ಫೇಸ್ ಬುಕ್ ಲೈವ್’ಗೆ ಬಂದು ನದಿಗೆ ಹಾರಿದ, ಹುಡುಗಿಯ ಬ್ಲಾಕ್ ಮೇಲ್’ಗೆ ವಿವಾಹಿತ ಆತ್ಮಹತ್ಯೆ !

ಅತ್ಯಾಚಾರ ಎಸಗಿದನೆಂದು ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರೇಯಸಿಯ ಬೆದರಿಕೆಗೆ ನೊಂದು ಪ್ರಿಯಕರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆದರೆ ಆತ ಸಾಯುವಾಗ ಫೇಸ್ ಬುಕ್ ಗೆ ಲೈವ್ ಆಗಿ ಬಂದು ತನ್ನ ನೋವು ತೋಡಿಕೊಂಡು ಆತ್ಮಹತ್ಯೆ ಮಾಡಿದ್ದಾನೆ.

ಗೆಳತಿ ಅತ್ಯಾಚಾರ ಆರೋಪ ಮಾಡಿದಲೆಂದು ಪ್ರಿಯಕರನೊಬ್ಬ ಫೇಸ್ಬುಕ್ ಲಿವೆಗೆ ಬಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಎಂಬಲ್ಲಿ ನಡೆದಿದೆ.
ಮನೀಷ್ (38 ವ) ಎಂಬವನಿಗೆ ಈಗಾಗಲೆ ಮದ್ವೆಯಾಗಿತ್ತು. ವಿವಾಹಿತನಾಗಿದ್ದರೂ ಆತ ಮತ್ತೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಸ್ವಲ್ಪ ದಿನ ಕಳೆದ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದನೆಂದು ಆ ಯುವತಿ ಹಾಗೂ ಆಕೆಯ ಮನೆಯವರು ಅವನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು. ಇದರಿಂದ ಮನನೊಂದ ಮನೀಷ್ ಸೆಪ್ಟೆಂಬರ್ 10 ರಂದು ಫೇಸ್ಬುಕ್ ಲೈವ್ ಗೆ ಬಂದು ತನ್ನ ಗೆಳತಿ ಹಾಗೂ ಆಕೆಯ ಮನೆಯವರು ಸೇರಿ ತನ್ನ ಮೇಲೆ ಅತ್ಯಾಚಾರ ಆರೋಪ ಮಾಡುತ್ತಿದ್ದಾರೆಂದು ಆರೋಪಿಸಿದ್ದಾನೆ. ಹಾಗೂ ಅವರ ಕುಟುಂಬದವರು 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಮತ್ತು ನೀಡದಿದ್ದಲ್ಲಿ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆತ ಹೇಳಿದ್ದಾನೆ.
ಆದ್ರೆ, ಯುವತಿ ಮನೆಯವರು ತನ್ನ ಮಗಳು ಸೆಪ್ಟೆಂಬರ್ 6 ರಂದು ನಾಪತ್ತೆಯಾಗಿದ್ದಾಳೆ, ಮನೀಷ್ ಹಾಗೂ ತನ್ನ ಮಗಳು ಓಡಿಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೀಗ ಮೂವರು ಮಕ್ಕಳ ತಂದೆಯಾಗಿರುವ ಮನೀಷ್, ಕಿರುಕುಳ ತಾಳಲಾರದೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೀಷ್ ಸಾಯುವ ಮುನ್ನ ಲೈವ್ ನ ಬಂದು ತಾನು ಅವಳ ಜೊತೆ ಲೈಂಗಿಕ ಸಂಪರ್ಕ ಹೊಂದಿಲ್ಲ ಎಂದು ಹೇಳಿದ್ದಾನೆ. ಮತ್ತು ತನ್ನ ಮೇಲೆ ಅತ್ಯಾಚಾರ ಕೇಸ್ ಹಾಕುವ ಬೆದರಿಕೆ ಹಾಕಿದ್ದು, ಅದರಿಂದ ಬೇಸತ್ತು ಆತ ಲೈವ್ ಆಗಿ ನದಿಗೆ ಹಾರಿದ್ದಾನೆ. ದುರದೃಷ್ಟವಶಾತ್ ಆತ ಈಗ ಲೋಕ ತ್ಯಜಿಸಿದ್ದಾನೆ.
ಇದೀಗ ಮೃತ ಮನೀಷ್ ಶವವನ್ನು ನದಿಯಿಂದ ವಶಪಡಿಸಿಕೊಂಡಿದ್ದು, ನಾಗಪುರದ ಪೊಲೀಸರು ಈ ಪ್ರಕರಣದಲ್ಲಿ ನಾಲ್ಕು ಜನರನ್ನು ವಶಪಡಿಸಿಕೊಂಡಿದ್ದಾರೆ.

Leave A Reply

Your email address will not be published.