ಮಗಳ ಮೇಲಿನ ಆರೋಪದ ಬಗ್ಗೆ ಚೈತ್ರಾ ಕುಂದಾಪುರ ತಾಯಿ ಹೇಳಿದ್ದೇನು?

ಉಡುಪಿ;  5 ಕೋಟಿ ಡೀಲ್ ಮಾಡಿ ತಗಲಾಕೊಂಡಿರುವ ಚೈತ್ರಾಳನ್ನು ಸಿಸಿಬಿ ಪೊಲೀಸರು 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

ಹೀಗಿರುವಾಗಲೇ ಮಗಳ ಬಂಧನದ ಬಗ್ಗೆ ಚೈತ್ರಾ ಕುಂದಾಪುರಳ ತಾಯಿ ರೋಹಿಣಿ ಮೌನ ಮುರಿದಿದ್ದಾರೆ. ಮಗಳನ್ನು ಈ ಪ್ರಕರಣದಲ್ಲಿ ಬಳಸಿಕೊಳ್ಳಲಾಗಿದೆ. ಆಕೆ ಖಂಡಿತವಾಗಿಯೂ ಆ ರೀತಿ ಮಾಡುವವಳಲ್ಲ. ಆಕೆಯನ್ನು ಬಳಸಿಕೊಂಡು ಈ ಸ್ಥಿತಿಗೆ ತರಲಾಗಿದೆ ಎಂದು ಹೇಳಿದ್ದಾರೆ.

ಮಗಳನ್ನ ಪೊಲೀಸರು ವಶಕ್ಕೆ ಪಡೆದ ದಿನವೇ ಪೊಲೀಸರು ಕರೆ ಮಾಡಿದ್ದರು. ಮಗಳನ್ನ ವಶಕ್ಕೆ ಪಡೆದ ಮಾಹಿತಿ ಜೊತೆಗೆ ಮಗಳೊಂದಿಗೆ ಫೋನ್​ನಲ್ಲೇ ಮಾತನಾಡಿಸಿದ್ದಾರೆ. ಮಗಳು ನನಗೆ ಧೈರ್ಯದಿಂದ ಇರುವಂತೆ ಹೇಳಿದ್ದಾಳೆ ಎಂದು ಅವರು ಹೇಳಿದ್ದಾರೆ.

 

ಇನ್ನು ಮಗಳ ಸ್ಥಿತಿ ಕಂಡು ಬಹಳ ಬೇಸರ ಆಗುತ್ತೆ ತನ್ನ ಕೈಯಿಂದ ಹಣ ಹೋದರೂ ಪರವಾಗಿಲ್ಲ ಬೇರೊಬ್ಬರ ಹಣಕ್ಕೆ ಆಸೆ ಪಟ್ಟವಳಲ್ಲ ನನ್ನ ಮಗಳು. ಏನೂ ಮಾಡದಿರುವ ತಪ್ಪಿಗೆ ನನ್ನ ಮಗಳು ಶಿಕ್ಷೆ ಅನುಭವಿಸುವಂತಾಗಿದೆ. ನಮಗೆ ಆಕೆ ಯಾವ ಹೊರೆಯನ್ನೂ ಹಾಕುತ್ತಿರಲಿಲ್ಲ. ಎಲ್ಲವನ್ನೂ ಆಕೆಯೇ ನಿಭಾಯಿಸುತ್ತಿದ್ದಳು ಎಂದು ಹೇಳಿದ್ದಾರೆ.

ಚೈತ್ರಾ ಮೂಲತಃ ಕುಂದಾಪುರದವಳಾಗಿದ್ದು, ಬಡ ಕುಟುಂಬದಲ್ಲಿ ಹುಟ್ಟಿದ ಈಕೆಯ  ತಂದೆ ತಾಯಿ ಹೈನುಗಾರಿಕೆ ಮಾಡಿಕೊಂಡಿದ್ದಾರೆ. ಚೈತ್ರ ಕುಂದಾಪುರ ತನ್ನ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಕುಂದಾಪುರದಲ್ಲಿಯೇ ಮುಗಿಸಿ, ಬಳಿಕ ಪದವಿ ಮತ್ತು ಸ್ನಾತಕೊತ್ತರ ಪದವಿಯನ್ನು ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದ್ದಳು. ಕಾಲೇಜು ದಿನಗಳಲ್ಲಿಯೇ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಗಮನ ಸೆಳೆದಿದ್ದ ಈಕೆ ಮಾತನ್ನೇ ಬಂಡವಾಳವಾಗಿಸಿಕೊಂಡು ಪ್ರಖರ ವಾಗ್ಮಿಯಾಗಿ ಗುರುತಿಸಿಕೊಂಡಿದ್ದಳು.

Leave A Reply

Your email address will not be published.