Chaitra kundapura: ಹಿಂದೂ ಹೋರಾಟಗಾರ್ತಿ ಚೈತ್ರ ಆಶ್ರಯ ಇದ್ದದ್ದು ಮುಸ್ಲಿಂ ಕಾಂಗ್ರೆಸ್ ವಕ್ತಾರೆಯ ಮನೆಯಲ್ಲಿ, ಏನಿದು ಫ್ರೆಶ್ ಸ್ಟೋರಿ ?!

Chitra absconding in congress spoke persons home

Chaitra kundapura:ಉದ್ಯಮಿ ಒಬ್ಬರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂದಿತವಾಗಿರುವ ಬಂಧಿತವಾಗಿ ಇದೀಗ ಪೊಲೀಸ್ ವಶದಲ್ಲಿರುವ ಚೈತ್ರ ಕುಂದಾಪುರ( Chaitra kundapura)ಬಗ್ಗೆ ಸ್ಫೋಟಕ ವಿಷಯಗಳು ಒಂದೊಂದಾಗಿ ಹೊರಕ್ಕೆ ಬರುತ್ತಿವೆ. ನಿನ್ನೆ ಆಕೆಯನ್ನು ತಡರಾತ್ರಿ ಶ್ರೀ ಕೃಷ್ಣ ಮಠದ ಬಳಿ ವಶಕ್ಕೆ ಪಡೆದು ಕೊಳ್ಳಲಾಗಿತ್ತು. ಈ ಕಟ್ಟರ್ ಹಿಂದೂ ಪರ ಸಂಘಟನೆಯ ಹುಡುಗಿ ಮುಸ್ಲಿಂ ಒಬ್ಬರ ಆಶ್ರಯದಲ್ಲಿ ಇದ್ದ ರೋಚಕ ವಿಷಯ ಇದೀಗ ಬಹಿರಂಗವಾಗಿದೆ.

ಕಾದು ಕೂತು, ಹೊಂಚಿ ಹಾಕಿ ಚೈತ್ರ ಕುಂದಾಪುರ ಅಂದು ಬಂಧಿಸಿದ ನಂತರ ಅಚ್ಚರಿಯ ಕೆಲ ಮಾಹಿತಿ ಲಭ್ಯವಾಗಿದೆ. ಕಳೆದ ಏಳು ದಿನಗಳಿಂದ ತರೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಕಾಂಗ್ರೆಸ್ ಪಕ್ಷದ ವಕ್ತಾರೆ ಒಬ್ಬರ ಮನೆಯಲ್ಲಿ ಅವಿತು ಕುಳಿತಿದ್ದ ವಿಷಯ ಈಗ ಬಹಿರಂಗವಾಗಿದೆ ಕಾಂಗ್ರೆಸ್ನ ಮಾಧ್ಯಮ ವಕ್ತಾರೆಯ ಮನೆಯಲ್ಲಿ ಚೈತ್ರ ಕುಂದಾಪುರ ಅವಿತು ಕುಳಿತಿದ್ದರು ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ರಿಂದ ಚೈತ್ರಾಗೆ ಆಶ್ರಯ ನೀಡಿದ ಆರೋಪ ಕೇಳಿ ಬಂದಿದೆ. ಚೈತ್ರಾಳನ್ನು 5 ಕೋಟಿ ವಂಚಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಬೈಂದೂರಿನಲ್ಲಿ ಬಿಜೆಪಿಯ ಎಂ ಎಲ್ ಎ ಟಿಕೆಟ್ ಕೊಡಿಸುವುದಾಗಿ ಗೋವಿಂದ ಪೂಜಾರಿ ಎಂಬವರಿಗೆ ದೋಖಾ ಮಾಡಿದ ಹಿನ್ನೆಲೆಯಲ್ಲಿ ಚೈತ್ರ ಬಂಧನ ಆಗಿದೆ.

ಉಡುಪಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರ ಅಪಾರ್ಟ್ಮೆಂಟ್ ಒಂದರಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಕುಳಿತಿದ್ದರು ಚೈತ್ರ ಕುಂದಾಪುರ. ಈ ವಿಷಯ ತಿಳಿದು ಬರುತ್ತಿದ್ದಂತೆ ಕಾಂಗ್ರೆಸ್ ಮಹಿಳಾ ನಾಯಕಿ, ವಕ್ತಾರೆ ಅಂಜುಮ್ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ ತನಿಖೆಗೆ ಹಾಜರಾಗುವಂತೆ ತಾಕೀತು ಮಾಡಿದೆ. ಚೈತ್ರ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ಇದೀಗ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಚೈತ್ರ ಕುಂದಾಪುರ ಜೊತೆ ಉಳಿದ ನಾಲ್ಕು ಜನರನ್ನು ಬಂಧಿಸಲಾಗಿದೆ. ಅಂಜು ಮತ್ತು ಚೈತ್ರ ಹಿಂದೆ ಮಾಧ್ಯಮ ಒಂದರಲ್ಲಿ ಜೊತೆಗೆ ಕೆಲಸ ಮಾಡಿದ್ದರು ಮತ್ತು ಹಲವಾರು ವರ್ಷಗಳಿಂದ ಸ್ನೇಹಿತರು ಎನ್ನುವ ಮಾಹಿತಿ ಇದೆ.

ಕಬಾಬು ಬೇಯಿಸುವವನನ್ನು RSS ಮುಖಂಡ ಎಂದು ತೋರಿಸಿ ಹಣ ಪೀಕಿದ ಚೈತ್ರ ಕುಂದಾಪುರ, ಬಗೆದಷ್ಟು ಬಿಟ್ಟುಕೊಳ್ಳುತ್ತಿದೆ ಬಣ್ಣ !!

ಕಾಸರಗೋಡು; ಒಂದೂವರೆ ತಿಂಗಳ ಮಗುವನ್ನು ಕೆಸರಿನಲ್ಲಿ ಹೂತು ಕೊಂದ ಹೆತ್ತ ತಾಯಿ; ಜಗತ್ತಿನಲ್ಲಿ ಇಂತಹ ಅಮ್ಮಂದಿರೂ ಇರ್ತಾರಾ?

Leave A Reply

Your email address will not be published.