ಚೈತ್ರಾ ಕುಂದಾಪುರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾಜಿ ಸಿಎಂ ಬೊಮ್ಮಾಯಿ ಕೊಟ್ರು ಸ್ಪಷ್ಟನೆ

 

ಮಂಗಳೂರು; ಚೈತ್ರಾ ಕುಂದಾಪುರ ಬಂದನ ಪ್ರಕರಣ ಬಿಜೆಪಿ ಪಾಲಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಮುಖಭಂಗ ಅನ್ನೋದನ್ನು ಯಾರೂ ಕೂಡ ಬಿಡಿಸಿ ಹೇಳ ಬೇಕಾಗಿಲ್ಲ. ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ಒಂದಷ್ಟು ನಾಯಕರಲ್ಲಿ ಪುಕುಪುಕು ಶುರುವಾಗಿರೋದು ಕೂಡ ಸುಳ್ಳಲ್ಲ.

ಇದೆಲ್ಲದರ ಬೆನ್ನಲ್ಲೇ ಚೈತ್ರಾ ಕುಂದಾಪುರ ಸಿಸಿಬಿ ಕಚೇರಿ ಬಳಿ ಸಿಡಿಸಿದ ಪ್ರಕರಣದಲ್ಲಿ ಇನ್ನೂ ದೊಡ್ಡ ದೊಡ್ಡ ಹೆಸರುಗಳು ಹೊರ ಬರಲಿವೆ ಅನ್ನೋ ಬಾಂಬ್ ಯಾರಿಗೆಲ್ಲಾ ಏಟು ಕೊಡುತ್ತೆ ಅನ್ನೋದು ಕುತೂಹಲ ಕೆರಳಿಸಿದೆ. ಹೀಗಿರುವಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ‌, ಕೇಸ್ ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ, ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಿ ಯಾರೇ ಇದ್ದರೂ ಬಂಧನ ಆಗಲಿ ಎಂದು ಹೇಳಿದ್ದಾರೆ.ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಹಣ ಪಡೆದಿರುವುದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿರುವ ಬೊಮ್ಮಾಯಿ‌, ಬಿಜೆಪಿಗೆ ಇದರಲ್ಲಿ ಯಾವುದೇ ಸಂಬಂಧ ಇಲ್ಲ ಎನ್ನುವುದು ಸ್ಪಷ್ಟ ಬಂದಿದ್ದಾರೆ.

ಅಲ್ಲದೇ, ದೊಡ್ಡ ದೊಡ್ಡ ಹೆಸರುಗಳನ್ನು ಅಪರಾಧಿ ಸ್ಥಾನದಲ್ಲಿ ಇದ್ದವರು ಹೇಳುತ್ತಾರೆ, ಆದರೆ ತನಿಖೆ ಆಗಿ ಅದರ ಸತ್ಯಾಸತ್ಯತೆ ಹೊರಗೆ ಬರಲಿ ಎಂದು ಬಸವರಾಜ ಬೊಮ್ಮಾಯಿ‌ ಎಂದಿದ್ದಾರೆ.

Leave A Reply

Your email address will not be published.