ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬೆನ್ನಲ್ಲೇ ಬಯಲಾಯ್ತು ಮತ್ತೊಂದು ಪ್ರಕರಣ: ಅಮಿತಾ ಶಾ ಹೆಸರಲ್ಲಿ ಮತ್ತೋರ್ವ ಬಿಜೆಪಿ ಟಿಕೆಟ್ ಆಕಾಂಕ್ಷಿಗೆ ಪಂಗನಾಮ

ಕೊಪ್ಪಳ : ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬಯಲಾಗಿದೆ. ಮತ್ತೋರ್ವ ಬಿಜೆಪಿ ಟಿಕೆಟ್ ಆಕಾಂಕ್ಷಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಅಮಿತ್ ಶಾ ಹೆಸರಲ್ಲಿ ಪಂಗನಾಮ ಹಾಕಲಾಗಿದೆ.

ಕನಕಗಿರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿ‌ ತಿಮ್ಮಾರೆಡ್ಡಿ ಗೌಡ ಗಿಲ್ಲೆಸೂಗುರ್ ವಂಚನೆಗೆ ಒಳಗಾದವರು. ದಿಲ್ಲಿಯ ವಂಚಕರ ಜಾಲವೊಂದು ತಮಗೆ ಕೇಂದ್ರ ಸಚಿವ ಅಮಿತ್ ಶಾ ಪರಿಚಯ ಇದ್ದಾ 21 ಲಕ್ಷ ರೂಪಾಯಿ ಲೂಟಿ ಮಾಡಿದ್ದಾರೆ. ಚೈತ್ರಾ ಕುಂದಾಪುರ ಪ್ರಕರಣ ಹೊರ ಬರುತ್ತಿದ್ದಂತೆ  ತಿಮ್ಮಾರೆಡ್ಡಿ ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ಭಾರಿ ಪ್ರಯತ್ನ ಮಾಡಿದ್ದ ಜಿ‌ ತಿಮ್ಮಾರೆಡ್ಡಿ ಗೌಡ ಗಿಲ್ಲೆಸೂಗುರ್ ಅವರು ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಬಿಜೆಪಿ ಟಿಕೆಟ್ ಗಾಗಿ ಭಾರಿ ಪೈಪೋಟಿ ಮಾಡಿದ್ದ ತಿಮ್ಮಾರೆಡ್ಡಿ ಗೆ ಟಿಕೆಟ್ ಕೊಡಿಸುತ್ತೆವೆಂದು ಮೂವರು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.1. ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿದ್ದೇವೆ, ಅದರಲ್ಲಿ ನಿಮ್ಮ ಹೆಸರು ಮುಂಚೂಣಿಗೆ ತರುತ್ತೇವೆ ಎಂದು ವಂಚಕರು ಯಮಾರಿಸಿದ್ದಾರೆ. ತಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥನೆಂದು ಪರಿಚಯಿಸಿಕೊಂಡಿದ್ದ ವಿಶಾಲ್ ನಾಗ್ ನನ್ನು ನಂಬಿ ವಿಶಾಲ್ ಬ್ಯಾಂಕ್ ಖಾತೆಗೆ 19 ಲಕ್ಷ ರೂಪಾಯಿ ನೀಡಿದ್ದಾರೆ.

ತಿಮ್ಮಾರೆಡ್ಡಿ ಪತ್ನಿಗೆ ಕೊನೆಗೆ ಟಿಕೆಟ್ ಸಿಗದೇ ಹಣವೂ ವಾಪಸ್ ಬಾರದ ಹಿನ್ನಲೆ ದೂರು ನೀಡಿದ್ದಾರೆ.ನನ್ನ ರೀತಿಯೇ ಬಹಳ ಜನರಿಗೆ ಮೋಸ ಮಾಡಿದ್ದಾನೆನ್ನುತ್ತಿರುವ ತಿಮ್ಮಾರೆಡ್ಡಿ, ಬಿಜೆಪಿ ಟಿಕೆಟ್ ಗಾಗಿ ರಾಜ್ಯದಲ್ಲಿ ಹಲವರು ಕೋಟ್ಯಾಂತರ ಹಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.ಇದೀಗ ಇಂತಹದ್ದೇ ಇನ್ನಷ್ಟು ಪ್ರಕರಣಗಳು  ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

 

Leave A Reply

Your email address will not be published.