿಸಿದ ಚಳ್ಳಕೆರೆಯ ಮಹೇಂದ್ರ ಎಂಬವರು ಯೋಗೀಶನನ್ನು ಶಾಲೆ ಬಿಡಿಸಿ ಕುರಿ ಕಾಯಲು ಕಳುಹಿಸಿರುವ ಬಗ್ಗೆ ಟ್ವೀಟ್ ಮಾಡಿ ಸಿಎಂ ಕಚೇರಿಯ ಗಮನ ಸೆಳೆದಿದ್ದರು. ಟ್ವೀಟ್ ಮಾಡಿದ ಒಂದೇ ದಿನದಲ್ಲಿ ಬಾಲಕನನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಪೋಷಕರ ಮನವೊಲಿಸಿ ಮರಳಿ ಶಾಲೆಗೆ ಸೇರಿಸಿದ್ದಾರೆ.

ಬಾಲಕ ಮರಳಿ ಶಾಲೆಗೆ ಸೇರಿರುವ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ತಮ್ಮ ಬಾಲ್ಯದ ಬಗ್ಗೆ ಹೇಳಿಕೊಂಡು ಮರಳಿ ಶಿಕ್ಷಣದತ್ತ ಮುಖಮಾಡಿದ ಬಾಲಕನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.

Leave A Reply

Your email address will not be published.