Chaitra kundapur arrest: ಚೈತ್ರಾ ಜೈಲು ಸೇರಿದ ಸಂಭ್ರಮಾಚರಣೆ: 101 ಈಡುಗಾಯಿ ಹೊಡೆದದ್ದು ಎಲ್ಲಿ ಮತ್ತು ಯಾಕೆ ?!

Chaitra kundapura frauding case chaitra kundapura arrested celebration in mavinakatte grama

Chaitra kundapur arrest: ಇಷ್ಟಾರ್ಥ ಸಿದ್ಧಿಗಾಗಿ ತೆಂಗಿನಕಾಯಿ ಒಡೆದು ದೇವರಿಗೆ ಈಡುಗಾಯಿ ಸಮರ್ಪಿಸುವ ಸಂಪ್ರದಾಯವಿದೆ. ಹೆಚ್ಚಿನ ಸಂದರ್ಭಗಳಲ್ಲಿ ಮಳೆ ಬರಲಿ, ಒಳ್ಳೆಯದಾಗಲಿ ಇಂತಹ ಶುಭ ಸೂಚಕ ವಿಷಯಗಳಿಗೆ 101 ಈಡು ಗಾಯಿ ಸಮರ್ಪಿಸುವುದು ಸಂಪ್ರದಾಯ. ಆದರೆ ಇದೀಗ ಚೈತ್ರ ಕುಂದಾಪುರ ಜೈಲು(Chaitra kundapur arrest) ಸೇರಿದ ‘ಸಂಭ್ರಮ’ ಕ್ಕಾಗಿ ಅಲ್ಲೊಂದು ಕಡೆ 101 ತೆಂಗಿನಕಾಯಿಯನ್ನು ಹೊಡೆದು ಸಂಭ್ರಮಿಸಿದ್ದಾರೆ. ಇನ್ನೊಬ್ಬರ ಸೋಲಿಗಾಗಿ ಸಂಭ್ರಮವೇ, ಎಂದು ನೀವು ಕೇಳಬಹುದು, ಅಂತದ್ದೇನಾಯ್ತು ಗೊತ್ತೇ ?

ಕಳೆದ ಅಕ್ಟೋಬರ್ 4ರಂದು ಚಿಕ್ಕಮಗಳೂರು ಜಿಲ್ಲೆಯ ಮಾವಿನಕಟ್ಟೆ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಒಂದರ ಮೇಲೆ ಚೈತ್ರ ಕುಂದಾಪುರ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪ ಕೇಳಿ ಬಂದಿತ್ತು. ಸಹಬಾಳ್ವೆಗಾಗಿ ಆಚರಣೆ ಮಾಡಲು ಬಂದಿದ್ದ ಹುಡುಗಿ ಹಿಂದುಗಳನ್ನು ಹಿಂದುಗಳ ಮಧ್ಯೆ ಎತ್ತಿ ಕಟ್ಟಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಳು ಎಂದು ಆರೋಪಿಸಲಾಗಿತ್ತು. ಅಂದು ಬೇಸರಗೊಂಡ ಊರಿನ ಜನರು ಆನೆ ವಿಘ್ನೇಶ್ವರ ಮತ್ತು ಬ್ರಹ್ಮ ಜಟಿಗೇಶ್ವರ ಸ್ವಾಮಿಗೆ ಮನವಿ ಮಾಡಿಕೊಂಡಿದ್ದರು. ಈ ವರ್ಷದೊಳಗೆ ಚೈತ್ರಾಗೆ ಶಿಕ್ಷೆ ನೀಡಿ ಎಂದು ಬೇಡಿಕೊಂಡಿದ್ದರು.

ಇದೀಗ ಒಂದು ವರ್ಷದ ಒಳಗೆ ಬೇಡಿದವರ ಬೇಡಿಕೆ ಈಡೇರಿದೆ. ಹಾಗಾಗಿ ಮಾವಿನಕಾಯಿ ಗ್ರಾಮದ ಜನರು ಸಂತಸ ವ್ಯಕ್ತಪಡಿಸಿ ಅಲ್ಲಿ 101 ಈಡು ಗಾಯಿ ಹೊಡೆದಿದ್ದಾರೆ. ಆಕೆ ಕಾಲಿಟ್ಟ ಜಾಗವನ್ನು ಶುಚಿಗೊಳಿಸಿದ್ದಾರೆ. ಮತ್ತು, ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮಿಗೆ ಕೃತಜ್ಞತೆ ಹೇಳಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಆಕೆ ಭಾಷಣ ಮಾಡಲು ವೇದಿಕೆ ಹತ್ತಿದ ಜಾಗದಲ್ಲಿಯೇ ಈಡು ಕಾಯಿ ಹೊಡೆದದ್ದು. ಇದೇ ರೀತಿ ಹಿಂದೂ ಭಕ್ತರುಗಳ ವಿರುದ್ಧವೇ ತಂದಿಟ್ಟಿದ್ದ ಪ್ರಸಂಗ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಕೂಡ ನಡೆದಿತ್ತು. ಅಲ್ಲಿ ಸರ್ಪ ಸಂಸ್ಕಾರ ನಡೆಸುವ ವಿಷಯದಲ್ಲಿ ಮಠ ಮತ್ತು ಮುಖ್ಯ ದೇವಸ್ಥಾನಗಳ ಮಧ್ಯೆ ಇದ್ದ ಭಿನ್ನಾಭಿಪ್ರಾಯದ ಮಧ್ಯೆ ಬಂದ ಚೈತ್ರ ಕುಂದಾಪುರ ಗದ್ದಲ ಮಾಡಿಕೊಂಡಿದ್ದಳು. ವಿನಾಕಾರಣ ನಾಲ್ವರು ಹುಡುಗರ ಮೇಲೆ ರೇಪ್ ಕೇಸ್ ಹಾಕಿದ್ದಳು. ಇದೀಗ ಎಲ್ಲವೂ ಬಡ್ಡಿ ಸಹಿತವಾಗಿ ಆಕೆಗೆ ವಾಪಸ್ ಸಿಗುತ್ತಿದೆ ಎನ್ನುತ್ತಿದ್ದಾರೆ ನೊಂದವರು.

ಇದೀಗ ಚೈತ್ರ ಕುಂದಾಪುರ ಇತರ ಆರೋಪಿಗಳ ಜೊತೆ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ. ಎಂಎಲ್ಎ ಟಿಕೆಟ್ ಕೊಡಿಸುವ ನೆಪದಲ್ಲಿ 5.5 ಕೋಟಿ ವಂಚಿಸಿದ ಆಧಾರದ ಮೇಲೆ ಚೈತ್ರಾ ಕುಂದಾಪುರಳನ್ನು ಪೊಲೀಸರು ಬಂಧಿಸಿದ್ದರು. ಚಿತ್ರಕಥೆ ಬರೆದು ನಟಿಸಿದಂತೆ, ವಿಭಿನ್ನ ರೀತಿಯಲ್ಲಿ ಚೈತ್ರಾ ವಂಚನೆ ಹೂಡಿದ್ದು ಈಗ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಈಗಾಗಲೇ ಪೊಲೀಸರು ಎರಡು ಕೋಟಿಗೂ ಅಧಿಕ ಹಣವನ್ನು ರಿಕವರಿ ಮಾಡಿದ್ದಾರೆ.

ಇದನ್ನೂ ಓದಿ: ಪೂರ್ತಿ ಫ್ರೀ ಕರೆಂಟ್, ಸ್ತ್ರೀಯರಿಗೆ ತಿಂಗಳಿಗೆ 2,500 ರೂ., 500 ರೂ.ಗೆ ಗ್ಯಾಸ್ ಸಿಲಿಂಡರ್ – ಕಾಂಗ್ರೆಸ್’ನಿಂದ ಹೊಸ ಘೋಷಣೆ, ಜನವರಿಯಿಂದ ಜಾರಿ !

Leave A Reply

Your email address will not be published.