ಉದ್ದ ಕೂದಲಿನ ಮೂಲಕ ವಿಶ್ವ ದಾಖಲೆ ಮಾಡಿದ 15ರ ಪೋರ; ಈತನ ಕೇಶದ ಉದ್ದ ಕೇಳಿದ್ರೆ ಹೆಣ್ಮಕ್ಕಳು ಸುಸ್ತಾಗಿ ಬೀಳೋದು ಪಕ್ಕಾ…

ಉತ್ತರಪ್ರದೇಶ:  ಉದ್ದ ಕೂದಲು (Long Hair)  ಬೇಕು ಅಂತಾ ಬಹುತೇಕ ಹೆಣ್ಮಕ್ಕಳು ಬಯಸ್ತಾರೆ. ಆದರೆ ಅದೆಷ್ಟೋ ಮಂದಿ ಅಯ್ಯೋ!  ಯಾರಪ್ಪಾ ಅದನ್ನು ಮೈಯಿನ್ಟೈಟ್ ಮಾಡೋದು ಅಂತಾ ಕತ್ತರಿ ಹಾಕ್ತಾರೆ. ಆದರೆ ಇಲ್ಲೊಬ್ಬ ಬಾಲಕ ಹೆಣ್ಮಕ್ಕಳಿಗೆ ಸೆಡ್ಡು ಹೊಡೆದು ನಿಂತಿದ್ದಾನೆ.ಈತನ ಕೂದಲಿನ ಉದ್ದ ಕೇಳಿದ್ರೆ ಹೆಣ್ಣು ಮಕ್ಕಳು ಸುಸ್ತಾಗೋದು ಗ್ಯಾರಂಟಿ.

ಅಂದ್ಹಾಗೆ ಈ ಹುಡುಗನ ಹೆಸರು ಸಿಡಾಕ್‌  ಸಿಂಗ್ ಚಹಾಲ್ (Sidakdeep Singh Chahal). ಮೂಲತಃ ಉತ್ತರಪ್ರದೇಶವನು. ವಯಸ್ಸು 15. ಈತ ವಿಶ್ವದಲ್ಲಿ ಅತೀ ಉದ್ದದ ಕೂದಲಿನ ಮೂಲಕ ದಾಖಲೆ ಬರೆದಿದ್ದಾನೆ. ಈತನ  ಕೂದಲು ಬರೋಬ್ಬರಿ 146 ಸೆಂ.ಮೀ (4 ಅಡಿ 9.5 ಇಂಚು) ಉದ್ದವಿದೆ. ಅತಿ ಉದ್ದದ ಕೂದಲಿರುವ ಹುಡುಗ ಎಂದು ಖ್ಯಾತಿ ಗಳಿಸಿದ್ದಾನೆ.

 

ಇನ್ನು ಈತ ತನ್ನ ಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆಯುತ್ತಾನಂತೆ. ಪ್ರತಿ ಬಾರಿ ಕನಿಷ್ಠ ಒಂದು ಗಂಟೆ ಕೂದಲು ತೊಳೆಯಲು ಮತ್ತು ಒಣಗಿಸಲು ಮೀಸಲಿಡುತ್ತಾನಂಕೆ. ನನ್ನ ತಾಯಿಯ ಸಹಾಯವಿಲ್ಲದಿದ್ದರೆ ಕೂದಲುತೊಳೆಯಲು ಇಡೀ ದಿನ ಬೇಕಾಗುತ್ತದೆ ಎಂದು ಸಿಡಾಕ್ ಹೇಳಿದ್ದಾನೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ 2024 (Guinness world record 2024) ಪುಸ್ತಕದಲ್ಲಿ ಸಿಡಾಕ್ ಹೆಸರು ಸೇರ್ಪಡೆಯಾಗಲಿದೆ. ಹದಿಹರೆಯದವರಲ್ಲಿ ಇದುವರೆಗೆ ಉದ್ದನೆಯ ಕೂದಲು ಬೆಳೆಸಿದವರು ಭಾರತೀಯ ನೀಲಾಂಶಿ ಪಟೇಲ್. ಇದು 200 ಸೆಂ (6 ಅಡಿ 6 ಇಂಚು) ಆಗಿತ್ತು. ಅವಳು ಅಂತಿಮವಾಗಿ 2021ರಲ್ಲಿ ತನ್ನ ಕೂದಲನ್ನು ಕತ್ತರಿಸಿ, ಅದನ್ನು ವಸ್ತುಸಂಗ್ರಹಾಲಯಕ್ಕೆ ದಾನ ಮಾಡಿದಳು. ಜೀವಂತ ಮನುಷ್ಯನ ಮೇಲೆ ಉದ್ದನೆಯ ಕೂದಲಿನ ದಾಖಲೆಗೆ ಪ್ರಸ್ತುತ ಯಾವುದೇ ಹೋಲ್ಡರ್ ಇಲ್ಲ.ಸಿಡಾಕ್ ತನಗೆ 18 ವರ್ಷ ತುಂಬಿದ ನಂತರ ಪ್ರಶಸ್ತಿಯನ್ನು ಪಡೆಯಬೇಕಾಗಿದೆ.

ಸಿಡಾಕ್ ತನ್ನ ಕೂದಲನ್ನು ಒಂದು ನಂಬಿಕೆಯ ಆಧಾರದ ಮೇಲೆ ಬೆಳೆಸುತ್ತಿದ್ದಾನೆ. ಏಕೆಂದರೆ ಅವನು ಸಿಖ್. ಧರ್ಮದ ಮೂಲ ತತ್ವಗಳಲ್ಲಿ ಒಂದಾದ ಕೂದಲನ್ನು ಎಂದಿಗೂ ಕತ್ತರಿಸಬಾರದು. ಏಕೆಂದರೆ ಅದು ದೇವರ ಕೊಡುಗೆಯಾಗಿದೆ ಎಂಬ ಮಾತನ್ನು ನಂಬುತ್ತಾನೆ. ಹೀಗಾಗಿ ಇವರು ಇಷ್ಟು ಉದ್ದ ಕೂದಲು ಬಿಡಲು ಸಾಧ್ಯವಾಗಿದೆ ಎಂದು ಹೇಳಿದ್ದಾನೆ.

 

Leave A Reply

Your email address will not be published.