ಬನ್ನಿ ಬನ್ನಿ ನಮ್ಮ ಹೋಟೆಲ್ ಗೆ ಎಂದು ಪ್ರೇಮಿಗಳನ್ನು ಕರೆಯುತ್ತಿದ್ದ ಜೋಡಿ; ಕರೆದು ಮಾಡುತ್ತಿದ್ದದ್ದು ಏನ್ ಗೊತ್ತಾ? ಶೆಟ್ಟಿ ಲಂಚ್ ಹೋಮ್ ಹೆಸರಲ್ಲಿ ನಡೆಯುತ್ತಿದ್ದ ಕೆಲಸ ಕೊನೆಗೂ ಬಯಲು

ಬೆಂಗಳೂರು; ದುಡಿದು ತಿನ್ಬೇಕು ಅನ್ನೋರಿಗಿಂತ ಸುಲಭವಾಗಿ ದುಡ್ಡು ಮಾಡ್ಬೇಕು ಗುರು ಅನ್ನೋರೇ ಹೆಚ್ಚು. ಹೀಗೆ ಸುಲಭವಾಗಿ ದುಡ್ಡು ಮಾಡಲು ಹೋಗಿ ಇಲ್ಲೊಂದು ಜೋಡಿ ಪೊಲೀಸರ ಬಲೆಗೆ ಬಿದ್ದಿದೆ.

ಅಂದ್ಹಾಗೆ ಈ ಖತರ್ನಾಕ್ ಜೋಡಿ ಶೆಟ್ಟಿ ಲಂಚ್ ಹೋಮ್ ಹೆಸರಲ್ಲಿ ಪ್ರೇಮಿಗಳನ್ನು ಟಾರ್ಗೆಟ್ ಮಾಡಿಕೊಂಡು ದುಡ್ಡು ಪೀಕುತಿತ್ತು. ನಯನಾ ಹಾಗೂ ಕಿರಣ್  ಎಂಬ ಜೋಡಿ ಬೆಂಗಳೂರಿನ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿರುವ ಶೆಟ್ಟಿ ಲಂಚ್ ಹೋಮ್ ಹೆಸರಿನ ಹೋಟೆಲ್ ನಲ್ಲಿ ಪ್ರೇಮಿಗಳಿಗೆ ರೂಮ್ ವ್ಯವಸ್ಥೆ ಮಾಡಿ ಕೊಡುತ್ತಿತ್ತು. ಪ್ರೇಮಿಗಳಿಗೆ ರೂಮ್ ವ್ಯವಸ್ಥೆ ಮಾಡಿಕೊಟ್ಟು ಅದೇ ರೂಂನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಖಾಸಗಿ ವಿಡಿಯೋ ಶೂಟ್ ಮಾಡಿ ಲಕ್ಷ ಲಕ್ಷಣ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಗೆ ಮಾಡುತ್ತಿದ್ದರು.

ಇದೇ ರೀತಿ ಜೋಡಿಯೊಂದಕ್ಕೆ ರೂಂ ವ್ಯವಸ್ಥೆ ಮಾಡಿದ್ದರು. ಅಲ್ಲಿ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ್ದರು. ಬಳಿಕ ನಯನಾ ಹಾಗೂ ಪಾರ್ಟರ್ ಕಿರಣ್ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು.ಒಂದು ಲಕ್ಷ ಹಣಕ್ಕೆ ನೀಡಬೇಕು. ಹಣ ಕೊಡದಿದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ. ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಕಿರಣ್ ಬೆದರಿಕೆ ಹಾಕಿದ್ದ.ನಂತರ ಅವರೇ ರೂಮ್ ಕೊಟ್ಟು ಅಶ್ಲೀಲವಾಗಿ ವಿಡಿಯೋ ಎಡಿಟ್ ಮಾಡಿ ಯುವತಿಗೆ ಆರೋಪಿ ಕಿರಣ್, ವಾಟ್ಸಪ್ ಮಾಡಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ.ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಸುತ್ತಿದ್ದ.ಇದರಿಂದ ಯುವತಿ ಹೆದರಿಕೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.ಇದೀಗ ಈ ದೂರಿನ ಆಧಾರ ಮೇಲೆ ಪೊಲೀಸರು ನಯನಾ ಹಾಗೂ ಕಿರಣ್ ನನ್ನು ಬಂಧಿಸಿದ್ದಾರೆ.

ಇನ್ನು ಪ್ರಕರಣದ ಬಗ್ಗೆ ಮಂಗಳೂರು ಶೆಟ್ಟಿ ಲಂಚ್ ಹೋಮ್  ಮಾಲೀಕರು ಸ್ಪಷ್ಟನೆ ನೀಡಿದ್ದು ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಶೆಟ್ಟಿ ಲಂಚ್ ಹೋಮ್ ಗೆ ಯಾರು ಪಾರ್ಟರ್ ಇಲ್ಲ. ಮಂಗಳೂರಿನ ಅಡ್ಯಾರ್ ಮತ್ತು ಹಂಪನಕಟ್ಟೆಯಲ್ಲಿ ಮಾತ್ರ ಅದು ಬಿಟ್ಟು ಬೇರೆ ಶಾಖೆಗಳಿಲ್ಲ ಎಂದಿದ್ದಾರೆ.

Leave A Reply

Your email address will not be published.