ಮಂಗಳೂರು; ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಗುಪ್ತಚರ ಇಲಾಖೆಯ ಸಿಬ್ಬಂದಿ ಹೃದಯಾಘಾತವಾಗಿ ಸಾವು

ಮಂಗಳೂರು; ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಗುಪ್ತಚರ ಇಲಾಖೆಯ ಸಿಬ್ಬಂದಿಯೊಬ್ಬರು ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಉರ್ವ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ನಡೆದಿದೆ.

ಉರ್ವಮಾರಿಗುಡಿ ನಿವಾಸಿ ರಾಜೇಶ್ ಬಿ.ಯು (45) ಮೃತ ದುರ್ದೈವಿ. ಇವರು ಇಂದು ಮಧ್ಯಾಹ್ನ ಉರ್ವ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ಕೆಲಸದಲ್ಲಿರುವಾಗಲೇ ರಾಜೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ರೆಸ್ಟ್ ರೂಂ ಗೆ ತೆರಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗಲೇ ರಾಜೇಶ್ ಕುಸಿದು ಬಿದ್ದಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ.

Leave A Reply

Your email address will not be published.