ಬಗೆದಷ್ಟು ಆಳವಾಗುತ್ತಿದೆ ಚೈತ್ರಾ ಡೀಲ್ ಪ್ರಕರಣ; ಸಿಸಿಬಿ ಬಳಿ ಚೈತ್ರಾ ಕೊಟ್ಟ ಸ್ಫೋಟಕ ಹೇಳಿಕೆ ಏನು – ಯಾರವರು ದೊಡ್ಡವರು, ಏನದು ಇಂದಿರಾ ಕ್ಯಾಂಟೀನ್ ಬಿಲ್ ?!

ಬೆಂಗಳೂರು: 5 ಕೋಟಿ ಡೀಲ್ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ (Chaitra Kundapura) ಅರೆಸ್ಟ್ ಆಗುತ್ತಿದ್ದಂತೆ ಈ ಪ್ರಕರಣ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಈಕೆ ಸಾಮಾನ್ಯ ಕಿಲಾಡಿ ಅಲ್ಲ ಅನ್ನೋದು ಆಕೆಯ ಪ್ಲ್ಯಾನ್ ನಿಂದಲೇ ಬಹಿರಂಗವಾಗಿದೆ.

ಸದ್ಯ ಸಿಸಿಬಿ ಪೊಲೀಸರು ಚೈತ್ರಾಳನ್ನು 10 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ಚೈತ್ರಾಳನ್ನು ಅಲ್ಲಿಂದಲೇ ಇಂದು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆ ತರಲಾಗಿತ್ತು. ಈ ವೇಳೆ ಚೈತ್ರಾ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾಳೆ. ಹಿರೇ ಹಡಗಲಿಯ ಹಾಲು ಮಠದ ಅಭಿನವ ಹಾಲಶ್ರೀ ಅವರನ್ನು ಬಂಧಿಸಿದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ ಎಂದಿದ್ದಾಳೆ. ಅಲ್ಲದೇ ಪ್ರಕರಣದಲ್ಲಿ ಭಾಗಿಯಾದ ದೊಡ್ಡ ದೊಡ್ಡ ಹೆಸರುಗಳು ಗೊತ್ತಾಗಲಿವೆ ಎಂದು ಹೇಳಿದ್ದಾಳೆ. ಹಾಗಾದ್ರೆ ಈ ಪ್ರಕರಣದಲ್ಲಿ ಯಾರಿದ್ದಾರೆ ದೊಡ್ಡವರು, ದೊಡ್ಡವರ ಹೆಸರು ಹೊರಗೆ ಬರುತ್ತಾ ? ಎನ್ನುವ ಪ್ರಶ್ನೆ ಎದುರಾಗಿದೆ.

ಸದ್ಯ ಚೈತ್ರಾ ಕುಂದಾಪುರ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ. ಪ್ರಕರಣದಲ್ಲಿ ಇನ್ನು ದೊಡ್ಡ ದೊಡ್ಡ ಕೈಗಳು ಭಾಗಿಯಾಗಿರೋದು ಆಕೆಯ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ. ಹಾಗಾಗಿ ಒಂದಷ್ಟು ಮಂದಿಯ ಎದೆಯಲ್ಲಿ ನಡುಕ ಶುರುವಾಗಿರೋದಂತೂ ಪಕ್ಕಾ. ಅಷ್ಟೇ ಅಲ್ಲದೆ, ಆಕೆ ಇನ್ನೊಂದು ಸ್ಪೋಟಕ ಮಾಹಿತಿಯನ್ನು ಹಂಚಿ ಕೊಂಡಿದ್ದಾಳೆ ಇಂದಿರಾ ಕ್ಯಾಂಟೀನ್ ಬಿಲ್ ರಿಲೀಸ್ ಮಾಡಿಲ್ಲ ಆ ಕಾರಣದಿಂದ ನನ್ನನ್ನು ಈ ಕೇಸಿನಲ್ಲಿ ಫಿಟ್ ಮಾಡಿದ್ದಾರೆ ಎಂದು ಚೈತ್ರ ಕುಂದಾಪುರ ಹೇಳಿಕೆ ನೀಡಿದ್ದಾಳೆ. ಈ ಹೇಳಿಕೆ ಇದೀಗ ಮಹತ್ವ ಪಡೆದುಕೊಂಡು ಹೊಸ ಹೊಸ ಚರ್ಚೆ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ.

Leave A Reply

Your email address will not be published.