ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ವೈರಲ್ ಆಗುತ್ತಿದೆ ಆಕೆಯ “ಆ ವಿಡಿಯೋ”

ಸುಬ್ರಮಣ್ಯ: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದೆ. ಆಕೆಯ ಒಂದೊಂದೇ ಮುಖವಾಡಗಳು ಕಳಚಿ ಬೀಳುತ್ತಿವೆ. ಹೀಗಿರುವಾಗಲೇ ಆಕೆಯ ವಿಡಿಯೋವೊಂದು ಇದೀಗ ಮತ್ತೆ ಸದ್ದು ಮಾಡುತ್ತಿದೆ.

ಅರೆ!ಅದ್ಯಾವುದಪ್ಪಾ ವೀಡಿಯೋ ಅಂತಾ ನೀವೆಲ್ಲಾ ಯೋಚಿಸುತ್ತಿರಬಹುದು. ಅದು 2018ರಲ್ಲಿ ನಡೆದ ಘಟನೆ. ಈ ಘಟನೆ ನಡೆದದ್ದು ಶ್ರೀಕ್ಷೇತ್ರ ಕುಕ್ಕೆ ಸುಬ್ರಮಣ್ಯದಲ್ಲಿ. ಅಷ್ಟಕ್ಕೂ ಆವತ್ತು ಆಗಿದ್ದೇನು ಗೊತ್ತಾ? .

ಹೌದು…ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ವಿಚಾರಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಹಾಗೂ ಹಿಂದೂ ನಾಯಕಿ ಚೈತ್ರಾ ಕುಂದಾಪುರ ನಡುವೆ ಭಿನ್ನಾಭಿಪ್ರಾಯವಿತ್ತು. ಕುಕ್ಕೆ ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರಕ್ಕಿಂತ ಸಂಪುಟ ನರಸಿಂಹ ಮಠದಲ್ಲಿ ನಡೆಯುವ ಪೂಜೆಯೇ ಶ್ರೇಷ್ಠ ಎಂಬುದು ಚೈತ್ರ ಕುಂದಾಪುರ ಅವರ ವಾದವಾಗಿತ್ತು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆಯೂ ಫೋನಿನಲ್ಲೇ ಮಾತಿನ ಚಕಮಕಿಯೂ ನಡೆದಿತ್ತು. ಬಳಿಕ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡ ಸುಬ್ರಹ್ಮಣ್ಯ ದಲ್ಲಿರುವ ಗುರುಪ್ರಸಾದ್ ಪಂಜ ಅವರ ಅಂಗಡಿಯ ಬಳಿ ಸೇರಿ ಅವರಿಗೆ ಹಲ್ಲೆ ನಡೆಸಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಚಾರ್ಜ್​ ನಡೆಸಿ,  ಗಲಾಟೆ ಸಂಬಂಧ ಚೈತ್ರಾ ಕುಂದಾಪುರ ಜೊತೆಗಿದ್ದ 6 ಜನರನ್ನು ಕುಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದರು. ಎರಡು ಗುಂಪುಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ದೂರು ದಾಖಲಾಗಿತ್ತು.ಚೈತ್ರಾ ಕುಂದಾಪುರ ವಿರುದ್ಧ ಸುಬ್ರಹ್ಮಣ್ಯದ ಜನರು ಸಿಟ್ಟಿಗೆದ್ದು, ಅವರು ನಮ್ಮ ಊರಿಗೆ ಬಂದು ಈ ರೀತಿ ದಾಂಧಲೆ ಮಾಡಿದ್ದಾರೆ. ಅವರನ್ನು ಬಂಧಿಸಬೇಕು ಎಂದು  ಪೊಲೀಸರಿಗೆ ದೂರು ನೀಡಿದ್ದರು. ಚೈತ್ರಾ ಕುಂದಾಪುರ ಅವರು ಗುರುಪ್ರಸಾದ್ ವಿರುದ್ಧ ಮಾನಭಂಗದ ದೂರು‌ ದಾಖಲಿಸಿದ್ದರೆ, ಗುರುಪ್ರಸಾದ್ ಪಂಜ ಅವರು ಚೈತ್ರಾ ಹಾಗೂ ಆಕೆಯ ಐವರು ಸಹಚರರ ವಿರುದ್ಧ ಕೊಲೆಯತ್ನ ದೂರು ದಾಖಲಿಸಿದ್ದರು. ಗಾಯಗೊಂಡಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಹಾಗೂ ಚೈತ್ರಾ ಕುಂದಾಪುರ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ವಿಡಿಯೋ ಹಾಗೂ ಗುರುಪ್ರಸಾದ್ ಪಂಜ ಅವರೊಂದಿಗೆ ಫೋನ್ ನಲ್ಲಿ ಚೈತ್ರಾ ಮಾತನಾಡುತ್ತಿರುವ ಆಡಿಯೋ ವೈರಲ್ ಆಗಿತ್ತು. ಇದೀಗ ಅದೇ ಘಟನೆಯ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ. ಅದು ಚೈತ್ರಾ ಪರ ಮಾತನಾಡಿದವರಿಗೆ ಮುಟ್ಟಿ ನೋಡುಕೊಳ್ಳುವಂತೆ ಮಾಡುತ್ತಿದೆ ಈ ವೀಡಿಯೋ.

ಕಬಾಬು ಬೇಯಿಸುವವನನ್ನು RSS ಮುಖಂಡ ಎಂದು ತೋರಿಸಿ ಹಣ ಪೀಕಿದ ಚೈತ್ರ ಕುಂದಾಪುರ, ಬಗೆದಷ್ಟು ಬಿಟ್ಟುಕೊಳ್ಳುತ್ತಿದೆ ಬಣ್ಣ !!

Leave A Reply

Your email address will not be published.