ತನ್ನ ಪ್ರಾಣವನ್ನು ಪಣಕ್ಕಿಟ್ಟು ಒಡೆಯನ ಜೀವ ಉಳಿಸಿದ ಸೇನಾ ಶ್ವಾನ; ಈ ಶ್ವಾನದ ತ್ಯಾಗ ಕೇಳಿದ್ರೆ ನಿಮ್ಮ ಕಣ್ಣಾಲಿ ತೇವಗೊಳ್ಳುತ್ತೆ..

ಜಮ್ಮುಕಾಶ್ಮೀರ; ನಿಯತ್ತಿಗೆ ಇನ್ನೊಂದು ಹೆಸರು ಅಂದ್ರೆ ಅದು ಶ್ವಾನ ಅನ್ನೋದಕ್ಕೆ ಸಾಕ್ಷಿಗಳು ಅದೆಷ್ಟೋ ಸಿಗುತ್ತದೆ. ಇಲ್ಲೊಂದು ಶ್ವಾನದ್ದು ಕೂಡ ಅದೇ ಕಥೆ.

ಅಂದ್ಹಾಗೆ ಇದು 6 ವರ್ಷ ಪ್ರಾಯದ ಲ್ಯಾಬ್ರಡಾರ್ ಜಾತಿಗೆ ಸೇರಿದ ಸೇನಾ ಶ್ವಾನ.  ಇದರ ಹೆಸರು ಕೆಂಟ್. ಇದು , ಭಯೋತ್ಪಾದಕರನ್ನು ಓಡಿಸುವ ಪ್ರಾಯೋಗಿಕ ಕಾರ್ಯಾಚರಣೆಯಲ್ಲಿ ಸೈನಿಕರ ತಂಡದ ನೇತೃತ್ವ ವಹಿಸಿತ್ತು.  ಕಾರ್ಯಾಚರಣೆ ಸಾಗುತ್ತಿದ್ದಂತೆ ಕಾರ್ಯಾಚರಣಾ ತಂಡದ ಮೇಲೆ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿಯಾಗಿದೆ. ಇಷ್ಟಗುತ್ತಿದ್ದಂತೆ ತಡ ಕೆಂಟ್ ಮೊದಲು ಅಲರ್ಟ್ ಆಗಿದೆ. ತನ್ನನ್ನು ನಿರ್ವಹಿಸುತ್ತಿದ್ದ ಒಡೆಯನ ರಕ್ಷಣೆಗೆ ಮುಂದಾಗಿದೆ. ಗುಂಡು ತನ್ನ ಒಡೆಯನಿಗೆ ತಾಗದಂತೆ ಅಡ್ಡ ಬಂದು ಒಡೆಯ ಪ್ರಾಣ ಉಳಿಸಿದೆ.ಆ ಮೂಲಕ ಶ್ವಾನ ತನ್ನ ನಿಯತ್ತು ಹಾಗೂ ಕರ್ತವ್ಯ ಪ್ರಜ್ಞೆ ಮೆರೆದಿದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್,’ಆಪರೇಷನ್ ಸುಜಲಿಗಂಗಾ ಹೆಸರಿನ  ಕಾರ್ಯಾಚರಣೆಯಲ್ಲಿ ಕೆಂಟ್ ಮುಂಚೂಣಿಯಲ್ಲಿತ್ತು. ರಾಜೌರಿ ಜಿಲ್ಲೆಯ ನರ್ಲಹ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಹಾಗೂ ಒಬ್ಬ ಉಗ್ರಗಾಮಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ವಿಶೇಷ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದೀಗ ಕೆಂಟ್ ನ ತ್ಯಾಗ ಹಾಗೂ ಕರ್ತವ್ಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಅಗೃದರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.

Leave A Reply

Your email address will not be published.