ನದಿಗೆ ಸ್ನಾನಕ್ಕೆ ಇಳಿದ ಯುವ ಸರ್ಕಾರಿ ವೈದ್ಯ ಸಾವು !

ಸ್ನಾನ ಮಾಡಲು ನದಿಗೆ ಇಳಿದಿದ್ದ ಸರ್ಕಾರಿ ವೈದ್ಯರೊಬ್ಬರು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ. 31 ವರ್ಷದ ಚಂದ್ರಶೇಖರ್ ಎಂಬವರೇ ಮೃತಪಟ್ಟ ದುರ್ದೈವಿ ವೈದ್ಯ. ಅವರು ಹೊಳೆ ನರಸೀಪುರ ತಾಲೂಕಿನ ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಚಂದ್ರಶೇಖರ್ ಅವರು ಹಲವು ವರ್ಷಗಳಿಂದ ಹೊಳೆನರಸೀಪುರ ತಾಲೂಕಿನ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಕರ್ತವ್ಯಕ್ಕೆ ಹೊರಡುವ ಮುನ್ನ ಅವರು ಹೇಮಾವತಿ ನದಿಗೆ ಪೂಜೆ ಸಲ್ಲಿಸಲು ತೆರಳಿದ್ದರು. ನಂತರ ಅವರು ಖೋನಾಪುರ ಐಲ್ಯಾಂಡಿನಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವವರಿದ್ದರು. ಪ್ರತಿವರ್ಷದಂತೆ ಈ ಸಲ ಕೂಡ ಸ್ನಾನಕ್ಕೆಂದು ನದಿಗೆ ಇಳಿದಿದ್ದಾರೆ. ಆ ಸಂದರ್ಭದಲ್ಲಿ ನೀರಿನ ಆಳ ಗೊತ್ತಾಗದೆ ನೀರಿನಲ್ಲಿ ಮುಳುಗಿ ಅವರು ಮೃತಪಟ್ಟಿದ್ದಾರೆ.

ಅವರು ಮೊಬೈಲ್ ಅನ್ನು ಕಾರಿನಲ್ಲಿ ಇಟ್ಟು ನದಿಯ ದಡದಲ್ಲಿ ಬಟ್ಟೆ ಬಿಚ್ಚಿ ನೀರಿಗೆ ಇಳಿದಿದ್ದರು. ಆನಂತರ ಅವರ ಪತ್ತೆ ಇಲ್ಲ. ಮನೆಯವರು ಅವರಿಗೆ ಕರೆ ಮಾಡಿದರು ಯಾರು ಕೂಡಾ ಕರೆ ಸ್ವೀಕರಿಸುತ್ತಿರಲಿಲ್ಲ. ಆಗ ಆತಂಕಗೊಂಡ ಕುಟುಂಬಸ್ಥರು ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಜಾಗ್ರತರಾದ ಪೊಲೀಸರು, ಗೊರೂರು ಪೋಲಿಸ್ ಠಾಣೆಗೆ ವಿಷಯ ಮುಟ್ಟಿಸಿದ್ದರು. ವೈದ್ಯರು ಹೋಗುವ ದಾರಿಯಲ್ಲಿ ಸಾಗಿ ಹುಡುಕಾಟ ನಡೆಸಿದಾಗ ರಸ್ತೆ ಬದಿಯಲ್ಲಿ ಕಾರು ಪತ್ತೆಯಾಗಿದೆ. ಅಲ್ಲದೆ ನದಿಯ ಬದಿಯಲ್ಲಿ ಕಳಚಿ ಇಟ್ಟ ಅವರ ಬಟ್ಟೆ ಕಂಡು ಬಂದಿದೆ. ಅನತಿ ದೂರದಲ್ಲಿ ನೀರಿನಲ್ಲಿ ವೈದ್ಯ ಚಂದ್ರಶೇಖರ್ ಅವರ ಶವ ಕೂಡ ತೇಲುತ್ತಿರುವುದು ಪತ್ತೆಯಾಗಿದೆ.

Leave A Reply

Your email address will not be published.